ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಫೆ. 24 ರಂದು ನೂತನ ಸಭಾಭವನದ ಭೂಮಿಪೂಜೆ ಹಾಗೂ ಗಾಣಿಗ ಸಮಾಜದ ಜಿಲ್ಲಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸುಮಾರು 20 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಭಾನುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ವಿವರ ನೀಡಿದ ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಜಿಲ್ಲೆಯಲ್ಲೇ ಗಾಣಿಗ ಸಮಾಜ ಇಂಡಿ ತಾಲೂಕಿನಲ್ಲಿ ಅಧೀಕ ಸಂಖ್ಯೆಯಲ್ಲಿದೆ. ಹೀಗಾಗಿ ಈ ಬಾಗಿ ಇಂಡಿ ಪಟ್ಟಣದಲ್ಲಿ ಗಾಣಿಗ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಸಲಾಗಿದೆ. ಸಮಾವೇಶಕ್ಕೆ ಈಗಾಗಲೇ ಭರದಿಂದ ಸಿದ್ದತೆ ನಡೆದಿದೆ ಎಂದರು.
ಗಾಣಿಗ ಸಮಾಜದ ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಜಂಟಿಯಾಗಿ ಚಾಲನೆ ನೀಡಲಿದ್ದಾರೆ. ಸಮಾವೇಶದ ಸಂದರ್ಭದಲ್ಲಿ ಇಂಡಿ ಪಟ್ಟಣದಲ್ಲಿ 5 ಕೋಟೀ ರೂ. ವೆಚ್ಚದ ಸಭಾಭವನ ನಿರ್ಮಾಣಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಸಾನಿಧ್ಯವಹಿಸಲಿರುವ ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಜಗದ್ಗುರುಗಳು, ವನಶ್ರೀಮಠದ ಅಧ್ಯಕ್ಷ ಸಿದ್ದುಮುತ್ಯಾ, ತಿಂಥಣಿಯ ಅಡವಿಲಿಂಗ ಮಹಾರಾಜರು, ಸಿದ್ದಾರೂಢ ಆಶ್ರಮದ ಶಂಕರಾನಂದ ಶ್ರೀಗಳು, ಹಿರೆರೂಗಿಯ ಸುಗಲಮ್ಮ ತಾಯಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾವೇಶಕ್ಕೆ ಆಗಮಿಸಲಿರುವ ಸಂಸದ ರಮೇಶ ಜಿಗಜಿಣಗಿ, ಶಾಸಕ ಲಕ್ಷಣ ಸವದಿ, ಬಿ.ಕೆ.ಸಂಗಮೇಶ, ಕೆ.ಸಿ.ವಿರೇಂದ್ರ ಪಪ್ಪಿ, ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಾಲಿ-ಮಾಜಿ ಶಾಸಕರು, ಗಾಣಿಗ ಸಮಾಜದ ಪ್ರಮುಖರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.