Advertisement
ಮಂಗಳವಾರ ಮತದಾನದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನಗರಕ್ಕೆ ತರಲಾಗಿದ್ದು, ಅಥಣಿ ರಸ್ತೆಯಲ್ಲಿರುವ ಸೈನಿಕ ಶಾಲೆಯಲ್ಲಿ ಸಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಕಣ್ಗಾವಲಿನಲ್ಲಿ ಕಾಯ್ದಿರಿಸಲಾಗಿದೆ. ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಕಾರಣ ಕ್ಷೇತ್ರ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ. ಹೀಗಾಗಿ ಈ ಬಾರಿ ವಿಜಯಪುರ ಲೋಕಸಭೆ ಪ್ರತಿನಿಧಿಯಾಗಲು ಸ್ಪರ್ಧೆ ಯಲ್ಲಿ 12 ಅಭ್ಯರ್ಥಿಗಳು ಮತಪರೀಕ್ಷೆ ಎದುರಿಸಿದ್ದು, ಸಂಸತ್ ಪ್ರವೇಶಿಸುವವರು ಯಾರೂ ಎಂಬುದನ್ನು ತಿಳಿಯಲು ಮೇ 23ರವರೆಗೆ ಕಾಯಬೇಕಿದೆ.
Related Articles
Advertisement
ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,86,574 ಮತದಾರರಲ್ಲಿ 1,09,082 ಮತ ಚಲಾಯಿಸಿದ್ದರಿಂದ ಶೇ. 58.31 ಮತದಾನವಾಗಿತ್ತು. ಈ ಬಾರಿ 2,10,866 ಮತದಾರರಲ್ಲಿ 1,23,055 ಮತದಾರರು ಮತಚಲಾವಣೆ ಮಾಡಿದ್ದರಿಂದ ಶೇ. 58.36 ಮತದಾನವಾಗಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 7ನೇ ಸ್ಥಾನದಲ್ಲಿದೆ.
ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,83,101 ಮತದಾರರಲ್ಲಿ 1,17,312 ಮತದಾರರು ಮಾತ್ರವೇ ಮತದಾನ ಮಾಡಿದ್ದರಿಂದ ಶೇ. 64.01 ಮತದಾನವಾತ್ತು. ಈ ಬಾರಿ 2,04,850 ಮತದಾರರಲ್ಲಿ 1,35,252 ಮತದಾರರು ಮಾತ್ರ ಮತದಾನ ಮಾಡಿರುವುದರಿಂದ ಶೇ. 66.02 ಮತದಾನವಾಗಿದೆ. ಜಿಲ್ಲೆಯಲ್ಲೇ 8 ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನವಾದ ಎರಡನೇ ಸ್ಥಾನದಲ್ಲಿದೆ.
ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ 1,93,941 ಮತದಾರರಲ್ಲಿ 1,24,995 ಜನ ಮತದಾನದಲ್ಲಿ ಭಾಗವಹಿಸಿದ್ದು, ಶೇ. 64.49 ಮತದಾನವಾಗಿತ್ತು. ಈ ಬಾರಿ 2,06,738 ಮತದಾರರಲ್ಲಿ 1,39,192 ಮತದಾರರು ಮಾತ್ರ ಮತದಾನ ಮಾಡಿರುವ ಕಾರಣ ಶೇ. 67.33 ಮತದಾನವಾಗಿದ್ದು, ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನವಾದ ಕ್ಷೇತ್ರ ಎಂಬ ಹಿರಿಮೆಯೊಂದಿಗೆ ಮೊದಲ ಸ್ಥಾನದಲ್ಲಿದೆ.
ವಿಜಯಪುರ ನಗರ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 2,34,669 ಮತದಾರರಲ್ಲಿ 1,25,006 ಮತದಾರರು ಮತ ಚಲಾಯಿಸಿದ್ದು, ಶೇ. 53.41 ಮತದಾನವಾಗಿತ್ತು. ಈ ಬಾರಿ ಒಟ್ಟು 2,48,843 ಮತದಾರರಲ್ಲಿ 1,41,569 ಮತದಾರರು ಮಾತ್ರ ಮತದಾನ ಮಾಡಿದ್ದರಿಂದ ಶೇ. 56.89 ಮತದಾನವಾಗಿದೆ. ಇದರೊಂದಿಗೆ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲೇ ಕೊನೆ ಸ್ಥಾನ ಸಂಪಾದಿಸಿದೆ.
ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ ಒಟ್ಟು 2,36,474 ಮತದಾರರಲ್ಲಿ 1,39,958 ಮತದಾರರು ಮಾತ್ರ ಮತದಾನದಲ್ಲಿ ಭಾಗವಹಿಸಿದ್ದರಿಂದ ಶೇ. 59.11 ಮತದಾನವಾಗಿತ್ತು. ಈ ಬಾರಿ ಒಟ್ಟು 2,56,845 ಮತದಾರರಲ್ಲಿ 1,63,613 ಮತದಾನ ಆಗಿದ್ದು, ಜಿಲ್ಲೆ 8 ವಿಧಾನಸಭೆ ಕ್ಷೇತ್ರಗಳಲ್ಲಿ 3ನೇ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಮಿತ್ರಪಕ್ಷಗಳ ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ ಅವರ ಪತಿ ದೇವಾನಂದ ಚವ್ಹಾಣ ಶಾಸಕ ಎಂಬುದು ಗಮನೀಯ.
ಇಂಡಿ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 7,08,092 ಮತದಾರರಲ್ಲಿ 1,25,661 ಮತದಾರರು ಮತ ಚಲಾಯಿಸಿದ್ದರಿಂದ ಶೇ. 60.41 ಮತದಾನವಾಗಿತ್ತು. ಈ ಬಾರಿ 2,33,849 ಮತದಾರರಲ್ಲಿ 1,46,412 ಮತದಾರರು ಮತದಾನ ಮಾಡಿದ್ದರಿಂದ ಶೇ. 62.61 ಮತದಾನದೊಂದಿಗೆ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 4ನೇ ಸ್ಥಾನದಲ್ಲಿದೆ.
ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ 2014ರಲ್ಲಿ 1,94,970 ಮತದಾರರಲ್ಲಿ 1,16,032 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರಿಂದ ಶೇ. 59.39 ಮತದಾನವಾಗಿತ್ತು. ಈ ಬಾರಿ 2,27,114 ಮತದಾರರಲ್ಲಿ 1,35,874 ಮತದಾನವಾಗುವ ಮೂಲಕ ಶೇ. 59.83 ಮತದಾನವಾಗುವ ಮೂಲಕ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 5ನೇ ಸ್ಥಾನದಲ್ಲಿದೆ. ಗಮನೀಯ ಅಂಶ ಎಂದರೆ ಈ ಕ್ಷೇತ್ರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರು ಪ್ರತಿನಿಧಿಸುವ ಕ್ಷೇತ್ರ ಎಂಬುದು ವಿಶೇಷ.
ಚುನಾವಣೆ ಪೂರ್ವದಲ್ಲಿ ಯುವ ಮತದಾರರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕುರಿತು ಕಾಲೇಜುಗಳಲ್ಲಿ ಹಾಗೂ ನಗರ-ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಮತದಾನ ನೋಂದಣಿ ಅಭಿಯಾನ ಮಾಡಿದ್ದೇವು. ಚುನಾವಣೆ ಘೋಷಣೆ ಬಳಿಕ ಮತದಾನ ಮಾಡುವ ಮಹತ್ವ ತಿಳಿಸುವ ಕುರಿತು ಜಿಲ್ಲೆಯಾದ್ಯಂತ ನಡೆಸಿದ ವಿವಿಧ ಸ್ವರೂಪದ ಜಾಗೃತಿ ಪರಿಣಾಮ ನೋಂದಣಿ ಹಾಗೂ ಮತದಾನ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.•ವಿಕಾಸ ಸುರಳಕರ,
ಜಿಲ್ಲಾಧ್ಯಕ್ಷರು ಸ್ವೀಪ್ ಸಮಿತಿ, ವಿಜಯಪುರ