ವಿಜಯಪುರ: ಬೆಳಕು ಎಂದರೆ, ಶಬ್ಧೋತ್ಪತ್ತಿ ಹೇಗೆ, ಜಾಗತಿಕ ತಾಪಮಾನ ಎಂದರೇನು… ಇಂಥಯ ಪ್ರಶ್ನೆಗಳ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಮೇಸ್ಟ್ರಾದರು.
ಶನಿವಾರ ಗ್ರಾಮ ವಾಸ್ತವ್ಯಕ್ಕಾಗಿ ದೇವರಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ ಗ್ರಾಮಕ್ಕೆ ಅಗಮಿಸಿದಾಗ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು ವಿಜ್ಞಾನ, ಗಣಿತ ಸೇರಿ ಹಲವು ವಿಷಯಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.
ಮಕ್ಕಳೊಂದಿಗೆ ಗ್ರಾಮಸ್ತರಿಗೂ ಗ್ರಾಮದ ಸ್ವಚ್ಛತೆ ಸಲಹೆ ನೀಡಿದ ಜಿಲ್ಲಾಧಿಕಾರಿ ಸುನಿಲಕುಮಾರ, ನಿಮ್ಮ ಗ್ರಾಮದ ಸ್ವಚ್ಚತೆ ನಿಮ್ಮದೇ ಹೊಣೆಯಾಗಬೇಕು ಎಂದರು.
ಇದನ್ನೂ ಓದಿ:ಉದ್ಯಾವರ ಗ್ರಾ.ಪಂ: ಇನ್ನೂ ತೆರೆಯದ ಕಚೇರಿ, ಅಧಿಕಾರಿಗಳ ಅಮಾನತಿಗೆ ಆಗ್ರಹ
ಗ್ರಾಮದ ದುಸ್ಥಿತಿಯಲ್ಲಿರುವ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಗ್ರಾಮದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್ ಚೇರ್ ವಿತರಿಸಲಾಯಿತು. ವಿಕಲಚೇತನರ ಸಬಲೀಕರಣ ಇಲಾಖೆಯಿಂದ ಬಸಪ್ಪ ತಳವಾರ, ಸಿದ್ದಯ್ಯ ಕಾಚಾಪುರ ಇವರಿಗೆ ಜಿಲ್ಲಾಧಿಕಾರಿ ಸುನಿಲಕುಮಾರ ಸರ್ಕಾರದ ಸೌಲಭ್ಯ ವಿತರಿಸಿದರು.
ಜಿ.ಪಂ. ಸಿಇಒ ಗೋವಿಂದರಡ್ಡಿ, ಇಂಡಿ ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ, ವಿ.ಎಸ್.ಕಡಕಭಾವಿ ಇತರರು ಉಪಸ್ಥಿತರಿದ್ದರು.