Advertisement

Vijayapura: ಮಹಾನಗರ ಪಾಲಿಕೆಯಲ್ಲಿ ರಾತೋರಾತ್ರಿ ಗಣೇಶ ಪ್ರತಿಷ್ಠಾಪನೆ

11:23 AM Sep 08, 2024 | |

ವಿಜಯಪುರ: ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಶನಿವಾರ ರಾತೋರಾತ್ರಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ವರ್ಷ ಪಾಲಿಕೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಈ ಬಾರಿ ಗಣೇಶ ಮೂರ್ತಿ ಕೂರಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ಬಿಜೆಪಿ ಸದ್ಯಸರು, ಇತರರು ರಾತ್ರಿ 11 ಗಂಟೆ ಸುಮಾರಿಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

Advertisement

ಪಾಲಿಕೆಯ ಪ್ರವೇಶ ಕಟ್ಟಡದಲ್ಲಿ ಸದಸ್ಯರಾದ ರಾಜಶೇಖರ್ ಮಗಿಮಠ, ಕಿರಣ್ ಪಾಟೀಲ್, ರಾಹುಲ್ ಜಾಧವ್, ಜವಾಹರ್ ಗೋಸ್ವಾವಿ, ಮಲ್ಲಿಕಾರ್ಜುನ್ ಗಡಗಿ, ಶಿವರುದ್ರ ಬಾಗಲಕೋಟೆ ಇತರರು ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಅಲ್ಲದೆ, ಈ ವೇಳೆ ಜಮೀರ್ ಬಾಂಗಿ, ಬಂದೆ ನಮಾಜ್ ಬೀಳಗಿ, ರಾಜೇಶ್ ದೇವಗಿರಿ ಇದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಿವರುದ್ರ ಬಾಗಲಕೋಟೆ, ಪ್ರತಿ ವರ್ಷ ಪಾಲಿಕೆಯಲ್ಲಿ‌ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಗಣಪತಿ ಹಬ್ಬದ ಆಚರಣೆ ಮಾಡಿಲ್ಲ. ಆದ್ದರಿಂದ ಈ ವಿಷಯ ತಿಳಿದ ಕೂಡಲೇ ರಾತ್ರಿ ಹೋಗಿ ಗಣೇಶ ಮೂರ್ತಿ ಕೂರಿಸಿದ್ದೇವೆ. ಈ ವೇಳೆ ಕಾಂಗ್ರೆಸ್ ನವರು ಕೂಡ ಇದ್ದರು ಎಂದು ತಿಳಿಸಿದರು.

ಸ್ಥಳಕ್ಕೆ ಜಲನಗರ ಠಾಣೆ ಪೊಲೀಸರು ಸಹ ಆಗಮಿಸಿದ್ದರು. ಕಳೆದ ಜುಲೈನಲ್ಲೂ ಪಾಲಿಕೆ ಕಟ್ಟಡದಲ್ಲಿ ಅಂಬೇಡ್ಕರ್ ಮೂರ್ತಿ ಇಡಲಾಗಿತ್ತು. ಈಗ ಗಣೇಶ ಇಟ್ಟಿರುವ ಜಾಗದ ಸ್ವಲ್ವ ದೂರದ ಮುಂಭಾಗದಲ್ಲೇ ಅಂಬೇಡ್ಕರ್ ಮೂರ್ತಿ ಇಡಲಾಗಿತ್ತು. ಆಗ ರಾತೋರಾತ್ರಿ ಅಂಬೇಡ್ಕರ್ ಮೂರ್ತಿ ತೆರವು ಮಾಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next