Advertisement
ರಾಷ್ಟ್ರ ಮಟ್ಟದಲ್ಲಿರುವ ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ (ಎಸ್‌ಎಫ್ ಎಸಿ) ಮಾರ್ಗದರ್ಶನದಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ 4 ತಾಲೂಕುಗಳ ರೈತರು 2017ರಲ್ಲಿ ತಾವೇ ಮಾಲೀಕರಾಗಿರುವ ಕಂಪನಿಗಳನ್ನು ಕಟ್ಟಿಕೊಂಡಿದ್ದಾರೆ. ಕೊಲ್ಹಾರ ಪಟ್ಟಣದಲ್ಲಿ ಬಸವನಬಾಗೇವಾಡಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ತಿಕೋಟಾ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ಬಿಜಾಪುರ ತೋಟಗಾರಿಕೆ ಉತ್ಪಾದಕರ ಕಂಪನಿ, ಇಂಡಿ ತಾಲೂಕಿನ ಶಾಂತೇಶ್ವರ ಹಾರ್ಟಿಕಲ್ಚರ್ ಪ್ರೊಡ್ನೂಸರ್ ಕಂಪನಿ ಹಾಗೂ ಸಿಂದಗಿ ತಾಲೂಕಿನಲ್ಲಿ ಸಿಂದಗಿ ತಾಲೂಕುಹಾರ್ಟಿಕಲ್ಚರ್ ಫಾರ¾ರ್ ಪ್ರೊಡ್ನೂಸರ್ ಕಂಪನಿಗಳಿವೆ. ಈ ಕಂಪನಿಗಳು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ತೋಟಗಾರಿಕೆ ಬೆಳೆ ಮಾರಾಟ ಮಾಡಲು ನೆರವಾಗಿವೆ.
ಕಂಪನಿಗಳಿಗೆ ಸ್ಥಾನಿಕ ರೈತರ ಉತ್ಪನ್ನಗಳನ್ನು ಖರೀದಿಸಿ, ಲಾಭದ ನಿರೀಕ್ಷೆ ಇಲ್ಲದೇ ಮಾರುವ ಕೆಲಸ ಮಾಡುತ್ತಿವೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ
ಬಹುತೇಕ ಎಲ್ಲೆಡೆ ರೈತರು ಅದರಲ್ಲೂ ಬಹುಬೇಗ ಹಾಳಾಗುವ ಹಾಗೂ ಕೊಯ್ಲಿಗೆ ಬಂದಿದ್ದ ಹಣ್ಣು-ತರಕಾರಿ ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸಿಗದೇ ಕಂಗಾಲಾಗಿದ್ದರು. ಈ ಹಂತದಲ್ಲಿ
ಮಧ್ಯ ಪ್ರವೇಶಿಸಿದ್ದೇ ರೈತ ಕಂಪನಿಗಳು. ಸಾಮಾನ್ಯ ದಿನಗಳಲ್ಲೇ ರೈತರ ಪಾಲಿಗೆ ಶೋಷಣೆ ಕೇಂದ್ರಗಳೆಂದೇ ಕರೆಯಲ್ಪಡುವ ಎಪಿಎಂಸಿ ಹಂಗು ಈ ರೈತರಿಗೆ ಇಲ್ಲ. ಬಸವನಬಾಗೇವಾಡಿ ರೈತ ಕಂಪನಿ ಲಾಕ್
ಡೌನ್ ಇದ್ದರೂ ನಿತ್ಯವೂ ನೂರಾರು ರೈತರಿಂದ ಈರುಳ್ಳಿ ಖರೀದಿಸಿದೆ. ಸುಮಾರು 400 ಟನ್ ಈರುಳ್ಳಿ, 50 ಟನ್ ಕಲ್ಲಂಗಡಿ, ಬಾಳೆಯನ್ನೂ ಮಾರಾಟ ಮಾಡಿದೆ.
ಬೆಂಗಳೂರು, ದಾವಣಗೆರೆ, ಆನೇಕಲ್, ಶಿರಾ ಸೇರಿದಂತೆ ವಿವಿಧೆಡೆ ಕಳಿಸುವ ಮೂಲಕ ರೈತರ ನೆರವಿಗೆ ಧಾವಿಸಿದೆ. ಇಂಡಿ ರೈತರ ಕಂಪನಿ ಸುಮಾರು 50 ರೈತರಿಂದ ಖರೀದಿಸಿದ 100 ಟನ್ ಲಿಂಬೆಹಣ್ಣು ಉತ್ಪನ್ನವನ್ನು ಬೆಂಗಳೂರಿಗೆ ಕಳಿಸಿದೆ. ತಿಕೋಟಾ ತಾಲೂಕಿನ ಟಕ್ಕಳಕಿ ಕಂಪನಿ ಹಸಿ ದ್ರಾಕ್ಷಿ, ಅದರಲ್ಲೂ ವಿವಿಧ ತರಕಾರಿ ಖರೀದಿಸಿ ಹಾಪ್‌ಕಾಮ್ಸ್ ಮೂಲಕ
ಮಾರಾಟಕ್ಕೆ ವೇದಿಕೆ ಕಲ್ಪಿಸಿದೆ.
Related Articles
ವಾಹನ ಇಲ್ಲದ ಇಂಡಿ ಹಾಗೂ ಸಿಂದಗಿ ಕಂಪನಿಗಳು ಬಾಡಿಗೆ ವಾಹನದಲ್ಲಿ ತರಕಾರಿ ಮಾರುತ್ತಿವೆ. ಬಸವನಬಾಗೇವಾಡಿ, ತಿಕೋಟಾ ತಾಲೂಕಿನ ಕಂಪನಿಗಳು ಅತ್ಯಂತ
ಲಾಭದಲ್ಲಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿವೆ. ಇಂಡಿ, ಸಿಂದಗಿ ರೈತ ಕಂಪನಿಗಳು ಸ್ವಾವಲಂಬನೆಗಾಗಿ ಹೆಣಗುತ್ತಿದ್ದರೂ ಕಷ್ಟ ಕಾಲದಲ್ಲಿ ರೈತರ ನೆರವಿಗೆ ಧಾವಿಸುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ಲಾಕ್‌ಡೌನ್ ಸಂದರ್ಭದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಅನ್ನದಾತರತ್ತ ಚಾಚಿದ ಸಹಾಯ ಹಸ್ತವೇ ಸಾಕ್ಷಿಯಾಗಿದೆ.
Advertisement
ಜಿ.ಎಸ್. ಕಮತರ