ವಿಜಯಪುರ: ತಮ್ಮ ಯುದ್ಧ ನೀತಿ ಹಾಗೂ ಅಮೋಘ ಶಸ್ತ್ರಾಸ್ತ್ರಗಳಿಂದಾಗಿ ವೈರಿಗಳ ಎದೆಯಲ್ಲಿ ಅದರಲ್ಲೂ ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಮಹಾರಾಣಾ ಪ್ರತಾಪಸಿಂಹ ಅವರು ಅಪ್ಪಟ ದೇಶಪ್ರೇಮಿ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಧಾನ ಕಾರ್ಯರ್ದರ್ಶಿ ಶಿವಾನಂದ ಬಡಿಗೇರ ಹೇಳಿದರು.
ರವಿವಾರ ನಗರದ ಮಹಾರಾಣಾ ಪ್ರತಾಪ ವೃತ್ತದಲ್ಲಿ ವಿಜಯಪುರ ರಜಪೂತ ಸೋಷಿಯಲ್ ಎಕನಾಮಿಕಲ್ ಕಲ್ಚರಲ್ ಎಕ್ಟಿವಿಟಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾರಾಣಾ ಪ್ರತಾಪಸಿಂಹ ಅವರ 479ನೇ ಜಂುುಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅಪರೂಪದ ವ್ಯಕ್ತಿತ್ವದ ಶ್ರೇಷ್ಠ ರಾಜ ಎಂದರೆ ಮಹಾರಾಣಾ ಪ್ರತಾಪಸಿಂಹ. ಅವರ ಯುದ್ಧನೀತಿ ಅಪರೂಪದ್ದಾಗಿತ್ತು. ಒಂದು ಕೈಯಲ್ಲಿ 15 ಕೆಜಿ ಭಾರದ ಖಡ್ಗ ಹಿಡಿದಿರುತ್ತಿದ್ದ ಅವರು, ಅಷ್ಟೇ ತೂಕದ ಮತ್ತೂಂದು ಖಡ್ಗ ಅವರ ಸೊಂಟದಲ್ಲಿ ಇರುತ್ತಿತ್ತು. 7 ಕೆ.ಜಿ. ಬರ್ಚಿ ಬೆನ್ನಲ್ಲಿ ಇದ್ದರೆ, 35 ಕೆಜಿ ಭಾರದ ಉಕ್ಕಿನ ಕವಚಗಳು ಮೈಮೇಲೆ ಧಾರಣ ಮಾಡುತ್ತಿದ್ದರು. ಈ ರಿತಿ ಯುದ್ಧ ಸನ್ನದ್ಧರಾಗಿ ಚೇತಕ ಎಂಬ ಕುದುರೆಂುುನ್ನು ಏರಿ ಂುುುದ್ಧಕ್ಕೆ ಹೊರಟರೆ ಮೊಘಲರ ಎದೆ ಢವ ಢವ ಎನ್ನುತ್ತಿತ್ತು ಎಂದು ಬಣ್ಣಿಸಿದರು.
ಮಹಾರಾಣಾ ಪ್ರತಾಪರವರ ಗುರಿ ಎಂದರೆ ಸನಾತನ ಹಿಂದೂ ಧರ್ಮ ರಕ್ಷಣೆ ಮಾಡುವುದು. ಬಲಿಷ್ಠ ಭಾರತ ಕಟ್ಟುವುದು ಮುಖ್ಯ ಧ್ಯೇಯವಾಗಿತ್ತು. ಆದರೆ ಇತಿಹಾಸಕಾರರು ಅಕ್ಬರ್ ದಿ ಗ್ರೇಟ್ ಎಂದು ಹೇಳುವ ಮೂಲಕ ದೇಶದ ನೈಜ ಇತಿಹಾಸವನ್ನು ಮುಚ್ಚಿಹಾಕುತ್ತಲೇ ಬಂದಿದ್ದು ವಿಪರ್ಯಾಸ. ಮಹಾರಾಣಾ ಪ್ರತಾಪ ಎಂದರೆ ಶಿವಾಜಿ ಮಹಾರಾಜರಿಗೆ ಆದರ್ಶ ಮತ್ತು ಚೈತನ್ಯ ನೀಡಿರುವ ವ್ಯಕ್ತಿಗಳು. ಇಂತಹ ಅಪರೂಪ ವ್ಯಕ್ತಿಗಳ ಬಗ್ಗೆ ಬಾಲ್ಯದಿಂದ ಮಕ್ಕಳಲ್ಲಿ ಇವರ ಇತಿಹಾಸವನ್ನು ಹೇಳುತ್ತ ದೇಶ ಭಕ್ತಿಂುುನ್ನು ಮತ್ತು ಸ್ವಂುುಂ ರಕ್ಷಣೆ ಚೈತನ್ಯ ತುಂಬಬೇಕು ಎಂದು ಹೇಳಿದರು.
ಪ್ರಾಸ್ತವಿಕ ಮಾತನಾಡಿದ ಸಮಾಜದ ಅಧ್ಯಕ್ಷ ಭೀಮಸಿಂಗ್ ರಜಪೂತ ಮಾತನಾಡಿ, ಮಹಾರಾಣಾ ಪ್ರತಾಪರವರ ದೇಶ ಭಕ್ತಿ ಮತ್ತು ಆರ್ದಶವನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಮಹಾರಾಣಾ ಪ್ರತಾಪರವರಂತೆ ನಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು. ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕು. ಬಲಿಷ್ಠ ಸಮಾಜ ಕಟ್ಟುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ಪರಶುರಾಮಸಿಂಗ್ ರಜಪೂತ, ಸಮಾಜದ ಉಪಾಧ್ಯಕ್ಷ ಜಂುುಸಿಂಗ್ ಹಲವಾಯಿ, ಅಜಿತಸಿಂಗ ಹಜೇರಿ, ಸಿದ್ದುಸಿಂಗ ರಜಪೂತ, ವಿನಂುುಸಿಂಗ ರಜಪೂತ, ಅಜಿತಸಿಂಗ್ ಹಜೇರಿ, ಪರಶುರಾಮ ರಜಪೂತ, ವಿನಂುುಸಿಂಗ್ ರಜಪೂತ, ಸಿದ್ದುಸಿಂಗ ರಜಪೂತ, ಸಂತೋಷ ಹಲವಾಯಿ, ರಾಜು ರಜಪೂತ, ನೆಹರು ರಜಪೂತ, ಸುರೇಶ ಕಂಪಲ್ಲಿ, ನಾರಾಂುುಣಸಿಂಗ್ ರಜಪೂತ, ಅಶೋಕಸಿಂಗ್ ರಜಪೂತ, ಸಂಜಂುುಸಿಂಗ್ ರಜಪೂತ ವೇದಿಕೆಯಲ್ಲಿದ್ದರು.
ಮಹಾರಾಣಾ ಪ್ರತಾಪ ವೃತ್ತದಲ್ಲಿ ಮಹಾರಾಣಾ ಪ್ರತಾಪರವರ ಭಾವ ಚಿತ್ರಕ್ಕೆ ಮಾಲಾರ್ಪಣೆ, ಧ್ವಜಾರೋಹಣ ನೆರವೇರಿಸಲಾಯಿತು.