Advertisement

ಕಾಶ್ಮೀರಿ ಹಿಂದೂಗಳಿಗೆ ಸೌಲಭ್ಯ ಕಲ್ಪಿಸಿ

04:01 PM Aug 26, 2019 | Naveen |

ವಿಜಯಪುರ: ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸಿ ಸೂಕ್ತ ಸೌಲಭ್ಯ ಒದಗಿಸಬೇಕು ಹಾಗೂ ರೋಹಿಂಗ್ಯಾ ಮುಸ್ಲೀಮರನ್ನು ದೇಶದಿಂದ ಹೊರ ದಬ್ಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Advertisement

ಈ ವೇಳೆ ನಗರಸಭೆ ಮಾಜಿ ಸದಸ್ಯ ರವೀಂದ್ರ ಕುಲಕರ್ಣಿ ಮಾತನಾಡಿ, 1990ರಲ್ಲಿ ಲಕ್ಷಾಂತರ ಮೂಲನಿವಾಸಿ ಕಾಶ್ಮೀರಿ ಹಿಂದೂಗಳನ್ನು ಭಯೋತ್ಪಾದಕರು ಹೊರ ಹಾಕಿದರು. ಪರಿಣಾಮ ಕಾಶ್ಮೀರಿ ಹಿಂದೂಗಳು ದೆಹಲಿ, ಹರಿಯಾಣದಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಈಗ ಕೇಂದ್ರ ಸರಕಾರ ಕಾಶ್ಮೀರಿ ಹಿಂದೂಗಳಿಗೆ ಗೌರವದಿಂದ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಪ್ರತೀಕ ಪೀರಾಪುರ ಮಾತನಾಡಿ, ಕಾಂಗ್ರೆಸ್‌ ಆಡಳಿತದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ರೈಲು (ನಂ.12614) ಇದನ್ನು ಓಲೈಕೆ ದೃಷ್ಟಿಯಿಂದ ಟಿಪ್ಪು ಎಕ್ಸ್‌ಪ್ರೆಸ್‌ ಎಂದು ಹೆಸರನ್ನು ಇಡಲಾಯಿತು. ಮತಾಂಧ, ಅಸಹಿಷ್ಣು, ಮೂರ್ತಿ ಭಂಜಕ, ಕನ್ನಡ ವಿರೋಧಿ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿರುವಾಗ, ಟಿಪ್ಪು ಹೆಸರಿನಲ್ಲಿ ರೈಲು ಓಡಿಸುವುದ ಸೂಕ್ತವಲ್ಲ. ಹೀಗಾಗಿ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾಯಿಸಿ ಕನ್ನಂಬಾಡಿ ಆಣೆಕಟ್ಟನ್ನು ಕಟ್ಟಿ ನಾಡಿಗೆ ನೀರು, ಬೆಳಕು ನೀಡಿದ ಶ್ರೀಕೃಷ್ಣರಾಜ ಒಡೆಯರ್‌ ಅವರ ಹೆಸರನ್ನು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಆಂಧ್ರಪ್ರದೇಶ ಸರಕಾರ ಕ್ರಿಶ್ಚಿಯನ್‌ ಫಾದರ್‌, ಮುಸ್ಲಿಂ ಇಮಾಮ ಮತ್ತು ಮೌಲಾನಾಗಳ ಮತದ ಲಾಭ ಪಡೆಯಲು ಅವರಿಗೆ ಮಾಸಿಕ ವೇತನ ನೀಡಲು ನಿರ್ಧರಿಸಿದ್ದು ಕೂಡಲೇ ಕೈ ಬಿಡಬೇಕು. ಉತ್ತರಪ್ರದೇಶದ ಚರ್ಚ್‌ ಸಂಸ್ಥೆಯ 1 ಸಾವಿರ ಕೋಟಿ ರೂ. ಮೌಲ್ಯದ ಭೂಮಿ ಮಾರಾಟದ ಹಗರಣವನ್ನು ಉನ್ನತ ತನಿಖೆ ವಹಿಸಬೇಕು. ಇತ್ತೀಚೆಗೆ ಚರ್ಚ್‌ನಲ್ಲಿ ನನ್‌ಗಳ ಮೇಲೆ ಪಾದ್ರಿಗಳ ಮೂಲಕ ನಡೆದಿರುವ ಲೈಂಗಿಕ ಶೋಷಣೆ ಅನೇಕ ಪ್ರಕರಣಗಳು ಬಹಿರಂಗವಾಗಿದೆ. ಸಂಕ್ಷಿಪ್ತವಾಗಿ ಚರ್ಚ್‌ ಹಗರಣ, ಅನೈತಿಕ ವ್ಯವಹಾರಗಳನ್ನು ಗಮನಿಸಿ ದೇಶಾದ್ಯಂತವಿರುವ ಎಲ್ಲ ಚರ್ಚ್‌ಗಳನ್ನು ಸರಕಾರೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಕಾಶ ಠಾಕೂರ, ಜಗದೀಶ ದೇವರಮನಿ, ರಾಮ ಪೋಳ, ರಘು ಕದಂ, ಶ್ರೀನಿವಾಸ ಭಂಡಾರಿ, ಮಂಜುನಾಥ ಬಿರಾದಾರ, ಕೃಷ್ಣಾ ಜಾಧವ, ಚೇತನ ವಾಠಾರಕರ, ಶ್ರೀಕಾಂತ ಪಾಟೀಲ, ರಮೇಶ ಬಿ. ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next