Advertisement
ಕೇಂದ್ರ ಸಚಿವರಾಗಿ ತಾವು ಪ್ರತಿನಿಧಿಸುವ ಕ್ಷೇತ್ರವ್ಯಾಪ್ತಿಯ ನಾಗಠಾಣ ಕ್ಷೇತ್ರಕ್ಕೆ ಕಳೆದ ಒಂದು ದಶಕದಲ್ಲಿ ಗಂಭೀರ ಸಮಸ್ಯೆಗಳ ನಿವಾರಣೆಗೆ ಮುಂದಾಗಿಲ್ಲ ಎಂಬ ಆರೋಪದ ಕಾರಣ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೂ ವಿರೋಧಿ ಅಲೆ ಎದ್ದಿದೆ. ಇತ್ತ ಕಳೆದ ಒಂದು ವರ್ಷದಿಂದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸಮ್ಮಿಶ್ರ ಸರ್ಕಾರದ ಆಡಳಿತ ಪಕ್ಷದ ಶಾಸಕರಾಗಿದ್ದರೂ ಹೇಳಿಕೊಳ್ಳುವಂಥ ಯಾವ ಕೆಲಸವನ್ನೂ ಮಾಡಿಲ್ಲ . ಬದಲಾಗಿ ಸ್ವಜಾತಿ ಪ್ರೇಮ ಮೆರೆಯುತ್ತಿದ್ದಾರೆ ಎಂಬ ದೂರುಗಳಿವೆ. ಇದು ಮಿತ್ರ ಪಕ್ಷಗಳ ಆಭ್ಯರ್ಥಿಯಾಗಿರುವ ಶಾಸಕ ದೇವಾನಂದ ಪತ್ನಿ ಸುನೀತಾ ಚವ್ಹಾಣಗೆ ವಿರೋಧಿ ಗಾಳಿ ಬೀಸುವಂತೆ ಮಾಡಿದೆ.
Related Articles
Advertisement
ಇದರ ಹೊರತಾಗಿಯೂ ನಾಗಠಾಣ ವಿಧಾನಸಭೆ ಕ್ಷೇತ್ರದಲ್ಲಿ ಚಡಚಣ ಹಾಗೂ ನಾಗಠಾಣ ಎರಡು ಭಾಗದಲ್ಲಿ ವಿಭಿನ್ನ ಪ್ರತಿಕ್ರಿಯೆ ಇದೆ. ಕುಡಿಯುವ ನೀರಿನ ಗಂಭೀರ ಪರಿಸ್ಥಿತಿ ಎದುರಿ ಸುತ್ತಿರುವ ಕ್ಷೇತ್ರಗಳಲ್ಲಿ ನಾಗಠಾಣ ಕೂಡ ಒಂದು. ಈಗಲೂ ಈ ಭಾಗದ ಹಲವು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಕುಡಿಯುವ ನೀರಿಗೆ ತತ್ವಾರ ಇರುವುದರ ಪ್ರತೀಕ. ಈ ಸಮಸ್ಯೆ ನೀಗಲು ಚಡಚಣ ಭಾಗದಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ರೂಪಿಸುವಲ್ಲಿ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವ ಹಾಗೂ ಬಿಜೆಪಿ ಹಾಲಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಹೆಚ್ಚಿನ ಬಲ ನೀಡಲಿದೆ ಎಂಬ ವಿಶ್ವಾಸ ಕೇಸರಿ ಪಾಳೆಯದಲ್ಲಿ ಮನೆ ಮಾಡಿದೆ.
ಮಿತ್ರ ಪಕ್ಷಗಳು ಕ್ಷೇತ್ರ ಹೊಂದಾಣಿಕೆ ಹಾಗೂ ಆಭ್ಯರ್ಥಿ ಘೋಷಣೆಯಲ್ಲಿ ವಿಳಂಬ ಮಾಡಿರುವುದು ಜೆಡಿಎಸ್ ಪಕ್ಷಕ್ಕೆ ಕೊಂಚ ಹಿನ್ನಡೆ ಆಗಲಿದೆ. ಆದರೂ ಹಾಲಿ ಸಂಸದ-ಸಚಿವರಾಗಿರುವ ರಮೇಶ ಜಿಗಜಿಣಗಿ ಅವರ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣಗೆ ನೆರವಾಗಲಿದೆ. ಮಿತ್ರಪಕ್ಷಗಳ ನಾಯಕರು-ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡಿರುವ ಕಾರಣ ಚಡಚಣ ಭಾಗದಲ್ಲಿ ಕೊಂದ ಹಿನ್ನಡೆ ಎನಿಸಿದರೂ ನಾಗಠಾಣ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿ ತನ್ನ ಎದುರಾಳಿಗಿಂತ 10 ಸಾವಿರಕ್ಕಿಂತ ಹೆಚ್ಚಿನ ಮತ ಪಡೆಯಲಿದ್ದಾರೆ.•ಸಾಹೇಬಗೌಡ ಬಿರಾದಾರ (ತದ್ದೇವಾಡಿ)
ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಚಡಚಣ ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ಬಲ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರ ಪಡೆ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಆಂತರಿಕವಾಗಿ ಒಪ್ಪಿಲ್ಲ. ಶಾಸಕರಾಗಿ ದೇವಾನಂದ ಚವ್ಹಾಣ ಕ್ಷೇತ್ರದಲ್ಲಿ ದಲಿತರಲ್ಲೇ ತಾರತಮ್ಯ ಮಾಡುತ್ತಿರುವುದು ಬಿಜೆಪಿ ಅಭ್ಯರ್ಥಿಗೆ ನೆರವಾಗಲಿದೆ. ಶಾಸಕರ ವಿರೋಧಿ ಅಲೆ ಹಾಗೂ ಪ್ರಧಾನಿ ಮೋದಿ ಪರ ಅಲೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ನೆರವಾಗಿದೆ. ಹೀಗಾಗಿ ಚಡಚಣ ಭಾಗದಲ್ಲಿ ಕನಿಷ್ಠ ಚಡಚಣ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಗಿಂತ 10 ಸಾವಿರಕ್ಕೂ ಅಧಿಕ ಮತಗಳನ್ನು ಸೆಳೆಯಲಿದ್ದೇವೆ.
•ಕಲ್ಲಪ್ಪ ಉಟಗಿ, ಅಧ್ಯಕ್ಷರು ಬಿಜೆಪಿ ಮಂಡಲ, ಚಡಚಣ ಜಿ.ಎಸ್. ಕಮತರ