Advertisement

ಎನ್‌ಟಿಪಿಸಿಯಲ್ಲಿಎಷ್ಟು ಜನಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ?:ಆಲೂರ ರ

05:00 PM Apr 20, 2019 | Team Udayavani |

ಆಲಮಟ್ಟಿ: ನಾಡಿನ ಜನತೆ ಹೊಟ್ಟೆ ತುಂಬಿಸುವ ಜೋಳ, ಗೋಧಿ , ಕಡಲೆ, ಶೇಂಗಾ, ಈರುಳ್ಳಿ ಬೆಳೆಗಳ ಬೆಲೆಗಳ ಕುಸಿತ ಹಾಗೂ ರೈತರ ಸಾಲಮನ್ನಾ ಬಗ್ಗೆ ಸಂಸತ್‌ನಲ್ಲಿ ಮಾತನಾಡದ ಕೇಂದ್ರ ಸಚಿವ ರಮೇಶ ಜಿಗಜಿಣಗಿಯವರು ಈ ಭಾಗದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ
ಆರೋಪಿಸಿದರು.

Advertisement

ಶುಕ್ರವಾರ ಪಟ್ಟಣದ ರಾಕ್‌ ಉದ್ಯಾನದ ಬಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ತಂಬಾಕು ಹಾಗೂ ಅಡಿಕೆ ಬೆಳೆಗಳ ಬೆಲೆ ಕುಸಿತ ಉಂಟಾದ ವೇಳೆಯಲ್ಲಿ ಆ ಭಾಗದ ಸಂಸದರು ಸಂಸತ್‌ನಲ್ಲಿ ಚರ್ಚಿಸಿ ರೈತರಿಗೆ ನ್ಯಾಯ ಒದಗಿಸುತ್ತಾರೆ. ಆದರೆ ಜನತೆಯ ಹೊಟ್ಟೆ ತುಂಬಿಸುವ ಬೆಳೆಗಳ ಬೆಲೆ ನೆಲ ಕಚ್ಚಿದರೂ ಜಿಲ್ಲೆಯನ್ನು ಪ್ರತಿನಿ ಧಿಸುವ ಸಂಸದರೇ ಕೇಂದ್ರ
ಸಚಿವರಾಗಿದ್ದರೂ ಕೂಡ ಒಮ್ಮೆಯೂ ರೈತರ ಅಹವಾಲು ಆಲಿಸಲಿಲ್ಲ ಎಂದರು.

ಜಿಲ್ಲೆಯು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದ್ದರೂ ಕೂಡ ಕೇಂದ್ರದಿಂದ ಎಲ್ಲ ರೈತರಿಗೆ ಅನುಕೂಲವಾಗುಂತಹ ಯೋಜನೆ ತರಲಿಲ್ಲ. ರಾಜ್ಯದ ಎರಡನೇ ತೊಗರಿ ಕಣಜವೆಂದು ಕರೆಯಲಾಗುವ ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ತೊಗರಿ, ಉಳ್ಳಾಗಡ್ಡಿ, ನಿಂಬೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಲಿಲ್ಲವಲ್ಲದೇ ರೈತರಿಗೆ ಕೇಂದ್ರದಿಂದ ರಫ್ತು ಮಾಡಲು ಅವಕಾಶ ಕಲ್ಪಿಸದೇ ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದರಿಂದ ಮೊದಲೇ ಬೆಲೆಯಿಲ್ಲದೇ ಕಂಗೆಟ್ಟಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಇದರ ಬಗ್ಗೆ ಸಂಸದರು ಪ್ರಧಾನಿಯವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳದೇ  ಕಪ್ರೇಕ್ಷರಾಗಿದ್ದರಲ್ಲದೇ
ಅವರನ್ನು ನವದೆಹಲಿಯಲ್ಲಿ ರೈತರು ತಮ್ಮ ಸಮಸ್ಯೆಯನ್ನು ಹೇಳಲು ಹೋದರೆ ದೂರದಿಂದಲೇ ಸಾಗಹಾಕಿದರು ಎಂದು ದೂರಿದರು.

