Advertisement

Vijayapura Incident; 7 ಕಾರ್ಮಿಕರ ಶವ ಪತ್ತೆ: ತಲಾ 5 ಲಕ್ಷ ರೂ ಪರಿಹಾರ ಘೋಷಣೆ

11:59 AM Dec 05, 2023 | keerthan |

ವಿಜಯಪುರ: ಗೋದಾಮಿನ ಕುಸಿದ ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ದುರಂತದಲ್ಲಿ ಮತ್ತೆ ಇಬ್ಬರು ಕಾರ್ಮಿಕರ ಶವಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 7ಕ್ಕೆ ಏರಿದೆ. ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘಟಕದ ಮಾಲೀಕ ಘೋಷಣೆ ಮಾಡಿದ್ದಾರೆ.

Advertisement

ಸೋಮವಾರ ಸಂಜೆ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜಗುರು ಫುಡ್ ಪ್ರೊಸೆಸ್ ಘಟಕದಲ್ಲಿ ಗೋವಿನಜೋಳ ತುಂಬಿರಿಸಿದ್ದ ಚೀಲಗಳ ನಿಟ್ಟು ಕುಸಿದು ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಬಿದ್ದಿದೆ. ಘಟನೆಯಲ್ಲಿ ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ಬಿಹಾರ ಮೂಲದ ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದರು.

ರಕ್ಷಣಾ ಕಾರ್ಯಾಚರಣೆ ಬಳಿಕ ಓರ್ವನನ್ನು ರಕ್ಷಿಸಿದ್ದು, ಏಳು ಜನರು ಶವವಾಗಿ ಪತ್ತೆಯಾಗಿದ್ದಾರೆ.

ಹೀಗಾಗಿ ರಾಜಗುರು ಫುಡ್ ಪ್ರೊಸೆಸ್ ಘಟಕದ ಮಾಲೀಕ ರಾಜಕಿಶೋರ ಜೈನ್, ಮೃತರ ಹಾಗೂ ಗಾಯಾಳುಗಳ ಕುಟುಂಬಗಳಿಗೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಘಟಕದ ಮಾಲೀಕ ಘೋಷಿಸಿರುವ ಪರಿಹಾರದ ಹೊರತಾಗಿಯೂ ಸರ್ಕಾರದಿಂದ ಪ್ರತ್ಯೇಕವಾಗಿ ಮೃತರ ಕುಟುಂಬದವರಿಗೆ ಪರಿಹಾರ ವಿತರಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ದುರಂತದಲ್ಲಿ ಮೃತರಾದವರನ್ನು ಬಿಹಾರ ಮೂಲದ ಕಿಶನ ಕುಮಾರ (20), ದಾಲನ್ ಮಖಿಯಾ (40), ರಾಜೇಶ್ ಮುಖಿಯಾ (25), ರಾಮಬ್ರೀಜ್ ಮುಖಿಯಿ (29), ಶಂಭು ಮುಖಿಯಾ (26), ಲುಖೋ ಜಾಧವ (45) ಹಾಗೂ ರಾಮ ಬಾಲಕ್ (52) ಎಂದು ಗುರುತಿಸಲಾಗಿದೆ.

ಇನ್ನೂ 6-7 ಕಾರ್ಮಿಕರು ಮೂಟೆಗಳ ಅಡಿಯಲ್ಲಿ ಸಿಲುಕಿರುವ ಅನುಮಾನದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next