ಜನರು ಬಿಸಿಲಿನಿಂದ ಹೈರಾಣಾದ ದೇಹಕ್ಕೆ ತಂಪು ನೀಡಲು ಹಲವು ಮಾರ್ಗಗಳ ಮೊರೆ ಹೋಗುತ್ತಿದ್ದಾರೆ. ಇದರ ಒಂದು ಭಾಗವಾಗಿ ಪಾರಂಪರಿಕ ಮಣ್ಣಿನ ಮಡಿಕೆಗೂ ಬೇಡಿಕೆ ಹೆಚ್ಚಿದೆ.
Advertisement
ಭಾರತೀಯ ಪರಂಪರೆಯಲ್ಲಿ ಬೇಸಿಗೆಯ ಬಂಧು, ಬಡವ ಫ್ರಿಡ್ಜ್ ಎಂದೇ ಕರೆಸಿಕೊಂಡಿರುವ ಮಣ್ಣಿನ ಮಡಿಕೆಗೆ ಇದೀಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ವಿಜಯಪುರ ಜಿಲ್ಲೆಯ ಬಹುತೇಕ ನಗರ-ಪಟ್ಟಣಗಳ ಬೀದಿ ಬದಿಯಲ್ಲಿ ಇದೀಗ ಮಣ್ಣಿನ ಮಡಿಕೆಗಳು ಸದ್ದುಮಾಡುತ್ತಿವೆ.
ವಿಜ್ಞಾನದ ಆಧುನಿಕ ಆವಿಷ್ಕಾರಗಳಾದ ಫ್ರಿಡ್ಜ್, ಕೂಲರ್‌ಗಳಂಥ ಸಾಧನಗಳು ಮಾರುಕಟ್ಟೆ ಪ್ರವೇಶಕ್ಕೆ ಮುನ್ನ ಪಾರಂಪರಿಕವಾಗಿ ಮಡಿಕೆ, ಬೀಸಣಿಕೆಗಳಂಥ ಗುಡಿ ಕೈಗಾರಿಕೆಗಳಿಗೆ ಇದ್ದ ಬೇಡಿಕೆ
ಇದೀಗ ಇಲ್ಲವಾಗಿದೆ. ಪರಿಣಾಮ ಪರಂಪರೆಯಿಂದ ಕುಂಬಾರಿಕೆ ಮಾಡಿಕೊಂಡು ಜೀವಿಸುತ್ತಿದ್ದ ಕುಟುಂಬಗಳು ಇದೀಗ ಕಂಗಾಲಾಗಿವೆ. ರೋಗಕಾರಕ ಸಾಧನಗಳ ಬದಲಾಗಿ ನೈಸರ್ಗಿಕ ಹಾಗೂ ರೋಗ
ನಿರೋಧಕ ಸಾಧನವಾದ ಮಡಿಕೆಗಳ ಬಳಕೆಗೆ ಇದೀಗ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆರ. ಆದರೆ ಬೇಡಿಕೆ ತಕ್ಕಂತೆ ಮಣ್ಣಿನ ಮಡಿಕೆಗಳ ಸರಬರಾಜು ಆಸಾಧ್ಯವಾಗುತ್ತಿದೆ ಎಂಬುದು ಮಣ್ಣನ್ನೇ ನಂಬಿ ಬದುಕುತಿರುವ ಕುಂಬಾರ ಸಮುದಾಯದ ಆತಂಕ. ಹಿಂದಿನಿಂತೆ ಈಗ ಮಣ್ಣಿನ ಸಾಧನಗಳ ತಯಾರಿಕೆಗೆ ಬೇಕಿರುವ ಗುಣಮಟ್ಟದ ಮಣ್ಣಿನ ಕೊರತೆ, ವಿವಿಧ ಆಕಾರ, ಆಕ್ರತಿಗಳ ಮಣ್ಣಿನ ಮಡಿಕೆಗಳನ್ನು ಮಾಡುಲು ತಿಗರಿ ತಿರುಗಿಸುವ ಕೌಶಲ್ಯವೂ ಹೊಸ ತಲೆಮಾರಿನ ಜನರಿಗೆ ಇಲ್ಲವಾಗಿದೆ. ಹಳೆಯ ತಲೆಮಾರಿನ ಜನರಿಗೆ ನಿರೀಕ್ಷಿತ ಶಕ್ತಿ ಕುಂದಿದೆ. ಹೀಗಾಗಿ ಸ್ಥಳೀಯವಾಗಿ ಮಣ್ಣಿನ ಮಡಿಕೆ ಮಾಡುವುದಕ್ಕೆ ಪೂರಕ ಪರಿಸ್ಥಿತಿ
ಇಲ್ಲ. ಆದರೂ ಕುಂಬಾರಿಕೆ ಮಾಡಿಕೊಂಡೇ ಬದುಕು ಕಟ್ಟಿಕೊಂಡಿರುವ ಕುಂಬಾರರ ಕುಟುಂಬಗಳು ಪರಂಪರೆಯ ಉದ್ಯೋಗ ರಕ್ಷಣೆಗೆ ಹೆಣಗುವಂತಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಕುಂಬಾರರ ಪರಂಪರೆಯ ಉದ್ಯೋಗ ಸಂರಕ್ಷಣೆಗಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕಮಲಾಪುರ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಇಳಕಲ್ಲ, ಅಮೀನಗಡ ಮಾತ್ರವಲ್ಲ ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಇತರೆ ರಾಜ್ಯಗಳಿಂದ ಮಣ್ಣಿನ ಮಡಿಕೆಗಳನ್ನು ವಿಜಯಪುರಕ್ಕೆ ತರಿಸಿಕೊಂಡು ಮಾರುತ್ತಾರೆ. ಆದರೆ ದೂರದ ಊರುಗಳಿಂದ
ವಾಹನದಲ್ಲಿ ಸೂಕ್ಷ್ಮಸಾಗಾಣಿಕೆ ಬೇಡುವ ಮಡಿಕೆಗಳು ಮಾರ್ಗ ಮಧ್ಯದಲ್ಲೇ ಹಲವುಬಾರಿ ಹಾನಿಗೀಡಾಗುತ್ತವೆ. ಇಂಥ ಸಂದರ್ಭದಲ್ಲಿಕುಂಬಾರರು ನಷ್ಟ ಆನುಭವಿಸುತ್ತಾರೆ. ಆದರೆ
ಇವರ ಉದ್ಯೋಗಕ್ಕೆ ವರ್ಷದ ಭದ್ರತೆ ಇಲ್ಲ.
