Advertisement

ಸೋಂಕಿತ ಮಾಜಿ ಶಾಸಕನ ಮನೆ ಸುತ್ತ ಸೀಲ್‌ಡೌನ್‌ಗೆ ಆಗ್ರಹ

02:49 PM Jun 28, 2020 | Naveen |

ವಿಜಯಪುರ: ನಗರದಲ್ಲಿ ವಾಸವಿರುವ ಇರುವ ಓರ್ವ ಮಾಜಿ ಶಾಸಕನಿಗೆ ಶುಕ್ರವಾರ ಕೋವಿಡ್ ದೃಢಪಟ್ಟಿದೆ. ಸೋಂಕಿತ ಮಾಜಿ ಶಾಸಕರನ್ನು ಪಿ-10654 ಎಂದು ಗುರುತಿಸಲಾಗಿದ್ದು, ಸೋಂಕಿತರ ಮನೆ ಸುತ್ತಮುತ್ತ ಸೀಲ್‌ಡೌನ್‌ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Advertisement

ಸೋಂಕಿತ ಮಾಜಿ ಶಾಸಕನ ಮನೆ ಜಲನಗರ ಮುಖ್ಯ ರಸ್ತೆಯಲ್ಲಿದೆ. ಸದರಿ ಪ್ರದೇಶವನ್ನು ಸೀಲ್‌ಡೌನ್‌ ಮಾಡದ ಕಾರಣ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಸೋಂಕು ಹರಡುವ ಭೀತಿ ವ್ಯಕ್ತಪಡಿಸಿದ್ದಾರೆ. ಜನರ ಈ ಆತಂಕಕ್ಕೆ ಸಮಜಾಯಿಸಿ ನೀಡಿರುವ ಜಿಲ್ಲಾಡಳಿತ, ಸರ್ಕಾರದ ಹೊಸ ನಿಯಮದ ಪ್ರಕಾರ ಮಾಜಿ ಶಾಸಕನ ಮನೆಯನ್ನು ಮಾತ್ರ ಸೀಲ್‌ ಡೌನ್‌ ಮಾಡಿದ್ದಾಗಿ ಹೇಳಿದೆ.

ಸೀಲ್‌ ಡೌನ್‌ ಮಾಡಲಾದ ಸೋಂಕಿತ ಮಾಜಿ ಶಾಸಕರ ಮನೆಗೆ ಅನ್ಯರು ಬರುವಂತಿಲ್ಲ. ಸೋಂಕಿತರ ಮನೆಯ ಸದಸ್ಯರು ಕೂಡ ತಮ್ಮ ಮನೆಯಿಂದ ಹೊರ ಬರುವಂತಿಲ್ಲ. ಸೋಂಕಿತ ಮಾಜಿ ಶಾಸಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇವರ ಕುಟುಂಬದ ಸದಸ್ಯರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next