Advertisement
ಬಬಲೇಶ್ವರ ತಾಲೂಕಿನ ಶೇಗುಣಶಿ ಗ್ರಾಮದಲ್ಲಿ ಮಳಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ನೂತನ ಕಟ್ಟಡ ಉದ್ಘಾಟಿಸಿ, ಕಳಸಾರೋಹಣ ನೇರವೇರಿಸಿ ಮಾತನಾಡಿದ ಅವರು, ಶಾಶ್ವತ ಬರ ಪೀಡಿತ ವಿಜಯಪುರ ಜಿಲ್ಲೆಯನ್ನು ನನಗೆ ನೀರಾವರಿ ಇಲಾಖೆ ಸಚಿವನಾಗಿ ದೊರೆತ ಅವಕಾಶ ಸದ್ಭಳಕೆ ಮಾಡಿಕೊಂಡಿದ್ದೇನೆ. ವಿವಿಧ ಯೋಜನೆಗಳಿಂದ ಜಿಲ್ಲೆಯ 16 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಿದ್ದಲ್ಲದೇ, 212 ಕೆರೆಗಳನ್ನು ತುಂಬಿಸುವ ನನ್ನ ಕನಸು ಸಾರ್ಥಕಗೊಳಿಸಿದ್ದೇನೆ ಎಂದರು.
Related Articles
Advertisement
ಶೇಗುಣಶಿಯಿಂದ ದುಡಿಹಾಳವರೆಗೆ 16 ಕಿ.ಮೀ. ರಸ್ತೆಯನ್ನು 17.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ದುಡಿಹಾಳದಿಂದ 218 ರಾಷ್ಟ್ರೀಯ ಹೆದ್ದಾರಿಯವರೆಗೆ 5 ಕಿ.ಮೀ. ರಸ್ತೆಯನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಒಟ್ಟು 21 ಕಿ.ಮೀ. ಈ ರಸ್ತೆಯನ್ನು ವಿಜಯಪುರ-ಗಲಗಲಿ ರಸ್ತೆಯಂತೆ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗುವದು ಎಂದರು.
ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಸಂಗಾಪುರ ಕಮರಿಮಠ ಸಿದ್ದಲಿಂಗ ಸ್ವಾಮಿಗಳು, ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಬಾಪುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಡಾ| ಕೆ.ಎಚ್. ಮುಂಬಾರೆಡ್ಡಿ, ಕೃಷ್ಣಪ್ಪ ದೇಸಾಯಿ ಅರ್ಜುಣಗಿ, ಕೆಎಂಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಸಂಗವ್ವ ಹೊಸಮನಿ, ಎಪಿಎಂಸಿ ನಿರ್ದೇಶಕಿ ಸಾರವ್ವ ಪೂಜಾರಿ, ಭೀಮಪ್ಪ ಶಿವಗೊಂಡ, ಭೀಮಣ್ಣ ಬಡಿಗೇರ, ಮಲ್ಲಪ್ಪ ಪೂಜಾರಿ, ಮುತ್ತಪ್ಪ ವಾಲೀಕಾರ, ಸಾಬು ಪೂಜಾರಿ, ಕಾಶೆಪ್ಪ ಪೂಜಾರಿ ಇದ್ದರು.