Advertisement

ವಿಜಯಪುರ: ತವರು ಮನೆಯವರಿಂದ ಜೀವ ಭಯ; ರಕ್ಷಣೆ ಕೋರಿದ ವಿಧವೆ

07:58 PM May 16, 2022 | Vishnudas Patil |

ವಿಜಯಪುರ : ನನ್ನ ಪತಿಯನ್ನು ಹತ್ಯೆ ಮಾಡಿರುವ ನನ್ನ ತವರಿನವರು, ಪ್ರಕಣದಲ್ಲಿರುವ ಕೆಲವರು ಈಗಲೂ ಜೈಲಿನಿಂದ ಹೊರಗಿದ್ದಾರೆ. ಹೀಗಾಗಿ ನಮ್ಮ ನನಗೆ ಹಾಗೂ ಗಂಡನ ಮನೆಯವರ ಜೀವಕ್ಕೆ ಅಪಾಯವಿದ್ದು, ಸೂಕ್ತ ಕಾನೂನು ಕ್ರಮವಾಗದೇ ನಮ್ಮ ಜೀವಕ್ಕೆ ಅಪಾಯವಾದಲ್ಲಿ ಪೊಲೀಸ್ ಇಲಾಖೆ ನೇರ ಹೊಣೆ ಆಗಲಿದೆ. ಕೂಡಲೇ ನನಗೆ ಹಾಗೂ ನನ್ನ ಪತಿಯ ಕುಟುಂಬದವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ವಿಧವೆಯೊಬ್ಬರು ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅತಿಯಾ ಹುಮೈಸ್ ಕೂಡಗಿ ಎಂಬ ಗರ್ಭಿಣಿ ಮಹಿಳೆ, ನನ್ನ ತಂದೆ ರವೂಫ್ ಶೇಖ್, ಅಣ್ಣ ಅತೀಫ್, ದೊಡ್ಡಪ್ಪಂದಿರಾದ ಅನೀಸ್ ಅಹ್ಮದ್, ರಯೀಸ್ ಉಸ್ಮಾನ್, ಚಿಕ್ಕಪ್ಪ ಇಸಾಕ್, ಸೋದರತ್ತೆ ಫಮೀದಾ ಇವರು ಸೇರಿಕೊಂಡು ಕಳೆದ ಫೆ.15 ರಂದು ನನ್ನ ಪತಿ ಮುಸ್ತಕೀಮ್ ಕೂಡಗಿ ಇವರನ್ನು ಹತ್ಯೆ ಮಾಡಿದ್ದಾರೆ. ನನ್ನ ಪತಿ ಕ್ರೈಂ ವಿಭಾಗದ ವಿಜಯಪುರ ನಗರದ ಗಾಂಧೀಚೌಕ್ ಪೊಲೀಸ್ ಠಾಣೆ ಪಿಎಸ್‍ಐ ಆಗಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಬದಲಾಗಿ ಗಂಡನ ಮನೆಯ ಕುಟುಂಬದ ಇತರೆ ಸದ್ಯರಿಗೆ ಜೀವ ಭಯ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.

ಇದಲ್ಲದೇ ನನ್ನ ಪತಿಯ ಹತ್ಯಾ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ನನ್ನ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಇವರನ್ನು ಬಂಧಿಸದ ಕಾರಣ ಅವರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಅಲ್ಲದೇ ಆರೋಪಿಗಳಾಗಿರುವ ಕೆಲವರು ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರು ತೆಗೆಸುವ ಯತ್ನ ನಡೆಸಿದ್ದಾರೆ. ಅಲ್ಲದೇ ನನ್ನ ಪತಿಯ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲು ಮುಂದಾಗಿದ್ದಾರೆ. ಹೀಗಾಗಿ ಕೂಡಲೇ ನಮಗೆ ರಕ್ಷಣೆ ನೀಡಬೇಕು ಹಾಗೂ ನನ್ನ ಪಿತಯ ಹತ್ಯಾ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿರುವ ಕಾರಣ ತನಿಖೆಯನ್ನು ಸಿಐಡಿ ಅಥವಾ ಸಿಬಿಐ ತನಿಖಾ ಸಂಸ್ಥೆಗಳಿಗೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next