Advertisement
ಹೀಗಾಗಿ ಇವರ ಮೋಸದ ಮಾತಿಗೆ ಯಾರೂ ಮರುಳಾಗಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.
Related Articles
ಹೋಗುತ್ತಾರೆ. ಹೀಗಾಗಿ ಇನ್ನಾದರೂ ಮೋದಿ ಬಣ್ಣದ ಮಾತುಗಳಿಂದ ಮರುಳಾಗಬೇಡಿ. ಸರ್ವಾಧಿ ಕಾರಿ ಮನೋಭಾವದ ನಡೆಯಲ್ಲಿ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿರುವ ಮೋದಿ ನಡೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎಂದು
ಎಚ್ಚರಿಸಿದರು.
Advertisement
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕಾಂಗ್ರೆಸ್ ವರಿಷ್ಠರು ಪ್ರಸ್ತಾಪ ಮಾಡಿದರು. ಆದರೆ ನಾನು ರಾಜ್ಯದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ 37 ಜನ ಶಾಸಕರು ಆಯ್ಕೆಯಾಗಿದ್ದೇವೆ, ನೀವು ಹೆಚ್ಚಿನ ಸ್ಥಾನ ಗೆದ್ದೀದ್ದಿರಿ. ಕುಮಾರಸ್ವಾಮಿ ಅವರಿಗೆ ಸಿಎಂ ಸ್ಥಾನ ಬೇಡ ಎಂದೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂ ಧಿ ಹಾಗೂ ಸೋನಿಯಾ ಗಾಂಧಿ ಅವರು ದೂರದೃಷ್ಟಿಯಿಂದ ಕುಮಾರಸ್ವಾಮಿ ಅವರೇ ಸಿಎಂ ಆಗಲಿ ಎಂದು ಆಶಯ ಹೊಂದಿದ್ದರಿಂದ ನಾವು ಆದನ್ನು ಒಪ್ಪಿದ್ದೇವೆ.
ಜಾತ್ಯತೀತ ಮನೋಭಾವದ ಎಲ್ಲ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ರಾಜಕೀಯ ವ್ಯವಸ್ಥೆ ಕರ್ನಾಟಕದಲ್ಲಿಯೇ ಮತ್ತೂಂದು ಸಾರಿ ಆರಂಭಗೊಂಡಿತು. ಸಿದ್ದರಾಮಯ್ಯ ಸಿಎಂ ಆಗಿ ಮಾಡಿರುವ ಎಲ್ಲ ಜನಪರ ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರ ಮುಂದುವರಿಸಲಿದೆ ಎಂದರು.
ನಾನು ಕೂಡ ಹಳೆಯ ಕಾಂಗ್ರೆಸ್ಸಿಗ ಎಂದು ತಮ್ಮ ರಾಜಕೀಯ ಹಿನ್ನೆಲೆಯನ್ನು ಸ್ಮರಿಸಿದ ದೇವೇಗೌಡರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವನ್ನೇ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂಬ ಮೋದಿ ದುರಂಹಕಾರದ ಮಾತನಾಡುತ್ತಿದ್ದಾರೆ. ದೇಶದ ಜನರು ಇದೀಗ ಮೋದಿ ದುರಂಹಕಾರದ ಮಾತಿಗೆ ಉತ್ತರ ಕೊಡುವ ಕಾಲ ಬಂದಿದೆ ಎಂದರು.
ಮೈತ್ರಿ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಧೈರ್ಯವಂತ ಹೆಣ್ಣು ಮಗಳು. ಈ ಬಾರಿ ಮಹಿಳೆಗೆ ಆಶೀರ್ವದಿಸಿ, ಅವರ ಗೆಲುವಿನ ಜವಾಬ್ದಾರಿ ನಿಮ್ಮದು ಎಂದು ದೇವೇಗೌಡ ಮತಯಾಚಿಸಿದರು.ಗೃಹ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಕೇಂದ್ರ ಸಚಿವರಾಗಿ ರಮೇಶ ಜಿಗಜಿಣಗಿ ಅವರು ಬಹಳಷ್ಟು ಕೆಲಸ ಮಾಡಬಹುದಾಗಿತ್ತು. ನಾನೇನಾದರೂ ಕೇಂದ್ರ ಸಚಿವನಾಗಿದ್ದರೆ ಕುಡಿಯುವ ನೀರಿಗೆ ಸಂಬಂ ಧಿಸಿದಂತೆ 2 ಸಾವಿರ ಕೋಟಿ ರೂ.ಗಳ ಪೈಲಟ್ ಪ್ರಾಜೆಕ್ಟ್ನ್ನಾದರೂ ವಿಜಯಪುರಕ್ಕೆ ತರುತ್ತಿದೆ. ಕೈಯಲ್ಲಿ ಅ ಧಿಕಾರ ಇದ್ದರೂ ಜಿಗಜಿಣಗಿ ಅವರು ಏನೂ ಮಾಡಲಿಲ್ಲ. ಈಗ ಅವರು ಭೂತನಾಳ ಕೆರೆ ಸೌಂದರ್ಯ ಸವಿಯುತ್ತ ಮೊಮ್ಮಕ್ಕಳೊಡನೆ ಆಟವಾಡುತ್ತಾ ಕುಳಿತುಕೊಳ್ಳಲಿ ಎಂದರು. ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಆಲಮಟ್ಟಿಗೆ 80 ಟಿಎಂಸಿ ನೀರು ಬರಬೇಕಾದರೆ ಅದರ ಶ್ರೇಯಸ್ಸು ಎಚ್.ಡಿ. ದೇವೇಗೌಡರಿಗೆ ಸಲ್ಲಬೇಕು. ದೇವೇಗೌಡರು ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು ಎಂದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ದೇವಾನಂದ ಚವ್ಹಾಣ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮೇಲ್ಮನೆ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೊಡ, ಮಾಜಿ ಶಾಸಕ ರಾಜು ಆಲಗೂರ, ಬಿ.ಜಿ. ಪಾಟೀಲ ಹಲಸಂಗಿ, ವಿಠ್ಠಲ ಕಟಕಧೊಂಡ, ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ, ಮಹಾದೇವಿ ಗೋಕಾಕ, ಅಬ್ದುಲ್ ಹಮೀದ್ ಮುಶ್ರೀಫ್ ಇದ್ದರು.