Advertisement

Vijayapura; ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ, 60 ಸಾವಿರ ರೂ. ದಂಡ

08:38 PM Feb 09, 2024 | Team Udayavani |

ವಿಜಯಪುರ : 2017 ಜುಲೈ 7 ರಂದು ನಗರದಲ್ಲಿ ನಡೆದಿದ್ದ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಿಲ್ಲೆಯ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ, ಆದೇಶಿಸಿದೆ.

Advertisement

ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಮಗಳ ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಲು ಜಿಲ್ಲೆಯ ಗ್ರಾಮೀಣ ಭಾಗದಿಂದ ಮಹಿಳೆ ನಗರಕ್ಕೆ ಬಂದಿದ್ದಳು. ಮಹಿಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಆರೋಪಿ ಅಶೋಕ ಶರಣಪ್ಪ ನಾಯ್ಕೋಡಿ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದಾಗ ಆಸ್ಪತ್ರೆಗೆ ಆಟೋ ಹತ್ತಿ ಹೋಗಲು ಮುಂದಾಗಿದ್ದಾಗಿ ತಿಳಿಸಿದ್ದಾಳೆ.

ಆದರೆ ಆರೋಪಿ ಅಶೋಕ ಆಟೋಕ್ಕೆ ಹಣ ಕೊಡುವುದು ಬೇಡ, ತನ್ನದೇ ಕಾರು ಇದ್ದು ಆಸ್ಪತ್ರೆಗೆ ಕಡೆಗೆ ಹೊರಟಿರುವ ನಾನು ನಿಮ್ಮನ್ನು ಕರೆದೊಯ್ಯುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆ ಕಾರು ಏರುತ್ತಲೇ ಮನಗೂಳಿ ನಗರದ ಅಗಸಿ ಪರಿಸರದ ಜಮೀನಿಗೆ ಕರೆದೊಯ್ದು, ಹಳ್ಳದಲ್ಲಿ ಅತ್ಯಾಚಾರ ನಡೆಸಿದ್ದ.

ಅತ್ಯಾಚಾರ ನಡೆಸಿದ್ದಲ್ಲದೇ ಮಹಿಳೆಯ ಬಳಿ ಇದ್ದ ಚಿನ್ನದ ಬೋರಮಾಳ, ಕಿವಿಯ ಓಲೆ, 15 ಸಾವಿರ ರೂ. ನಗದು ಹಣವನ್ನು ಕಿತ್ತುಕೊಂಡು ಮಹಿಳೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.

ಮಹಿಳೆ ತನ್ನ ಮೇಲಾದ ಅತ್ಯಾಚಾರ, ಚಿನ್ನ, ಹಣ ಕಳೆದುಕೊಂಡ ಕುರಿತು ನಗರದ ಗಾಂಧಿಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಸಿಪಿಐ ಬಸವರಾಜ ಎಲಿಗಾರ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Advertisement

ವಿಚಾರಣೆ ನಡೆಸಿದ ವಿಜಯಪುರ 4ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಧ್ವೇಶ ಡಬೇರ, ದ ಸಾಕ್ಷಿ ಪುರಾವೆಗಳನ್ನು ಪರಿಗಣಿಸಿ ಐಪಿಸಿ 376 ನೇ ಕಲಂ ಅಡಿ ಅಪರಾಧಕ್ಕೆ ಜೀವಾವಧಿ ಶಿಕ್ಷೆ , 50 ಸಾವಿರ ರೂ. ದಂಡವನ್ನು ಹಾಗೂ ಐಪಿಸಿ 392 ಕಲಂ ಅಪರಾಧಕ್ಕೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರದ ಪರವಾಗಿ 4ನೇ ಅಧಿಕ ಸರ್ಕಾರಿ ಅಭಿಯೋಜಕರಾದ ವಿ.ಜಿ.ಮಾಮನಿ ತಮ್ಮ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next