Advertisement

ಬೇಡಿಕೆ ಈಡೇರಿಕೆಗೆ ಮಾಜಿ ದೇವದಾಸಿಯರ ಆಗ್ರಹ

03:44 PM Jun 23, 2019 | Team Udayavani |

ವಿಜಯಪುರ: ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2018 ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಜಿಲ್ಲಾ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ದೇವದಾಸಿ ಮಹಿಳೆಯರ ಒಕ್ಕೂಟದ ನೇತೃತ್ವದಲ್ಲಿ ಮಾಜಿ ದೇವದಾಸಿಯರು ಶನಿವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

Advertisement

ನಗರದ ಡಾ| ಅಂಬೇಡ್ಕರ್‌ ವೃತ್ತದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಈ ವೇಳೆ ಅಳಲು ತೋಡಿಕೊಂಡ ಮಾಜಿ ದೇವದಾಸಿಯರು, ‘ನಾವು ಜನ್ಮ ತಾಳುತ್ತಲೇ ದೇವದಾಸಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಬಂದವರಲ್ಲ. ನಮಗೆ ನಮ್ಮ ಪೂರ್ವಜರು ಒತ್ತಾಯ ಪೂರ್ವಕವಾಗಿ ಈ ವೃತ್ತಿಗೆ ತಳ್ಳಿದ್ದಾರೆ. ಹಿಂದಿನ ಕಾಲದಲ್ಲಿ ದೇವದಾಸಿ ಮಾಡುವ ಉದ್ದೇಶ ದೇವರದಾಸಿ ಅಂದರೆ ದೇವರ ಸೇವಕಿ ಎಂಬ ಅರ್ಥವಿತ್ತು. ಆದರೆ ಅದು ಮುಂದುವರಿದು ದೇವದಾಸಿಯರನ್ನು ಭೋಗದ ವಸ್ತುವಾಗಿ ಉಪಯೋಗಿಸಿದರು ಎಂದು ನೋವು ತೋಡಿಕೊಂಡರು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ದೇವದಾಸಿ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2018 ಅನುಷ್ಠಾನಗೊಳಿಸುವುದು, ಮಾಜಿ ದೇವದಾಸಿಯವರಿಗೆ ದೊರೆಯುವ ಮಾಸಿಕ ಪಿಂಚಣಿ ಏರಿಕೆ ಮಾಡುವುದು, ಸಮೀಕ್ಷೆಯಲ್ಲಿರುವ ಎಲ್ಲ ದೇವದಾಸಿಯವರಿಗೂ ಗುರುತಿನ ಪತ್ರ ವಿತರಿಸುವುದು, ಮಾಜಿ ದೇವದಾಸಿಯವರ ಮರು ಸಮೀಕ್ಷಾ ಕಾರ್ಯ ಕೈಗೊಂಡು ಸಮೀಕ್ಷೆಯಿಂದ ಹೊರಗುಳಿದ ದೇವದಾಸಿಯವರ ಹೆಸರು ನೋಂದಾಯಿಸಿಕೊಳ್ಳುವುದು, ಮಾಜಿ ದೇವದಾಸಿಯವರಿಗೆ ದೊರೆಯುವ ಪಿಂಚಣಿ ಹಾಗೂ ಯಾವುದೇ ಸೌಲಭ್ಯಗಳು ತಾಲೂಕು ಮಟ್ಟದ ಕಾರ್ಯ ನಿರ್ವಾಹಕ ಹಾಗೂ ಮದ್ಯವರ್ತಿಗಳ ಪಾಲಾಗದೆ ನೇರವಾಗಿ ಅರ್ಹ ಪಲಾನುಭವಿಗಳಿಗೆ ದೊರಕುವಂತೆ ಮಾಡುವುದು, ದೇವದಾಸಿ ಪುನರ್ವಸತಿ ನಿಗಮದಡಿ ಮನೆ ಕಟ್ಟಲು ಇರುವ ಸಹಾಯಧನ ಏರಿಕೆ ಮಾಡುವುದು, ತಾಲೂಕಾವಾರು ಜನ ಸಭೆ ನಡೆಸಿ ಮಾಜಿ ದೇವದಾಸಿಯರ ಅಹವಾಲು ಆಲಿಸುವುದು, ಉಚಿತ ವೈದ್ಯಕೀಯ ನೆರವು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾ| ಪ್ರಾನ್ಸಿಸ್‌ ಬಾಲರಾಜ್‌, ಸ್ಲಂ ಸಮಿತಿ ಮುಖಂಡ ಅಕ್ರಂ ಮಾಶ್ಯಾಳಕರ, ನಿರ್ಮಲಾ ಹೊಸಮನಿ, ಸಿಸ್ಟರ್‌ ಶಾಂತಿ, ಸಿಸ್ಟರ್‌ ಮೇಬಲ್ ಪಿಂಟೊ, ಸಿಸ್ಟರ್‌ ಫಾತಿಮಾ, ಸಿಸ್ಟರ್‌ ಶೋಭಾ, ಮಹಾದೇವಿ ಹುಲ್ಲೂರ, ನಾಗಮ್ಮ, ಡುಗ್ಗಮ್ಮಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next