Advertisement

ಖಾಸಗಿ ಆಸ್ಪತ್ರೆಯಲ್ಲಿನ ಪ್ರತಿ ಸಾವಿನ ಬಗ್ಗೆ ಅಂದಂದೇ ವರದಿಗೆ ಜಿಲ್ಲಾಧಿಕಾರಿ ಸೂಚನೆ

09:38 AM May 19, 2021 | Suhan S |

ವಿಜಯಪುರ:  ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಪ್ರತಿ ಸಾವಿನ ಕುರಿತು ಅಂದಂದೇ ವರದಿ ನೀಡವಂತೆ ಜಿಲ್ಲಾಧಿಕಾರಿ ಸುನಿಲ್ ಕುಮಾರ ಖಾಸಗಿ ಆಸ್ಪತ್ರೆ ಆಡಳಿತ ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ತಮ್ಮ ನೇತೃತ್ವದ  ವಿಶೇಷ ತಜ್ಞರ ಸಮಿತಿ ತಂಡ  ನಗರದ ನೇಮಿಗೌಡ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆ ಪ್ರಮುಖರೊಂದಿಗೆ ಡೆತ್ ಆಡಿಟ್ ಕುರಿತು  ಪರಿಶೀಲನಾ ಸಭೆ ನಡೆಸಿ ಈ ಸೂಚನೆ ನೀಡಿರುವ ಜಿಲ್ಲಾಧಿಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲಾ ಸಾವುಗಳ ಕುರಿತು ಅದೇ ದಿನ ವರದಿ ನೀಡಬೇಕು ಎಂದು ಸೂಚಿಸಿದರು.

ಆಸ್ಪತ್ರೆಗೆ ದಾಖಲಾದ ತೀವ್ರತರ ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ, ಸಾವಿನ ಪ್ರಮಾಣ ಕಡಿಮೆ ಮಾಡಬೇಕು. ಅಗತ್ಯ ಪ್ರಮಾಣದಷ್ಟು ಆಕ್ಸಿಜನ್ ದಾಸ್ತಾನು ಇರಿಸಿಕೊಳ್ಳಬೇಕು. ಯಾವ ರೋಗಿಯೂ ಆಕ್ಸಿಜನ್ ಕೊರತೆಯಿಂದ ತೊಂದರೆ ಅನುಭವಿಸದಂತೆ ನೋಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಇದಲ್ಲದೇ ಜಿಲ್ಲಾಡಳಿತವು ಆಕ್ಸಿಜನ್ ಏಜೆನ್ಸಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದರು.

ಜಿಲ್ಲೆಯಲ್ಲಿ ಈ ವರೆಗೆ ವರದಿಯಾದ Mucromycosis ( ಬ್ಲ್ಯಾಕ್ ಫಂಗಸ್) ರೋಗದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು , ಜಿಲ್ಲೆಯಲ್ಲಿ ಮೇ 17 ರಂದು 25 ಪ್ರಕರಣಗಳು ಮತ್ತು ಮೇ 18 ರಂದು 3 ಹೊಸ ಪ್ರಕರಣಗಳು ಕಂಡುಬಂದಿವೆ. Mucromycosis (ಬ್ಲ್ಯಾಕ್ ಫಂಗಸ್) ರೋಗವು ರೋಗನಿರೋಧಕ ಶಕ್ತಿ ಕಡಿಮೆಯಾದ ವ್ಯಕ್ತಿಗಳಿಗೆ ಈ ರೋಗವು ಕಂಡುಬರುತ್ತಿದ್ದೆ ಎಂದು ವಿವರಿಸಿದರು.

Advertisement

ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಹೆಚ್ಚಿನ ರೋಗಿಗಳು ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ ವೈದ್ಯಕೀಯ ವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ಆಸ್ಪತ್ರೆಯಲ್ಲಿ ಈ ರೋಗಿಗಳಿಗಾಗಿಯೇ ಪ್ರತ್ಯೇಕ ವಾರ್ಡ್ ಮೀಸಲಿರಿಸಲು ಸೂಚಿಸಲಾಗಿದೆ.

ಏಕೆಂದರೆ ಸದರಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಕೇಸುಗಳು ನೋಡಲು ನುರಿತ ತಜ್ಞ ವೈದ್ಯರ ತಂಡ ಲಭ್ಯವಿದೆ. ಹೀಗಾಗಿ ಚಿಕಿತ್ಸೆ ನೀಡಲು ಇದರಿಂದ ಸಹಾಯಕವಾಗಿದೆ ಎಂದು ತಿಳಿಸಿದರು.

ಪ್ರತಿ ಪ್ರಕರಣದ ಬಗ್ಗೆ ತಜ್ಞರ ಕಮಿಟಿಯಲ್ಲಿ ಚರ್ಚೆ ನಡೆಸಲಾಯಿತು. ಮರಣ ಹೊಂದಿದ ಎಲ್ಲಾ ಪ್ರಕರಣದಲ್ಲಿ ಕೋಮಾರ್ಬಿಡ್ ಸ್ಥಿತಿ (Comorbid Condlition) ಗಳು ಇದ್ದ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಎಲ್ಲಾ ಕೇಸುಗಳಲ್ಲಿ ಮುಖ್ಯವಾಗಿ  DM.HTN. ಇರುವ ಬಗ್ಗೆ ಸೂಚಿಸಿದರು.

ರೆಮಡಿಸಿವರ ಇಂಜೆಕ್ಷನ್ ಕುರಿತು ಜಿಲ್ಲಾ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯತೆ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ವಿವಿಧ ಆಸ್ಪತ್ರೆಗಳ ಡಾ. ಸಂತೋಷ ನೇಮಿಗೌಡ, ಡಾ. ರಾಜೇಂದ್ರಕುಮಾರ,  ಡಾ.ಎಸ್.ಎಲ್ ಲಕ್ಕಣ್ಣವರ, ಡಾ.ಸಂತೋಷ ನಂದಿ, ಪೀಟರ್ ಅಲೆಗ್ಸಾಂಡರ್ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next