ವಿಜಯಪುರ: ಜಿಲ್ಲೆಯಲ್ಲಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರ 34 ಪ್ರಕರಣಗಳಲ್ಲಿ ಪರಿಹಾರ ವಿತರಿಸಿದೆ. ಆತ್ಮಹತ್ಯೆ, ಕೃಷಿ ಚಟುವಟಿಕೆ ಸಂದರ್ಭದಲ್ಲಿ ಆಕಸ್ಮಿಕ ಮರಣ ಹಾಗೂ ಹಾವು ಕಡಿತ ಪ್ರಕರಣದಲ್ಲಿ ಮೃತರಾದ ರೈತರ ಕುಟುಂಬಗಳಿಗೆ 1.27 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿಂದಗಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 8 ರೈತರ ಕುಟುಂಬಗಳಿಗೆ 40 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ 5 ರೈತರ ಕುಟುಂಬಗಳಿಗೆ 9 ಲಕ್ಷ ರೂ, ವಿತರಿಸಲಾಗಿದೆ.
ಇಂಡಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 6 ರೈತರ ಕುಟುಂಬಗಳಿಗೆ 30 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ 3 ರೈತರ ಕುಟುಂಬಗಳಿಗೆ 6 ಲಕ್ಷ ರೂ, ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ 4 ರೈತರ ಕುಟುಂಬಗಳಿಗೆ 8 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ಇದನ್ನೂ ಓದಿ: ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ ಪವರ್ ಸ್ಟಾರ್
ವಿಜಯಪುರ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ 4 ರೈತರ ಕುಟುಂಬಗಳಿಗೆ 20 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ ಓರ್ವ ರೈತನ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಹಾವು ಕಡಿತದಿಂದ ಮೃತಪಟ್ಟ ಓರ್ವ ರೈತನ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ಮುದ್ದೇಬಿಹಾಳ ತಾಲೂಕಿನ ಆತ್ಮಹತ್ಯೆ ಮಾಡಿಕೊಂಡ ಓರ್ವ ರೈತನ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಹಾವು ಕಡಿತದಿಂದ ಸಾವನ್ನಪ್ಪಿದ ಓರ್ವ ರೈತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದ ರಾಹುಲ್! ನಾನು ಕ್ಷಮೆ ಕೇಳುವುದಿಲ್ಲವೆಂದ ಕಮಲ್ ನಾಥ್