Advertisement

ಗ್ರಾಪಂ ನೌಕರರಿಂದ ಬೃಹತ್‌ ರ್ಯಾಲಿ

01:03 PM Dec 06, 2019 | Naveen |

ವಿಜಯಪುರ: ಇ.ಎಫ್‌.ಎಂ.ಎಸ್‌. ನಿಂದ ಹೊರಗುಳಿದ ಸಿಬ್ಬಂದಿಗಳ ಮಾಹಿತಿ ಅಳವಡಿಸಲು ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಶೀಘ್ರವೇ ಈ ಕುರಿತು ಮಾಹಿತಿ ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹಲಗಿ ಬಾರಿಸುತ್ತ, ಕಹಳೆ ಊದುತ್ತ ಪ್ರತಿಭಟನೆ ಆರಂಭಿಸಿದ ಗ್ರಾಪಂ ನೌಕರರು, ನಗರದ ಗಾಂಧೀಜಿ  ವೃತ್ತ, ಬಸವೇಶ್ವರ ವೃತ್ತ, ಜಿಪಂ ಪ್ರವೇಶ ದ್ವಾರಕ್ಕೆ ತೆರಳಿ ಬಹಿರಂಗ ಸಮಾವೇಶ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂಗಳಿಗೆ ಇಎಫ್‌ಎಂಎಸ್‌ ಮೂಲಕ ವೇತನ ಪಾವತಿಸಲು ಸರ್ಕಾರ ಆದೇಶಿಸಿದ್ದು, ತಾಪಂ ಇಒಗಳ ಅನುಮೋದನೆಯಾಗಿದೆ. ಬಾಕಿ ಸಿಬ್ಬಂದಿ ಮಾಹಿತಿಯನ್ನು ಮತ್ತೂಮ್ಮೆ ಇಎಫ್‌ಎಂಎಸ್‌ನಲ್ಲಿ ಅಳವಡಿಸಬೇಕಿದೆ. ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ, ವಿಜಯಪುರ ತಾಲೂಕಿನ ಗ್ರಾಪಂಗಳಲ್ಲಿ ಕೆಲವು ದಾಖಲೆ ಲಭ್ಯ ಇಲ್ಲ ಎಂಬ ನೆಪ ಮುಂದೊಡ್ಡಿ ಸಿಬ್ಬಂದಿಗಳ ಮಾಹಿತಿಯನ್ನು ಲಾಗಿನ್‌ನಲ್ಲಿ ಅಳವಡಿಸದ ಕಾರಣ ಕಳೆದ ಎರಡು ತಿಂಗಳಿಂದ ಹಲವು ಗ್ರಾಪಂ ಸಿಬ್ಬಂದಿಗೆ ವೇತನವಾಗಿಲ್ಲ ಎಂದು ಆರೋಪಿಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಇಎಫ್‌ಎಂಎಸ್‌ನಿಂದ ಹೊರಗುಳಿದ ಸಿಬ್ಬಂದಿ ಮಾಹಿತಿ ಅಳವಡಿಸಲು ಪಿಡಿಒ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಇದರಲ್ಲಿ ಸಾಕಷ್ಟು ಕಸಗೂಡಿಸು, ದಲಿತ ಸಮುದಾಯದವರಿದ್ದಾರೆ.

ಹೀಗಾಗಿ 23-07-2019 ಪ್ರಕಾರ ಎಲ್ಲರಿಗೂ ಅನುಮೋದನೆ ನೀಡಬೇಕು. ಪಂಪ್‌ ಆಪರೇಟರ್‌, ಸಿಪಾಯಿ, ಕಸಗುಡಿಸುವವರು ಹಾಗೂ ಇತರೆ ಸಿಬ್ಬಂದಿಗಳಿಂದ ಖಾಲಿ ಇದ್ದ ಬಿಲ್‌ ಕಲೆಕ್ಟರ್‌ ಹುದ್ದೆ ಜೇಷ್ಠತೆ ಆಧಾರದ ಮೇಲೆ ಭರ್ತಿ ಮಾಡಬೇಕು. ಕಸ ವಸೂಲಿಯಲ್ಲಿ ಶೇ.40 ಹಾಗೂ 14ನೇ ಹಣಕಾಸಿನಲ್ಲಿ ಶೇ.10 ರಷ್ಟು ಹಣವನ್ನು ಸಿಬ್ಬಂದಿಧಿ ಬಾಕಿ ಉಳಿದಿರುವ ವೇತನ ನೀಡಲು ಕ್ರಮ ವಹಿಸಬೇಕು ಎಂದರು.