ಪರಿಸರಕ್ಕೆ ಹಾನಿಕರವಾದ ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್‌ ಸ್ಥಾವರದ ಕೂಡಗಿಯಲ್ಲಿ ಆರಂಭಿಸಿ ಇದರಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ನಲ್ಲಿ ಅರ್ಧ ಭಾಗ
ರಾಜ್ಯಕ್ಕೆ ಸೀಮಿತವಾಗಿದೆ. ಅದರಲ್ಲಿ ಅಖಂಡ ವಿಜಯಪುರ ಜಿಲ್ಲೆಯಲ್ಲಿ ದಿನದ 24 ತಾಸು ವಿದ್ಯುತ್‌ ಪೂರೈಸಲಾಗುವದು. ಇದರಿಂದ ಎಲ್ಲ ಏತ ನೀರಾವರಿ ಹಾಗೂ ರೈತರ ಪಂಪ್‌ ಸೆಟ್‌ಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ಕೇಂದ್ರದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳುವ ಅವರು ಕೂಡಗಿ ಉಷ್ಣವಿದ್ಯುತ್‌ ಸ್ಥಾವರ ಆರಂಭವಾಗಿ ಎಷ್ಟು ವಿದ್ಯುತ್‌ ಉತ್ಪಾದಿಸಿದೇ ಅದರಲ್ಲಿ ಎಷ್ಟು ವಿದ್ಯುತ್‌ ಜಿಲ್ಲೆಗೆ ನೀಡಲಾಗಿದೆ ಎಂದು ಕೇಂದ್ರ ಸಚಿವರು ಒಮ್ಮೆಯಾದರೂ ಗಮನಿಸಿದ್ದಾರೆಯೇ? ಎನ್‌ ಟಿಪಿಸಿಯಲ್ಲಿ ಮೊದಲು ಸ್ಥಳೀಯರಿಗೆ ಉದ್ಯೋಗ ಕೊಡಲಾಗುತ್ತದೆ ಎಂದು ಹೇಳಿದ್ದ ಅವರು ಈಗ ಎಷ್ಟು ಜನ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಭಾಷಣ ಮಾಡುವ ಸಂಸದರೇ ಆಲಮಟ್ಟಿ ಜಲಾಶಯ ಎತ್ತರ ಹಾಗೂ ನೀರು ಬಳಕೆ ಬಗ್ಗೆ 2010ರಲ್ಲಿ ನ್ಯಾ| ಬೃಜೇಶಕುಮಾರ ನೇತೃತ್ವದ ಎರಡನೇ ಕೃಷ್ಣಾ
ನ್ಯಾಯಾ ಧಿಕರಣ ಪೀಠ ತೀರ್ಪು ನೀಡಿದ್ದರೂ
ಕೂಡ ಕೇಂದ್ರದ ಮೇಲೆ ಒತ್ತಡ ಹೇರಿ ಅಧಿ
ಸೂಚನೆ (ಗೆಜೆಟ್‌) ಮಾಡಿಸದ ಸಂಸದರು ಮತ್ತೆ
ರೈತರ ಬಳಿ ಯಾವ ಮುಖ ಹೊತ್ತು ಬರ್ತೀರಿ ಎಂದು ಆಕ್ರೋಶವ್ಯಕ್ತಪಡಿಸಿದರು. ಒಟ್ಟಾರೆ ಜಿಲ್ಲೆಯ ಬಗ್ಗೆ ಸಂಸತ್‌ನಲ್ಲಿ ಒಮ್ಮೆಯೂ ಮಾತನಾಡದ ನೀವು ಮತ್ತೇ ಸಂಸದರಾಗುವದಾದರೂ ಏಕೆ? ತಾವು ಇದೇ ಜಿಲ್ಲೆಯವರಾಗಿ ಎಲ್ಲ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿದ್ದರೂ ಸಂಸತ್‌ನಲ್ಲಿ ಏಕೆ ಮಾತನಾಡುವುದಿಲ್ಲ. ಹಾಗಾದರೆ ಅಲ್ಲಿಗೆ
ಹೋಗುವದಾದರೂ ಏಕೆ ಎಂದು ಲೇವಡಿ ಮಾಡಿದರು.

Advertisement

ಬಸವನಬಾಗೇವಾಡಿ ತಾಲೂಕು ಉಪಾಧ್ಯಕ್ಷ ಶಿವಪ್ಪ ಇಂಗಳೇಶ್ವರ, ನಿಡಗುಂದಿ ತಾಲೂಕು ಗೌರವಾಧ್ಯಕ್ಷ ಶಿವಪ್ಪ ಪಾಟೀಲ, ಉಪಾಧ್ಯಕ್ಷ ವೆಂಕಟೇಶ ಒಡ್ಡರ, ಸಾಬಣ್ಣ ಅಂಗಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next