Related Articles
ಪಾಲಿಕೆ ಆಧಿಕಾರಿಗಳು ಮಡಿಕೆಗಳನ್ನು ಹೇಳದೇ ಕೇಳದೇ ಹೊತ್ತೂಯ್ಯುವುದರಿಂದ ಕುಂಬಾರ ಕುಟುಂಬಗಳ ಕಣ್ಣಿರು ಆಡಳಿತಗಾರಿಗೆ ಕಣ್ಣಿಗೆ ಬಿದ್ದಿಲ್ಲ.
Advertisement
ಹಲವು ಸಂದರ್ಭಗಳಲ್ಲಿ ಮಡಿಕೆಗಳನ್ನು ಒಡೆದು ಹಾಕುವ ಕಾರಣ ಕುಂಬಾರ ಕುಟುಂಬಗಳು ಆರ್ಥಿಕ ನಷ್ಟ ಆನುಭವಿಸುವ ಜೊತೆಗೆ ಸಾಲದ ಸುಳಿಗೂ ಸಿಲಕುವ ದುಸ್ಥಿತಿ ಎದುರಾದ ಘಟನೆಗಳಿವೆ ಎಂದು ಕುಂಬಾರರು ನೋವಿನಿಂದ ಹೇಳುತ್ತಾರೆ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಯಾವ ಸಾಲ-ಸೌಲಭ್ಯ ಕಲ್ಪಿಸದಿದ್ದರೂ ಸರಿ, ಕನಿಷ್ಠ ಬೀದಿ ಬದಿಯಲ್ಲಿ ಏನೆಲ್ಲ ಸಂಕ್ಟಗಳಿಂದ ಜೀವನ ರೂಪಿಸಿಕೊಳ್ಳುತ್ತಿರುವ ನಮಗೆ ತೊಂದರೆ ಕೊಡದಿದ್ದರೆ ಸಾಕು ಎಂಬ ನಿವೇದನೆ ಮಾಡಿಕೊಳ್ಳುತ್ತಾರೆ.ಅಧಿಕಾರಿಗಳು ಇವರ ಭಾವನೆಗಳಿಗೆ ಸ್ಪಂದಿಸಿದರೆ ಸಾಕು. ಕುಲಕಸಬು ಮಾಡಿಕೊಂಡು ಜೀವಿಸುತ್ತಿರುವ ನಮ್ಮದು ಬೀದಿ
ಬದಿ ವ್ಯಾಪಾರ. ಇದರ ಹೊರತಾಗಿ ನಮಗೆ ಪರ್ಯಾಯ ಉದ್ಯೋಗ ತಿಳಿದಿಲ್ಲ. ಸ್ಥಳೀಯವಾಗಿ ಮಣ್ಣು ಹಾಗೂ ಇತರೆ ಸಂಪನ್ಮೂಲದ ಕೊರತೆಯ ಕಾರಣ ದೂರದ ಸ್ಥಳಗಳಿಂದ ಮಣ್ಣಿನ ಮಡಿಕೆಗಳನ್ನು ಸಾಗಿಸುವಾಗ ಒಡೆದು ನಷ್ಟವಾಗುತ್ತದೆ. ಈ ನಷ್ಟ ಹಾಗೂ ಹಾಕಿರುವ ಬಂಡವಾಳ, ಬಡ್ಡಿಯನ್ನೆಲ್ಲ ಕಳೆದು ಉಳಿಯುವ ಲಾಭ ತೀರಾ ಕಡಿಮೆ. ಹೀಗಾಗಿ ಸ್ಥಳೀಯ ಸಂಸ್ಥೆಗಳು ನಮಗೆ ಶಾಶ್ವತ ಮಾರುಕಟ್ಟೆಗೆ ವ್ಯವಸ್ಥೆ ಮಾಡಿಕೊಡಬೇಕು.
