Advertisement
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆ ಬಡ ಫಲಾನುಭವಿಗಳಿಗೆ ಮಧ್ಯವರ್ತಿಗಳ ನೆರವಿಲ್ಲದೇ ನೇರವಾಗಿ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ 10 ಸಾವಿರ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3,750 ಮನೆಗಳನ್ನು ಜಿ-ಪ್ಲಸ್ ಮಾದರಿಯಲ್ಲಿ ನಿರ್ಮಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸೂರು ರಹಿತರಿಗೆ ಮನೆ ಕಲ್ಪಿಸಲು ಯೋಜಿಸಲಾಗಿದೆ ಎಂದರು.
Related Articles
Advertisement
ನಗರದ ಸರ್ಕಾರಿ ಆಸ್ಪತ್ರೆಯ 20 ಎಕರೆ ಜಾಗವನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ. ಜಿಲ್ಲೆಯವರೇ ಆಗಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲ ಈ ವಿಷಯದಲ್ಲಿ ಗಮನ ಹರಿಸಿ ಸರ್ಕಾರಿ ತಮ್ಮ ಇಲಾಖೆ ಆಸ್ತಿಯನ್ನು ರಕ್ಷಿಸಿಕೊಳ್ಳಲು ಮುಂದಾಗಲಿ ಎಂದು ಆಗ್ರಹಿಸಿದರು. ಮೇಯರ್ ಶ್ರೀದೇವಿ ಲೋಗಾವಿ, ಪಾಲಿಕೆ ಸದಸ್ಯರಾದ ಉಮೇಶ ವಂದಾಲ, ರಾಜೇಶ ದೇವಗಿರಿ, ಪರಶುರಾಮ ರಜಪೂತ, ರಾಹುಲ್ ಜಾಧವ, ಎಂ.ಎಸ್. ಕರಡಿ, ಮುಖಂಡರಾದ ಶಿವು ಭುಯ್ನಾರ ಇದ್ದರು.
ಈಜುಕೊಳ ಕನಸು ನನಸುವಿಜಯಪುರ: ನಗರದ ಐತಿಹಾಸಿಕ ಗಗನ್ ಮಹಲ್ ಉದ್ಯಾನವನದಲ್ಲಿ ಮೈಸೂರಿನ ಬೃಂದಾವನ ಉದ್ಯಾನವನಲ್ಲಿ ವರ್ಣರಂಜಿತ ಕಾರಂಜಿ ಹಾಗೂ ಪಕ್ಕದಲ್ಲಿರುವ ಕಂದಕದ ನೀರು ಮಲೀನಗೊಂಡು ದುರ್ವಾಸನೆ ಹರಡಿಕೊಂಡಿದೆ. ಹೀಗಾಗಿ ಕಂದಕವನ್ನು ಸ್ವಚ್ಛಗೊಳಿಸಿ ಬೋಟಿಂಗ್ ವ್ಯವಸ್ಥೆಗೆ ಅನುಮತಿಸಲು ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೇ ದಶಕದ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನಗರದಲ್ಲಿ ಈಜುಗೊಳ ನಿರ್ಮಿಸುವ ಯೋಜನೆ ಇದೀಗ ನನಸಾಗುತ್ತಿದೆ. ಕನಕದಾಸ ಬಡಾವಣೆಯಲ್ಲಿ ಇದಕ್ಕಾಗಿ ಮೀಸಲಿದ್ದ ನಿವೇಶನವನ್ನು ಕಬಳಿಸುವ ಹುನ್ನಾರದ ಕುರಿತು ನಾನು ಮೇಲ್ಮನೆ ಸದಸ್ಯನಾಗಿದ್ದ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದೆ. ಇದೀಗ 5 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಗೊಳ ನಿರ್ಮಿಸುವ ಕೆಲಸಕ್ಕೂ ಚಾಲನೆ ದೊರೆಯಲಿದೆ ಎಂದು ಯತ್ನಾಳ ಹೇಳಿದರು.
ಕೇಂದ್ರದ ಮೋದಿ ಸರ್ಕಾರದ ಸಂಪುಟದಲ್ಲಿ ಲಿಂಗಾಯತ ಸಮುದಾಯದ ಸಂಸದರಿಗೆ ಆವಕಾಶ ಸಿಕ್ಕಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಧ್ವನಿ ಎತ್ತಿರುವುದು ಸರಿಯಾಗಿದೆ. ಲಿಂಗಾಯತರು ಮಾತ್ರವಲ್ಲ ಮೋದಿ ಸರ್ಕಾರದಲ್ಲಿ ದಲಿತರು ಹಾಗೂ ಇತರೆ ಸಮುದಾಯಗಳಿಗೂ ಹೆಚ್ಚಿನ ಆದ್ಯತೆ ದೊರೆಯಬೇಕು.
•ಬಸನಗೌಡ ಪಾಟೀಲ ಯತ್ನಾಳ,
ವಿಜಯಪುರ ಶಾಸಕ