Advertisement
12 ಸ್ಪರ್ಧಿಗಳಲ್ಲಿ ಪ್ರಮುಖರಾದ ಹ್ಯಾಟ್ರಿಕ್ ವಿಜಯಕ್ಕಾಗಿ ವಿಜಯಪುರ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸಂಪೂರ್ಣ ನಿರಾಳತೆಯಿಂದ ಕುಳಿತಿದ್ದಾರೆ. ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಗೆ ಹೊಂದಿಕೊಂಡಿರುವ ತೋಟದ ಮನೆಯಲ್ಲಿ ಜಿಗಜಿಣಗಿ ಸದಾ ಮುಖಂಡರು, ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಸ್ಥಿತಿಯಲ್ಲಿ ಇರುತ್ತಿದ್ದರು. ಆದರೆ ಬುಧವಾÃರಿಂಥ ಯಾವ ಗೌಜು-ಗದ್ದಲವಿಲ್ಲದೇ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರುವ ಅವರು ಮೊಮ್ಮಕ್ಕಳ ಆಸೆಯಂತರ ಪ್ರವಾಸಕ್ಕೆ ಹೊರಡುವ ಯೋಜನೆ ರೂಪಿಸುತ್ತಿದ್ದಾರೆ.
Related Articles
Advertisement
ನಂತರ ಮತದಾನ ಮುಗಿಯುತ್ತಲೇ ತಮ್ಮ ರಾಜಕೀಯ ನಿರ್ಧಾರ ಕೈಗೊಳ್ಳುತ್ತಿದ್ದ ಪತಿ-ಶಾಸಕ ದೇವಾನಂದ ಚವ್ಹಾಣ ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಬುಧವಾರ ಮನೆಗೆ ಬಂದ ಪಕ್ಷದ ನಾಯಕರು, ಕಾರ್ಯಕರ್ತ, ಹಿತೈಷಿಗಳೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಯಾವ ಭಾಗದಲ್ಲಿ ತಮ್ಮ ಪರ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ, ಎಲ್ಲೆಲ್ಲಿ ಹಿನ್ನಡೆಯಾಗಿದೆ ಎಂದೆಲ್ಲ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಕಾರ್ಯಕರ್ತರು ನನ್ನ ರಾಜಕೀಯ ಜೀವನದ ನರನಾಡಿಗಳಿದ್ದಂತೆ. ಕಾರ್ಯಕರ್ತರಿಲ್ಲದೇ ಯಾವ ಪಕ್ಷ-ನಾಯಕ ಬೆಳೆಯಲಾರ. ಕಾಯಕರ್ತರು ಕಳೆದ ಒಂದು ತಿಂಗಳಿಂದ ತಮ್ಮ ಮನೆಯನ್ನು ತೊರೆದು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಎಷ್ಟು ಕ್ರತಜ್ಷತೆ ಸಲ್ಲಿಸಿದರೂ ಸಾಲದು. ಈ ಬಾರಿಯೂ ನನ್ನ ಗೆಲುವು ಶತಸಿದ್ದ, 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ.•ರಮೇಶ ಜಿಗಜಿಣಗಿ
ಕೇಂದ್ರ ಸಚಿವ-ಬಿಜೆಪಿ ಅಭ್ಯರ್ಥಿ ನಸುಕಿನಲ್ಲೇ ಪ್ರಚಾರಕ್ಕೆ ಓಡೋಡಿ ಹೋಗುತ್ತಿದ್ದ ನನಗೆ ತಿಂಗಳಿಂದ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಮನೆಯಲ್ಲೇ ಇದ್ದು ಮಕ್ಕೊಂದಿಗೆ ಬೆರೆಯುತ್ತೇನೆ. ನಾನು ಗೆಲ್ಲಲೇಬೇಕು ಎಂದು ಜೆಡಿಎಸ್-ಕಾಂಗ್ರೆಸ್ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಕಳೆದ ಒಂದು ತಿಂಗಳಿಂದ ವಿಶ್ರಾಂತಿ ಇಲ್ಲದೇ ದುಡಿದಿದ್ದಾರೆ. ಇವರ ಪರಿಶ್ರಮದ ಫಲವಾಗಿ ನಾನು ಕನಿಷ್ಠ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.
•ಡಾ| ಸುನೀತಾ ಚವ್ಹಾಣ
ಮಿತ್ರ ಪಕ್ಷಗಳ ಜೆಡಿಎಸ್ ಅಭ್ಯರ್ಥಿ •ಜಿ.ಎಸ್. ಕಮತರ