.ಗುಬ್ಬವ್ವ ಯಮನಪ್ಪ ಕುಂಬಾರ,
ಮಡಿಕೆ ವ್ಯಾಪಾರಿ, ಸ್ಟೇಶನ್ ರಸ್ತೆ, ವಿಜಯಪುರ ಬೇಸಿಗೆ ಹೊರತಾಗಿ ವರ್ಷ ಪೂರ್ತಿ ಮಣ್ಣಿನ ಸಾಮಗ್ರಿಗಳಿಗೆ ಬೇಡಿಕೆ ಇಲ್ಲದ ಕಾರಣ ಮಡಿಕೆ ಮಾಡುವ ನಮ್ಮ ಪರಂಪರೆ ರಕ್ಷಿಸಿಕೊಂಡು ಹೋಗುವುದು ಕಷ್ಟಸಾಧ್ಯವಾಗಿದೆ. ಬೇಸಿಗೆಯ ಈ ಸಂದರ್ಭದಲ್ಲಿ ದಿನಕ್ಕೆ 3-4 ಸಾವಿರ ರೂ. ವ್ಯಾಪಾರವಾಗುತ್ತದೆ. ನೆರೆಯ ಜಿಲ್ಲೆಗಳು ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದಲೂ ದೂರದ ಊರುಗಳಿಂದ ಮಡಿಕೆಗಳನ್ನು ತರಿಸುತ್ತೇವೆ. ಕಾರಣ ಸಾಗಾಣಿಕೆ ವೆಚ್ಚ ಸೇರಿ ಆದಾಯ ಹೆಚ್ಚಿದರೂ ಲಾಭ ಕಡಿಮೆ ಇದೆ.
.ರಾಜು ಕುಂಬಾರ, ಮಡಿಕೆ ವ್ಯಾಪಾರಿ,
ಸ್ಟೇಡಿಯಂ ಪ್ರದೇಶ, ವಿಜಯಪುರ ದೂರದ ಊರುಗಳಿಂದ ಮಡಿಕೆ, ಗಡಿಗೆಗಳನ್ನು ತರಿಸಿ ಮಾರುವ ಕಾರಣ ಲಾಭ ಕಡಿಮೆ ಇದ್ದರೂ ಬೇಸಿಗೆಯಾಗಿರುವ ಕಾರಣ ತ್ತಮ ವ್ಯಾಪಾರವಿದೆ. ಬಿಸಿಲು ಹೆಚ್ಚಿದಂತೆ ಅಧುನಿಕ ಜೀವನ ಶೈಲಿ ಸಾಧನಗಳು ಮಾರುಕಟ್ಟೆಗೆ ಬಂದಿದ್ದರೂ ಪಾರಂಪರಿಕ ಮಡಿಕೆಗಳಿಗೆ ಬೇಡಿಕೆ ಇದ್ದೇ ಇದೆ. ಮಣ್ಣು, ಗುಣಮಟ್ಟ, ಗಾತ್ರದ
ಆಧಾರದಲ್ಲಿ 150ರಿಂದ 350 ರೂ. ವರೆಗೆ ಒಂದೊಂದು ಮಡಿಕೆ ಮಾರಾಟ ಮಾಡುತ್ತೇವೆ.
.ಹನುಮಂತ ಕುಂಬಾರ, ವಿಜಯಪುರ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ
ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಳ್ಳಲು ನಮ್ಮ
ತಕರಾರು ಇಲ್ಲ. ಕುಂಬಾರರು ಸೇರಿದಂತೆ ಬಹುತೇಕ
ವ್ಯಾಪಾರಿಗಳು ಫುಟ್‌ಪಾತ್ ಮಾತ್ರವಲ್ಲ ರಸ್ತೆಯನ್ನೂ
ಅತಿಕ್ರಮಿಸುತ್ತಾರೆ. ಇಂಥ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ
ಸಾರ್ವಜನಿಕರು, ವ್ಯಾಪಾರಿಗಳ ಜೀವಕ್ಕೂ ಅಪಾಯಜ ಎಂಬ ಎಚ್ಚರಿಕೆ ನೀಡಿರುತ್ತೇವೆ. ಇದರ ಹೊರತಾಗಿ ಪಾಲಿಕೆಯಿಂದ
ಕುಂಬಾರರಿಂದ ಆಕ್ರಮವಾಗಿ ಹಣ ವಸೂಲಿ, ಬೆದರಿಕೆ
ಸೇರಿದಂತೆ ಯಾವುದೇ ತೊಂದರೆ ನೀಡುತ್ತಿಲ್ಲ. ಅಂಥ ಪ್ರಕರಣಗಳು
ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುತ್ತದೆ.
.ಡಾ| ಔದ್ರಾಮ್,
ಪಾಲಿಕೆ ಆಯುಕ್ತ ಜಿ.ಎಸ್. ಕಮತರ