Advertisement

ವಿದ್ಯಾರ್ಥಿಗಳ ಸಾಗಾಣಿಕೆಯಲ್ಲಿ ನಿಯಮ ಮೀರಬೇಡಿ: ನಿಕ್ಕಂ

03:56 PM Jun 17, 2019 | Naveen |

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಹಾಗೂ ಖಾಸಗಿ ವಾಹನಗಳಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಈ ಕುರಿತು ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸಿದ್ದು, ನಿಯಮ ಮೀರಿದ್ದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ ಎಚ್ಚರಿಕೆ ನೀಡಿದರು.

Advertisement

ನಗರದ ಪೊಲೀಸ್‌ ಚಿಂತನ ಹಾಲ್ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಶಾಲಾ ಮುಖ್ಯಸ್ಥರ ಸಭೆ ನಡೆಸಿದ ಅವರು, ನಿಯಮ ಸಾರಿಗೆ ಮೀರಿದ ವಾಹನ ಚಾಲನೆ ಕುರಿತು ಪೊಲೀಸ್‌ ಇಲಾಖೆ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಶಾಲೆ ಹಾಗೂ ಖಾಸಗಿ ವಾಹನಗಳನ್ನು ಪರಿಶೀಲಿಸಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುವ ವಾಹನಗಳ ವಿಡಿಯೋ ಮತ್ತು ಛಾಯಾಚಿತ್ರ ಪಡೆಯುತ್ತಿದ್ದಾರೆ ಎಂದರು.

ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸಬಾರದು. ಶಾಲಾ ವಾಹನಗಳಲ್ಲಿ ಸಾರಿಗೆ ಇಲಾಖೆ ರೂಪಿಸಿರುವ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಸದಾ ಅನುಸರಿಸಬೇಕು. ಶಾಲಾ ವಾಹನದ ಸಾಂಕೇತಿಕ ಹಳದಿ ಬಣ್ಣವನ್ನು ಹಚ್ಚಬೇಕು. ಅಪಘಾತ ಸಂಭವಿಸಿದಲ್ಲಿ ತುರ್ತು ಹಾಗೂ ಪ್ರಥಮ ಚಿಕಿತ್ಸೆಗಾಗಿ ಕಡ್ಡಾಯವಾಗಿ ಔಷಧಿಗಳನ್ನು ಇರಿಸಬೇಕು. ಶಾಲಾ ಮುಖ್ಯಸ್ಥರು ಹಾಗು ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಮೀರಿ ಚಾಲನೆ ನಡೆಸಬಾರದು ಎಂದು ಎಚ್ಚರಿಸಿದರು.

ಶಾಲಾ ವಾಹನ ಚಲಾಯಿಸುವ ಚಾಲಕರಿಗೆ ಲೈಸೆನ್ಸ್‌ ಕಡ್ಡಾಯವಾಗಿ ಇರಬೇಕು. ಚಾಲಕರು ಸಂಚಾರಿ ನಿಯಮ ಪಾಲಿಸಬೇಕು. ಚಾಲಕರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಿತಿಗಿಂತ ವೇಗವಾಗಿ ವಾಹನವನ್ನು ಚಲಾಯಿಸಬಾರದರು ಎಂದು ಸೂಚನೆ ನೀಡಿದರು.

ಒಂದೊಮ್ಮೆ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವುದು ಕಂಡು ಬಂದರೆ ಪರವಾನಗಿ ರದ್ದುಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದಲ್ಲದೇ ವಾಹನಗಳ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರ ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ಸಾಗಿಸಬೇಕು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸಿದರೆ, ಮಿತಿ ಮೀರಿ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸದಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚಿಸಿದರು.

Advertisement

ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ಮಕ್ಕಳಿಗೆ ಸಮರ್ಪಕ ವಾಹನಗಳ ವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ವ್ಯವಸ್ಥೆಗಳನ್ನು ಕಾರ್ಯಯೋಜಿತಗೊಳಿಸುವಂತೆ ನೋಡಿಕೊಳ್ಳಬೇಕು, ತದನಂತರ ಲೋಪಗಳೆನಾದರೂ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ದ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು. ಮತ್ತೂಂದೆಡೆ ಸಂಚಾರಿ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲನೆ ಹಾಗೂ ವಾಹನಗಳ ಸ್ಥಿತಿಗತಿ ಕುರಿತು ಜಿಲ್ಲೆಯ ಪೊಲೀಸರು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ವಾಹನಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದರು. ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ ದಾಖಲೆಗಳು, ವಾಹದನ ಸ್ಥಿತಿಗತಿ ಸೇರಿದಂತೆ ಸಮಗ್ರ ಪರಿಶೀಲಿಸಿ, ಕೊರತೆ ಕಂಡು ವಾನಗಳ ಮಾಲೀಕರಿಗೆ ಹಾಗೂ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಜಯಪುರ ನಗರ ಮಾತ್ರವಲ್ಲದೇ ಜಿಲ್ಲೆಯ ಇಂಡಿ, ಬಸವನಬಾಗೇವಾಡಿ ವಿಭಾಗಗಳಲ್ಲಿ ಶಾಲೆಗಳ ಮುಖ್ಯಸ್ಥರೊಂದಿಗೆ ಮಕ್ಕಳನ್ನು ಸುರಕ್ಷಿತ ವಾಹನಗಳಲ್ಲಿ ಕರೆದೊಯ್ಯುವ ಕುರಿತು ಸಭೆ ನಡೆಸಿದರು. ಅಲ್ಲದೇ ಮಕ್ಕಳನ್ನು ಶಾಲಾಗೆ ಕರೆದೊಯ್ಯುವ ವಾಹನ ಹಾಗೂ ಖಾಸಗಿ ವಾಹನಗಳನ್ನು ತಪಾಸಣೆ ನಡೆಸಿದರು. ಅಲ್ಲದೇ ಪರಿಶೀಲನೆ ನಡೆಸಿದ ಎಲ್ಲ ವಾಹನಗಳ ವಿಡಿಯೋ ಚಿತ್ರೀಕರಣ ಮಾಡಿದರು. ಜಿಲ್ಲಾ ಪೊಲೀಸ್‌ ಹೆಚ್ಚುವರಿ ಅಧೀಕ್ಷಕ ಬಿ.ಎಸ್‌. ನೇಮಿಗೌಡ ಸೇರಿದಂತೆ ವಿವಿಧ ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next