Advertisement
ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ನಗರದ ಸಾರ್ವಜನಿಕರಲ್ಲಿ ಅಗ್ನಿ ಶಮನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದ ಶಿವಾಜಿ ವೃತ್ತದಿಂದ ಮಹಾತ್ಮ ಗಾಂಧಿಧೀಜಿವೃತ್ತ, ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ್ ವೃತ್ತದವರಗೆ ಅಗ್ನಿಶಾಮಕ ವಾಹನಗಳ ರ್ಯಾಲಿ ಮಾಡಿ ಮತ್ತು ಸಾರ್ವಜನಿಕರಿಗೆ ಕರ ಪತ್ರಗಳನ್ನು ಹಂಚಲಾಯಿತು.
ಕೇಂದ್ರಿಯ ವಿದ್ಯಾಲಯ, ಕೆಎಸ್‌ಆರ್ ಟಿಸಿ ಕಾರ್ಯಗಾರ ಘಟಕಗಳು, ಸಣ್ಣ ಕೈಗಾರಿಕೆಗಳು, ಪೇಟ್ರೊಲ್ ಬಂಕ್‌ಗಳು ಮತ್ತು ಬಟ್ಟೆ ಮಳಿಗೆಗಳಲ್ಲಿ ಅಗ್ನಿಶಮನದ ಬಗ್ಗೆ ಉಪನ್ಯಾಸ ಮತ್ತು ಅಣುಕು ಪ್ರದರ್ಶನ ಮಾಡಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು. 14-4-1944ರಂದು ಮುಂಬೈ ಬಂದರಿನಲ್ಲಿ ಮದ್ದು ಗುಂಡುಗಳನ್ನು
ಸಾಗಿಸುತ್ತಿದ್ದ ಎಸ್‌ಎಸ್ ಸ್ಪೋರ್ಟ್‌ಸ್ಪಿಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿತ್ತು. ಆ ಸಂದರ್ಭದಲ್ಲಿ ಬೆಂಕಿ
ನಂದಿಸಲು ಮುಂಬೆ„ ಫೈರ್ ಬ್ರಿಗೇಡ್‌ನ ಅಧಿಕಾರಿ, ಸಿಬ್ಬಂದಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಫೋಟಗೊಂಡು
66 ಜನ ಅಧಿಕಾರಿ-ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಈ ಹುತಾತ್ಮರ ಸ್ಮರಣಾರ್ಥ ಏಪ್ರಿಲ್ 14ನೇ ದಿನಾಂಕದಂದು ಅಗ್ನಿಶಾಮಕ ಸೇವಾ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
Related Articles
ಎಲ್ಲ ಅ ಧಿಕಾರಿ, ಸಿಬ್ಬಂದಿಗೆ ಈ ದಿನ ಸ್ಮರಣೀಯವಾಗಿದೆ. ಹೀಗಾಗಿ ಏಪ್ರಿಲ್ -14ರಿಂದ 20ರವರೆಗೆ ದೇಶಾದ್ಯಂತ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ಅದರೊಂದಿಗೆ ಅಗ್ನಿ ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು ಪ್ರತಿ ವರ್ಷವೂ ಅಗ್ನಿಶಾಮಕ ಸೇವಾ
ಸಪ್ತಾಹ ಆಚರಿಸಲಾಗುತ್ತದೆ. ಇದರಿಂದ ಸಾರ್ವಜನಿಕರಲ್ಲಿ ಅಗ್ನಿ ಶಮನ ಹಾಗೂ ಸುರಕ್ಷತೆ ಬಗ್ಗೆ ಅಣುಕು ಪ್ರದರ್ಶನಗಳು ಮತ್ತು ಉಪನ್ಯಾಸಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವು ಈ ಸಪ್ತಾಹದ ಉದ್ದೇಶ ಎಂದು ರಂಗನಾಥ್ ವಿವರಿಸಿದರು.
Advertisement