Advertisement

ಪಾರದರ್ಶಕ ಪರೀಕ್ಷೆ ನಡೆಸಲು ಸೂಚನೆ

12:35 PM Feb 01, 2020 | Naveen |

ವಿಜಯಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಫೆ.2ರಂದು ನಗರದ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ತಾಂತ್ರಿಕ ಸಹಾಯಕ, ಭದ್ರತಾ ಸಹಾಯಕ ದರ್ಜೆ-3ರ ಪರೀಕ್ಷೆ ನಡೆಯಲಿವೆ. ಸದರಿ ಪರೀಕ್ಷೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಸಾಮರ್ಥ್ಯ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಫೆಬ್ರವರಿ 2ರಂದು ಬೆಳಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 12:30ರ ವರೆಗೆ ತಾಂತ್ರಿಕ ಸಹಾಯಕರ ಪರೀಕ್ಷೆ
ನಡೆಯಲಿವೆ. ಮಧ್ಯಾಹ್ನ 2:30ರಿಂದ ಸಂಜೆ 4:30ರ ವರೆಗೆ ಭದ್ರತಾ ಸಹಾಯಕ ದರ್ಜೆ-3ರ ಪರೀಕ್ಷೆಗಳು ನಡೆಯಲಿವೆ. ಸದರಿ ಪರೀಕ್ಷೆಗಳನ್ನು ನಕಲುಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯೋಜಿಸಲಾದ ಈ ಪರೀಕ್ಷೆ ಅಭ್ಯರ್ಥಿಗಳ ಭವಿಷ್ಯದ
ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ವಿವಿಧ ಪರೀಕ್ಷೆಗಳನ್ನು ವಿವಿಧ
ರೀತಿಯಲ್ಲಿ ನಿರ್ವಹಣೆ ಆಧಾರದ ಮೇಲೆ ಇಲ್ಲಿಯ ಹೆಸರಾಂತ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿ ಪರೀಕ್ಷೆಗೆ ಅವಕಾಶ ಕಲ್ಪಿಸಿದೆ. ತಾಂತ್ರಿಕ ಸಹಾಯಕರ 4,380 ಹುದ್ದೆ,
ಭದ್ರತಾ ಸಹಾಯಕರ 2,780 ಹುದ್ದೆಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ಗೊಂದಲ, ತಕರಾರುಗಳಿಗೆ ಅವಕಾಶ ಇಲ್ಲದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಬೇಕು. ಜಿಲ್ಲೆಗೆ ಅಪಕೀರ್ತಿ ತರುವಂತೆ ನಕಲು ಹಾಗೂ ಪರೀಕ್ಷಾ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ನಿರುದ್ಯೋಗಿ ಯುವಕರ ಭವಿಷ್ಯ ರೂಪಿಸುವ ಈ ಪರೀಕ್ಷೆಗಳ ವಿಷಯದಲ್ಲಿ ನಿರ್ಲಕ್ಷ ಸಲ್ಲದು ಎಂದರು.

ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೂಜಾರ ಮಾತನಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲು 144 ಕಲಂ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿ ಕಾರಿಗಳು ಆದೇಶ ಹೊರಡಿಸಿದ್ದಾರೆ. ಸಿಇಟಿ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ  ಕೇಂದ್ರದಲ್ಲಿ ಮೊಬೈಲ್‌, ಕ್ಯಾಲ್ಕ್ಯುಲೇಟರ್‌, ಲಾಗ್‌ಟೇಬಲ್‌ ನಿಷೇಧಿ ಸಲಾಗಿದೆ. ಕೊಠಡಿ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ನಕಲುದಂತಹ ಆಕ್ರಮ ಚಟುವಟಿಕೆ ನಡೆಯಬಾರದು ಎಂದು ಸೂಚಿಸಿದರು.

ಸದರಿ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿತ ಅಧಿಕಾರಿ ಮತ್ತು ಅಭ್ಯರ್ಥಿಗಳು ನಿಗದಿತ ಸಮಯದಲ್ಲಿ ಹಾಜರಿರಬೇಕು. ಗೌಪ್ಯವಸ್ತು, ಉತ್ತರ ಪತ್ರಿಕೆ, ಒಎಂಆರ್‌ ಭದ್ರವಾಗಿ ಇಡಲು ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಉಪಮುಖ್ಯ ಅಧೀಕ್ಷಕ ಹೊರತುಪಡಿಸಿ ಬೇರಾರೂ ಮೊಬೈಲ್‌ ಬಳಸುವಂತಿಲ್ಲ. ಪರೀಕ್ಷೆಯು ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದ ಅವರು, ಯಾವುದೇ ರೀತಿಯ ಬೇಜವಾಬ್ದಾರಿ ಮತ್ತು ನಿರ್ಲಕ್ಷತೆ ವಹಿಸದಂತೆ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next