Advertisement

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಗ್ರಾಪಂ ಸಿಬ್ಬಂದಿ ಸೇವಾ ಪುಸ್ತಕ ತೆರೆಯಬೇಕು. ಗ್ರೇಡ್‌-1 ಕಾರ್ಯದರ್ಶಿಯಿಂದ ಪಿಡಿಒ ಆಗಿ ಬಡ್ತಿ, ಗ್ರೇಡ್‌-2 ಕಾರ್ಯದರ್ಶಿ ಗ್ರೇಡ್‌-1 ಕಾರ್ಯದರ್ಶಿಯಾಗಿ ಬಡ್ತಿ ಹಾಗೂ ಕರವಸೂಲಿಗಾರರಿಂದ ಗ್ರೇಡ್‌-2 ಕಾರ್ಯದರ್ಶಿ ಬಡ್ತಿ ಮಾಡುವುದು. ನಿವೃತ್ತಿ ಹೊಂದಿದ ಸಿಬ್ಬಂದಿಯವರಿಗೆ 15 ತಿಂಗಳ ನಿವೃತ್ತಿ ವೇತನ ಮತ್ತು ಬಾಕಿ ಉಳಿದ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಪ್ರಮುಖ ವಿಠ್ಠಲ ಹೊನಮೋರೆ ಮತ್ತು ಸಂಘಟನೆ ಪ್ರಮುಖರಾದ ರಾಜು ಜಾಧವ ಮಾತನಾಡಿದರು. ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಅಬ್ದುಲ್‌ ರಜಾಕ ತಮದಡ್ಡಿ, ಕುಮಾರ ರಾಠೊಡ, ಶೇಖು ಲಮಾಣಿ, ಶಿವಾನಂದ ನಾಲ್ಕಮಕ್ಕಳ, ಯಲ್ಲನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾದರ, ತುಕಾರಾಮ ಮಾರನೂರ, ಎಂ.ಕೆ. ಚಳ್ಳಗಿ, ಎಂ.ಎಸ್‌. ಕೊಂಡಗೂಳಿ, ನಾಗಪ್ಪ ತೆಲಸಂಗ, ಬಾಳು ದಶವಂತ, ಲಲಿತಾ ಎಂಟಮಾನ, ಸೋಮಯ್ಯ ಸಂಬಳ, ಹಳ್ಳಪ್ಪ ಸಾಲೋಟಗಿ, ರಾಮಚಂದ್ರ ಕುಂಬಾರ, ಅಜೀಜ ಮುದ್ದೇಬಿಹಾಳ, ರಾಜು ಬನ್ನಟ್ಟಿ, ಅಯ್ಯನಗೌಡ ಬಿರಾದಾರ, ಭೀಮಾಬಾಯಿ ಬಾಣಿ, ಗಂಗಾಧರ ಪಾಟೀಲ, ಸುವರ್ಣ ಸಾವಳಸಂಗ, ಮೇಲವ್ವ ಹರಿಜನ, ಮಲ್ಲಪ್ಪ ಹೊಸಕೇರಿ, ಶಂಕರ ಶಿಂಧೆ, ಲಾಲಹಮ್ಮದ ಶೇಖ, ಮಲಕಾರಿ ನರಳೆ, ಸಂಜೀವ ರಾಠೊಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next