Advertisement
ಶನಿವಾರ ನಗರದಲ್ಲಿ ಪೊಲೀಸ್ ಇಲಾಖೆ ಚಿಂತನಾ ಹಾಲ್‌ನಲ್ಲಿ ಹಿಂದೂ ಸಮುದಾಯದ ಮುಖಂಡರು ಹಾಗೂ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕ ಶಾಂತಿಪಾಲನಾ ಸಭೆಗಳನ್ನು ನಡೆಸಿ ಅವರು ಮಾತನಾಡಿದರು.
Related Articles
Advertisement
ಎಲ್ಲ ಸಮುದಾಯ ಯುವ ಜನಾಂಗಗಳು ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಉದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಎರಡೂ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿಕೊಂಡರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇಂದಿನಿಂದ ಎರಡು ದಿನ ಪಟಾಕಿ ಮತ್ತು ವಿಜೃಂಭಣೆಯಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.ಅದರಂತೆ ಜಿಲ್ಲೆಯಾದ್ಯಂತ 144ಕಲಂ ರನ್ವಯ ನಿಷೇಧಾಜ್ಞೆ ಕೂಡ ಜಾರಿಯಲ್ಲಿರಲಿದೆ. ಎಲ್ಲ ಸಮುದಾಯದವರು ಸೋಲು-ಗೆಲುವು ಎಂಬ ಭಾವನೆಗಳನ್ನು ತೊರೆದು, ನ್ಯಾಯಾಲಯದ ತೀರ್ಪಿಗೆ ಗೌರವಿಸಬೇಕು. ನ್ಯಾಯಾಲಯದ ತೀರ್ಪನ್ನು ಸ್ವೀಕರಿಸುವಂತೆ ಮನವಿ ಮಾಡಿದ ಅವರು, ಶಾಂತಿ ಭಂಗ ತರುವಂತಹವರ ಬಗ್ಗೆ ನಿಗಾ ಇಡುವಂತೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ನಿರಂತರ ಪೆಟ್ರೋಲಿಂಗ್ ಕಾರ್ಯ ನಡೆಯಲಿದ್ದು, ಯುವ ಜನಾಂಗ ವಿಶೇಷವಾಗಿ ವ್ಯಾಟ್ಸ್‌ಆ್ಯಪ್ ಹಾಗೂ ಫೇಸ್ ಬುಕ್‌ಗಳಲ್ಲಿ ಈ ವಿವಾದಕ್ಕೆ ಸಂಬಂಧಪಟ್ಟಂತೆ ಸಮಾಜಕ್ಕೆ ತರವಲ್ಲದ ರೀತಿಯಲ್ಲಿ ಕಮೆಂಟ್ ಹಾಕದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಸಮಾಜದ ಮುಖಂಡರು ಸಹ ಯುವ ಜನಾಂಗರಲ್ಲಿ ಮನವರಿಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಲ್ಲದೇ ಈದ್-ಮಿಲಾದ್ ಹಬ್ಬದ ಪ್ರಯುಕ್ತ ಆಸಾರ್ ಮಹಲ್ ವರೆಗೆ ಮೆರವಣಿಗೆ ಹಾಗೂ ನ. 10ರಂದು ಈದ್-ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.
ಈ ಎರಡೂ ಸಭೆಗಳಲ್ಲಿ ಹಿಂದೂ-ಮುಸ್ಲಿಂ ಸಮಾಜದ ಮುಖಂಡರು ಪಾಲ್ಗೊಂಡಿದ್ದು ಶಾಂತಿ ಹಾಗೂ ಸೌಹಾರ್ದ ಕಾಪಾಡಿಕೊಳ್ಳುವುದಾಗಿ ಜಿಲ್ಲಾಡಳಿತ-ಪೊಲೀಸ್ ಇಲಾಖೆಗೆ ಭರವಸೆ ನೀಡಿದರು.