Advertisement

ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ಪ್ರತಿಭಟನೆ

03:19 PM Apr 19, 2019 | Team Udayavani |

ಮುದ್ದೇಬಿಹಾಳ: ಚುನಾವಣೆ ಪ್ರಚಾರದ ವೇಳೆ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೈನಿಕರ ಬಗ್ಗೆ
ಅವಹೇಳನಕಾರಿ ಹೇಳಿಕೆ ನೀಡಿದ್ದು ಇವರನ್ನು ಕೂಡಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿ ಮಾಜಿ ಸೈನಿಕ ಸಂಘದ ಸದಸ್ಯರು ಗುರುವಾರ ರಾಜ್ಯಪಾಲರಿಗೆ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿದರು.

Advertisement

ಬೇಜವಾಬ್ದಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳು ದೇಶದ ಯೋಧರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರು ಆಡಿದ ಮಾತುಗಳು ಇಡೀ ಭಾರತೀಯ ಸೇನೆಗೆ ಅವಮಾನ ಮಾಡಿದಂತಾಗಿದೆ. ರಾಜಸ್ತಾನದ ಪ್ರತಿಷ್ಠಿತ ರಾಠೊಡ ಮನೆತನದ ಈಗಿನ ಕೇಂದ್ರ ಮಂತ್ರಿ ಕರ್ನಲ್‌ ರಾಜವರ್ಧನ್‌ ಸಿಂಗ್‌ ರಾಠೊಡ, ಕೇರಳದ ತ್ರಿವೆಂದ್ರಂ ಅರಸು ಮನೆತನದ ಕರ್ನಲ್‌ ಎಸ್‌.ಆನಂದಕುಮಾರ್‌, ಕರ್ನಾಟಕೆ ಹೆಮ್ಮೆಯ ಪುತ್ರ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಅವರಂತಹ ಸಾವಿರಾರು ಪ್ರತಿಷ್ಠಿತ ಮನೆತನದವರು ಸೇನೆಯಲ್ಲಿ ಕೆಲಸ ಮಾಡಿದವರೇ ಎನ್ನವುದನ್ನು ಸಿಎಂ ತಿಳಿದುಕೊಳ್ಳಬೇಕಿತ್ತು
ಎಂದು ಮನವಿಯಲ್ಲಿ ಹೇಳಲಾಗಿದೆ.

ಭಾರತೀಯ ಸೇನೆಯ ಬಗ್ಗೆ ಆಗಲಿ ಅಥವಾ ಸೇನೆಯ ಇತಿಹಾಸದ ಬಗ್ಗೆ ಆಗಲಿ ಎಳ್ಳಷ್ಟು ಜ್ಞಾನವಿಲ್ಲದ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಕಂಡಕಂಡಲ್ಲಿ ಯೋಧರು, ಸೇನೆ, ವೀರ ನಾರಿಯರ ಬಗ್ಗೆ ಅಗೌರವದ ಮಾತುಗಳನ್ನಾಡುವ ಕುಮಾರಸ್ವಾಮಿ ಅವರನ್ನು ತಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ರಾಜ್ಯಪಾಲರಿಗೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘದ ಅಧ್ಯಕ್ಷ ಎಸ್‌.ಆರ್‌. ಕುಲಕರ್ಣಿ, ಉಪಾಧ್ಯಕ್ಷ ನಾನಪ್ಪ ನಾಯಕ, ಪದಾ ಧಿಕಾರಿಗಳಾದ ಎಸ್‌.ಕೆ. ಕತ್ತಿ, ಪಿ.ಜಿ. ಬಿರಾದಾರ, ಬಿ.ಸಿ. ಹುನಗುಂದ, ಎನ್‌.ಆರ್‌. ವಿಜಾಪುರ, ಎಸ್‌.ಸಿ. ಹಿರೇಮಠ, ಬಿ.ಎಂ. ಬಿರಾದಾರ, ಬಸಪ್ಪ ಮಾದರ, ಎಂ.ಬಿ. ವಾಲಿಕಾರ, ಬಿ.ಎಚ್‌. ನಾಗರಬೆಟ್ಟ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next