ವಿಜಯಪುರ: ತುಂಬಿ ಹರಿಯುತ್ತಿದ್ದ ಹಳ್ಳದ ಪ್ರವಾಹದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೊಚ್ಚಿ ಹೋಗಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ ಘಟನೆ ಜರುಗಿದೆ.
ವಿಜಯಪುರ ತಾಲೂಕಿನ ಅತ್ತಾಲಟ್ಟಿ ಗ್ರಾಮದ ನಿವಾಸಿ ಬಂದೇನವಾಜ್ ಮೊಕಾಶಿ ಪ್ರವಾಹದಲ್ಲಿ ಕೊಚ್ಚಿಹೋದರೂ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ವ್ಯಕ್ತಿ.
ಬಂದೇನವಾಜ್ ಸಾರವಾಡ ಗ್ರಾಮದಿಂದ ಅತ್ತಾಲಟ್ಟಿ ಗ್ರಾಮಕ್ಕೆ ಬೈಕನಲ್ಲಿ ಹೊರಟಿದ್ದಾಗ ಮಾರ್ಗ ಮಧ್ಯೆ ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದ.
ಕೊಚ್ಚಿ ಹೋದರೂ ಸುಮಾರು 500 ಅಡಿ ದೂರ ಹೋಗುತ್ತಲೇ ಹಳ್ಳದಲ್ಲಿನ ಬೆಳೆದಿದ್ದ ಮುಳ್ಳಿನ ಕಂಟಿಗೆ ಸಿಲುಕಿದ್ದರಿಂದ ರಕ್ಷಣೆ ಪಡೆದಿದ್ದ. ಅಲ್ಲದೇ ತನ್ನ ಮೊಬೈಲ್ ಕರೆ ಮಾಡಿ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:ಸಚಿವರುಗಳ ದಿಢೀರ್ ಖಾತೆ ಬದಲಾವಣೆ: ಬಿಜೆಪಿ ನಾಯಕರಲ್ಲಿ ಅಸಮಾಧಾನ, ರಾಮುಲು ಬೇಸರ
ಕೂಡಲೇ ಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಬಂದೇನವಾಜ್ ನನ್ನು ರಕ್ಷಣೆ ಮಾಡಿ, ಪ್ರವಾಹದಿಂದ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಹೊರ ತಂದಿದ್ದಾರೆ.