Advertisement

ಗುಣಮಟ್ಟದ ಬೀಜ-ರಸಗೊಬ್ಬರ ಮಾರಾಟಕೆಕ್ಕೆ ಡಿಸಿ ಸೂಚನೆ

05:02 PM Sep 22, 2019 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಆತಂಕಪಡದ ರೀತಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವಂತೆ ಜಿಲ್ಲಾ ಧಿಕಾರಿ ವೈ. ಎಸ್‌. ಪಾಟೀಲ ರಸಗೊಬ್ಬರ-ಬೀಜ ಪೂರೈಕೆದಾರರು-ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀಜ-ರಸಗೊಬ್ಬರ ಮಾರಾಟಗಾರರು ಹಾಗೂ ಪೂರೈಕೆದಾರರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆ ಈಗಾಗಲೇ ಭೀಕರ ಬರ ಹಾಗೂ ನೆರ ಪರಿಸ್ಥಿತಿ ಎದುರಿಸಿದೆ. ಆದರೂ ಕೂಡ ರೈತರಿಗೆ ಸಕಾಲಕ್ಕೆ ಸ್ಪಂದಿಸುವ ಅಗತ್ಯವಿದ್ದು ರೈತರು ಬೀಜ ಮತ್ತು ರಸಗೊಬ್ಬರ ಪಡೆಯುವಲ್ಲಿ ಯಾವುದೇ ರೀತಿ ಆತಂಕ ಪಡದಂತೆ ಮುನ್ನೆಚ್ಚರಿಕೆ ವಹಿಸಲು ಮಾರಾಟಗಾರರು ಹಾಗೂ ಪೂರೈಕೆದಾರರಿಗೆ ಸೂಚಿಸಿದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಯಾವುದೇ ರೀತಿಯ ದೂರು ಬರದಂತೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಇಲಾಖೆ ಉತ್ತಮ ಕೆಲಸ ಮಾಡಿದೆ. ಹಿಂಗಾರು ಹಂಗಾಮಿನಲ್ಲಿಯೂ ಕೂಡ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೀಜ ಮತ್ತು ರಸಗೊಬ್ಬರ ಪೂರೈಕೆ ಹಾಗೂ ಬೇಡಿಕೆಗೆ ತಕ್ಕಂತೆ ಪೂರೈಸಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಟ್ಟದಲ್ಲಿಯೂ ಕೂಡ ಬೇಡಿಕೆಗೆ ತಕ್ಕಂತೆ ಯೂರಿಯಾ ರಸಗೊಬ್ಬರ ಪೂರೈಸಲು ಕೋರಲಾಗಿದೆ. ಯಾವುದೇ ರೀತಿಯ ಅಪಕೀರ್ತಿ ಬರದಂತೆ ರೈತರು ಬೀಜ ರಸಗೊಬ್ಬರ ಪಡೆಯುವಲ್ಲಿ ಆತಂಕಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

ಬೀಜ ಮತ್ತು ರಸಗೊಬ್ಬರ ಮಾರಾಟ ಹಾಗೂ ಪೂರೈಕೆ ಸಂದರ್ಭದಲ್ಲಿ ಯಾವುದೇ ರೀತಿ ಲೋಪಗಳಿಗೆ ಅವಕಾಶ ನೀಡಬಾರದು. ರೈತರಿಗೆ ಸಕಾಲಕ್ಕೆ ಸ್ಪಂದಿಸುವ ಮೂಲಕ ಅವರಿಗೆ ಸಿಗಬೇಕಾದ ತರದಲ್ಲಿ ಹಾಗೂ ಗುಣಮಟ್ಟದ ಬೀಜ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಒಂದು ತಪ್ಪು ಜಿಲ್ಲೆಯ ಅಪಕೀರ್ತಿಗೆ ಕಾರಣವಾಗುವ ಜೊತೆಗೆ ತಮ್ಮ ವ್ಯಾಪಾರ ವಹಿವಾಟಿನಲ್ಲಿಯೂ ಕೂಡ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ರಸಗೊಬ್ಬರ ಪೂರೈಸಬೇಕು. ಯಾವುದೇ ರೀತಿಯಲ್ಲಿ ರೈತರ ಮೇಲೆ ದಬ್ಟಾಳಿಕೆ ರೀತಿಯ ಕ್ರಮವಾಗದಂತೆ ಮುನ್ನೆಚ್ಚರಿಕೆ ಸಹ ವಹಿಸಲು ತಿಳಿಸಿದ ಅವರು, ಜಿಲ್ಲಾಡಳಿತ ಹಾಗೂ ಮಾರಾಟಗಾರರು ಕೂಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಅವರು, ಈಗಾಗಲೇ ಯೂರಿಯಾ ರಸಗೊಬ್ಬರ ಸಾಕಷ್ಟು ಪ್ರಮಾಣದ ಪೂರೈಕೆಗೆ ಸಂಬಂಧಪಟ್ಟ ಕಂಪನಿಗಳಿಗೆ ಕೋರಲಾಗಿದೆ. ರಸಗೊಬ್ಬರ ಬಂದ ತಕ್ಷಣ ಶೇ. 10 ಫೆಡರೇಶನ್‌ ನಲ್ಲಿ ದಾಸ್ತಾನು ಮಾಡಲಾಗುವುದು. ಸಂಬಂಧಪಟ್ಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಬೀಜ ರಸಗೊಬ್ಬರಗಳ ದರ ಪ್ರದರ್ಶನ ಹಾಗೂ ಬಿಲ್‌ ನೀಡಬೇಕು. ತನಿಖಾ ದಳಗಳಿಂದ ಸಹ ನಿರಂತರ ನಿಗಾ ಇಡಲಾಗುವುದೆಂದ ಅವರು, ಕಳಪೆ ಮಟ್ಟದ ಬೀಜ-ರಸಗೊಬ್ಬರ ಮಾರಾಟವಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಿದರು.

Advertisement

ಯೂರಿಯಾ ಕಂಪನಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಸಾಧ್ಯತೆ ಇದೆ. ಅದರಂತೆ ಸಧ್ಯದಲ್ಲಿ ರಾಜ್ಯ ಮಟ್ಟದಲ್ಲಿ ಕೃಷಿ ಜಂಟಿ ನಿರ್ದೇಶಕರ ಸಭೆ ಸಹ ನಡೆಯಲಿದ್ದು, ಈಗಾಗಲೇ ಬೀಜ ರಸಗೊಬ್ಬರ ಮಾರಾಟಗಾರರಿಂದ ಬಂದಿರುವ ಅನಿಸಿಕೆ ಮತ್ತು ಸಲಹೆಗಳ ಬಗ್ಗೆ ಸೂಕ್ತ ಪರಿಹಾರ ಈ ಸಭೆಯಲ್ಲಿ ಪಡೆಯಲಾಗುವುದು. ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಅತ್ಯುತ್ತಮವಾಗಿ ಬೀಜ-ರಸಗೊಬ್ಬರ ಮಾರಾಟ ಹಾಗೂ ನಿರ್ವಹಣೆಯಾಗಿದ್ದು, ಇದಕ್ಕಾಗಿ ಸ್ಪಂದಿಸಿದ ಎಲ್ಲ ಮಾರಾಟಗಾರರಿಗೆ ಹಾಗೂ ಪೂರೈಕೆದಾರರಿಗೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next