Advertisement
ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆಯ ಆತ್ಮಾ ಯೋಜನೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಅಭಿಯಾನ ಹಾಗೂ ಪರ್ಯಾಯ ಬೆಳೆ ಪದ್ಧತಿ ಕುರಿತು ಜರುಗಿದ ರೈತ ವಿಜ್ಞಾನಿಗಳ ಚರ್ಚಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶೇ. 30 ಮಳೆ ಕೊರತೆಯಾಗಿದ್ದು, ಶೇ. 60 ಪ್ರದೇಶದಲ್ಲಿ ಕೇವಲ 15 ದಿನಗಳಲ್ಲಿ ಶೇ. 40 ಬಿತ್ತನೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಇಂತಹ ಬದಲಾವಣೆ ಎದುರಾಗಲಿವೆ ಎಂದರು.
Related Articles
Advertisement
ಆತ್ಮಾ ಯೋಜನೆ ರಾಜ ಸಮಿತಿ ಸದಸ್ಯೆ ಮಹಾದೇವಿ ಗೋಕಾಕ ಮಾತನಾಡಿ, ಮಣ್ಣು ಮತ್ತು ನೀರು ಸಂರಕ್ಷಣೆ ಮೂಲಕ ಪ್ರಕೃತಿ ಸಮತೋಲನ ಕಾಯುವಲ್ಲಿ ಮಹಿಳೆಯ ಪಾತ್ರವೇ ಹಿರಿದಾಗಿದೆ. ಹೀಗಾಗಿ ಮಹಿಳೆಯರು ಪರಿಸರ ಸ್ನೇಹಿತ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಸುರೇಶ ಗೊಣಸಗಿ, ಸಹ ಸಂಶೋಧನಾ ನಿರ್ದೇಶಕ ಡಾ| ಎಸ್.ಬಿ. ಕಲಘಟಗಿ ಮಾತನಾಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ| ಎಚ್.ಬಿ. ಬಬಲಾದ, ಆತ್ಮಾ ಯೋಜನೆ ಜಿಲ್ಲಾ ಉಪ ನಿರ್ದೇಶಕ ಡಾ| ಎಂ.ಬಿ. ಪಟ್ಟಣಶೇಟ್ಟಿ, ಕೃಷಿ ವಿಸ್ತರಣಾ ಮುಂದಾಳು ಡಾ| ಆರ್.ಬಿ. ಬೆಳ್ಳಿ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ| ಎಸ್.ಎ. ಬಿರಾದಾರ, ಪಶು ವಿಭಾಗದ ಡಾ| ಸಂಗೀತಾ ಜಾಧವ ರೈತರೊಂದಿಗೆ ಸಂವಾದ ನಡೆಸಿ ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಕೃಷಿಯಲ್ಲಿ ಪರಿಸರ ಸ್ನೇಹಿ ಕೆಲಸ ಮಾಡುವ ಕುರಿತು ವಿವರಿಸಿದರು.