Advertisement

ಸಿಬ್ಬಂದಿಗೆ ಉತ್ತಮ ಊಟದ ವ್ಯವಸ್ಥೆ ಮಾಡಿ

01:36 PM Apr 12, 2019 | Naveen |

ವಿಜಯಪುರ: ಲೋಕಸಭಾ ಚುನಾವಣೆ ಅಂಗವಾಗಿ ಸ್ಥಾಪಿಸಲಾಗಿರುವ ಜಿಲ್ಲೆಯ 2101 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್‌-ಡಿ- ಮಸ್ಟರಿಂಗ್‌ ದಿನ ಹಾಗೂ ಮತದಾನ ದಿನದಂದು ಚುನಾವಣಾ ಸಿಬ್ಬಂದಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಊಟ-ಉಪಾಹಾರದ ವ್ಯವಸ್ಥೆ ಮಾಡುವಂತೆ
ಜಿಲ್ಲಾ ಚುನಾವಣಾ ಅಧಿಕಾರಿ ಎಂ.ಕನಗವಲ್ಲಿ ಸೂಚಿಸಿದರು.

Advertisement

ಗುರುವಾರ ನಗರದ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನದ ಮುನ್ನ ದಿನ ಹಾಗೂ ಮತದಾನ ದಿನದಂದು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಸಿಬ್ಬಂದಿಗಳಿಗೆ ಊಟೋಪಾಹಾರದ
ವ್ಯವಸ್ಥೆ ಮಾಡಬೇಕು. ಯಾವುದೇ ರೀತಿಯ ದೂರು ಬಂದಲ್ಲಿ ಸಂಬಂಧಪಟ್ಟವರಿಗೆ ನೊಟೀಸ್‌ ನೀಡದೇ ತಕ್ಷಣ ಅಮಾನತ್ತಿನ ಕ್ರಮ
ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2101
ಮತಗಟ್ಟೆಗಳಿದ್ದು, ಪ್ರತಿಯೊಂದು ಮತಗಟ್ಟೆಗೆ ಅಲೊ³àಪಾಹಾರ
ಹಾಗೂ ಉಪಾಹಾರಕ್ಕಾಗಿ ತಲಾ 1,250 ರೂ. ಹಾಗೂ
ಕುಡಿಯುವ ನೀರಿಗಾಗಿ 100 ರೂ. ಸೇರಿದಂತೆ 1,350 ರೂ. ಕಾಯ್ದಿರಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮತದಾನದ ಪೂರ್ವದಿನ
ಮಧ್ಯಾಹ್ನ ಊಟ, ಸಂಜೆ ಅಲ್ಪೋಪಾಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆ ಅದರಂತೆ ಮತದಾನ ದಿನದಂದು ಬೆಳಿಗ್ಗೆ ಅಲ್ಪೋಪಾಹಾರ, 11ಗಂಟೆಗೆ ಟೀ ವ್ಯವಸ್ಥೆ, ಮಧ್ಯಾಹ್ನ ಊಟ ಹಾಗೂ ಸಂಜೆ ಅಲ್ಪೋಪಾಹಾರದ ವ್ಯವಸ್ಥೆ
ಮಾಡಬೇಕು. ಇದರಲ್ಲಿ ಯಾವ ಲೋಪವಿಲ್ಲದೇ ಉತ್ತಮ ರೀತಿಯ ಸೌಲಭ್ಯ ಕಲ್ಪಿಸಬೇಕು. ಆರೋಗ್ಯಕ್ಕೆ ಹಿತರಕವಾದ ಆಹಾರ
ಬಳಸಬೇಕು. ಯಾವುದೇ ರೀತಿಯ ದೂರುಗಳು ಬಂದಲ್ಲಿ ಕಟ್ಟುನಿಟ್ಟಿನ
ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಏಕಮತಗಟ್ಟೆ ಹಾಗೂ ಒಂದೇ
ಕಡೆ ಒಂದಕ್ಕಿಂತ ಹೆಚ್ಚಿರುವ ಮತಗಟ್ಟೆಗಳಲ್ಲಿ ಸಹಾಯಕರ ನೆರವಿನೊಂದಿಗೆ
ಸಿಬ್ಬಂದಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಊಟೋಪಾಹಾರದ ವ್ಯವಸ್ಥೆಯಾಗಬೇಕು. ಒಂದೇ ಕಡೆ ಎರಡರಿಂದ ಮೂರು ಮತಗಟ್ಟೆಗಳಿರುವ ಪ್ರದೇಶದಲ್ಲಿ ಒಂದೇ ಸ್ಥಳದಲ್ಲಿ ಊಟದ ವ್ಯವಸ್ಥೆ ಮಾಡಿ ಇನ್ನೊಂದು ಮತಗಟ್ಟೆಗೆ ಆಹಾರ ಪೂರೈಸಲು ಸಹಾಯಕರೊಬ್ಬರನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.

ಶಾಲಾ ಕಟ್ಟಡಗಳಲ್ಲಿರುವ ಮತಗಟ್ಟೆಗಳು ಹಾಗೂ ಶಾಲೆ ಹೊರತುಪಡಿಸಿ ಇರುವ ಮತಗಟ್ಟೆಗಳನ್ನು ಗುರುತಿಸಿದ್ದು, ಅದರನ್ವಯ ಅಚ್ಚುಕಟ್ಟಾದ ಊಟೋಪಾಹಾರದ ವ್ಯವಸ್ಥೆ ಮಾಡುವಂತೆ ತಿಳಿಸಿದ ಅವರು, ಸಂಪೂರ್ಣ ರೀತಿಯ ಜವಾಬ್ದಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ವಹಿಸಿಕೊಂಡಲ್ಲಿ ಮಾತ್ರ ಯಾವುದೇ ಲೋಪಕ್ಕೆ ಅವಕಾಶವಿರುವುದಿಲ್ಲ. ಇದಕ್ಕಾಗಿ ತಕ್ಷಣ ಸಂಬಂಧಿ ಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದ ಅವರು, ತಾಪಂ ಇಓ, ಡಿಸಿಪಿಐ, ಅಕ್ಷರ ದಾಸೋಹ ಅ ಧಿಕಾರಿಗಳ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ ವೀರೇಶ ಜೇವರ್ಗಿ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಎಚ್‌. ಪ್ರಸನ್ನ ಸೇರಿದಂತೆ ಇತರ
ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next