Advertisement

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಖಚಿತ

01:19 PM Apr 15, 2019 | Team Udayavani |

ದೇವರಹಿಪ್ಪರಗಿ: ಈ ಭಾರಿ ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿ
ನೇತೃತ್ವದ ಭಾರತೀಯ ಜನತಾ ಪಾರ್ಟಿ ಮೂರನೂರಕ್ಕೂ ಅಧಿಕ ಸ್ಥಾನವನ್ನು ಗೆದ್ದು ಅಧಿ ಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆಡಳಿತದಲ್ಲಿ ಅನೇಕ ಬದಲಾವಣೆಯನ್ನು ಜಾರಿಗೋಳಿಸಿ ದೀನ ದಲಿತ ಬಡವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಿ ಜನಾಮಾನಸದಲ್ಲಿ ಉಳಿದಿದ್ದಾರೆ. ಹೀಗಾಗಿ ಜನರು ಎಲ್ಲಂದರಲ್ಲಿ ಮತ್ತೂಮ್ಮೆ ಮೋದಿ ಮತ್ತೊಮ್ಮೆ ಮೋದಿ ಎಂದು ಸ್ವಯಂ ಪ್ರೇರಿತವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಯುವಕರಂತು ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಳು ಕಾಂಗ್ರೆಸ್‌ ಶಾಸಕರು
ಇದ್ದರು. ಆಗಲೆ ನಾವು ಎಪ್ಪತ್ತು ಸಾವಿರ ಅಂತರದಿಂದ ಗೆಲುವು
ಸಾಧಿಸಿದ್ದೇವು. ಈ ಬಾರಿ ಲಕ್ಷಗಿಂತಲೂ ಅಧಿ ಕ ಮತಗಳಿಂತ
ಗೆದ್ದೆ ಗೆಲ್ಲುತ್ತೇವೆ. ದೇವರಹಿಪ್ಪರಗಿ ಪಟ್ಟಣದಲ್ಲಿ ಸಿಸಿ ರಸ್ತೆ ಚರಂಡಿ
ಹಾಗೂ ಸಮಗ್ರ ಅಭಿವೃದ್ಧಿಗಾಗಿ ನೂರು ಕೋಟಿ ರೂ. ವಿಶೇಷ
ಯೋಜನೆ ಸಿದ್ಧಗೊಂಡಿದೆ. ಕೂಡಲೇ ಅನುಷ್ಠಾನಗೂಳಿಸುವುದಕ್ಕೆ
ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.

ಮುದ್ದೇಬಿಹಾಳ ಶಾಸಕ ನಡಹಳ್ಳಿಯವರು ನಡೆಸುತಿದ್ದ ಪತ್ರಿಕಾಗೋಷ್ಠಿಯಲ್ಲಿ ನುಗ್ಗಿ ಶಾಸಕರಿಗೆ ಜೀವ ಬೆದರಿಕೆ ಹಾಕಿದ ಗೃಹ ಸಚಿವ ಎಂ.ಬಿ. ಪಾಟೀಲ ಬೆಂಬಲಿಗರ ಗುಂಡಾ ವರ್ತನೆ ಖಂಡನೀಯ. ಪ್ರಜಾಪ್ರಭುತ್ವದ ಸಾಮಾಜಿಕ ವ್ಯವಸ್ಥೆಯಲ್ಲಿ ಅ ಧಿಕಾರ ದುರುಪಯೋಗ ಮಾಡಿಕೊಂಡಿದ್ದು ಕೇಳಲಿಕ್ಕೆ ಪ್ರತಿಯೊಬ್ಬ ಪ್ರಜೆಗೂ ಹಕ್ಕಿದೆ. ನಡಹಳ್ಳಿಯವರ ಆರೋಪಕ್ಕೆ ಸಚಿವರು ದಾಖಲೆ ಸಮೇತ ಉತ್ತರಿಸುವುದನ್ನು ಬಿಟ್ಟು ಬೆಂಬಲಿಗರಿಂದ ಹಲ್ಲೆಗೆ ಪ್ರಚೋದನೆ ನೀಡಿದ್ದಾರೆ. ಯಾರೆ ಆಗಲಿ ವಿನಾಕಾರಣ ಹಲ್ಲೆಗೆ ಮುಂದಾದರೆ ತಕ್ಕ ಶಿಕ್ಷೆಯಾಗಬೇಕೆಂದ ಅವರು, ನಡಹಳ್ಳಿಯವರ ಜೊತೆ ನಾವು ಇದ್ದೇವೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಚಿದಾನಂದ ಹಚ್ಚಾಳ, ಡಾ| ಆರ್‌.
ಆರ್‌. ನಾಯಿಕ, ಮತಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ರಮೇಶ ಮಸಬಿನಾಳ, ಪ್ರಭುಗೌಡ ಬಿರಾದಾರ, ಸಿದ್ದು ಬುಳ್ಳಾ, ಶರಣು ದಳವಾಯಿ, ಶ್ರೀಧರ ನಾಡಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next