ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಿನ್ನಲೆ ವಾರ್ಡ್ ಮೀಸಲು ಪ್ರಕಟಿಸಿದ್ದು, 92 ಆಕ್ಷೇಪಣೆ ಸಲ್ಲಿಕೆಯಾಗಿವೆ. ಆಕ್ಷೇಪಣೆ ಪರಿಶೀಲನೆ ಬಳಿಕ ರಾಜ್ಯ ಸರ್ಕಾರ ಅಂತಿಮವಾಗಿ ವಾರ್ಡ್ ಮೀಸಲಾತಿ ಪ್ರಕಟಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಹೇಳಿದರು.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿ ಶೇ.50 ರಷ್ಟು ಮೀಸಲಾತಿ ಇರಬೇಕು. 35 ವಾರ್ಡ್ ಇರುವುದರಿಂದ 17 ವಾರ್ಡ್ ಮೀಸಲಾಗಿದ್ದು, 18 ಮೀಸಲೇತರ ವಾರ್ಡ್ ಎಂದು ಘೋಷಿಸಲಾಗಿದೆ ಎಂದು ವಿವರಿಸಿದರು.
ಇದರಲ್ಲಿ 5 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, 11 ಹಿಂದುಳಿದ ವರ್ಗ ಎಂದು ನಿಗದಿ ಮಾಡಲಾಗಿದೆ. ಇದರಲ್ಲಿ 9 ಪ್ರವರ್ಗ ಅ ಮತ್ತು ಎರಡು ಬ ಕ್ಕೆ ಮೀಸಲಾಗಿವೆ ಎಂದು ವಿವರಿಸಿದರು.
ಮೀಸಲಾತಿ ಬದಲಾವಣೆಗೆ 92 ಆಕ್ಷೇಪಣೆ ಸಲ್ಲಿಕೆಯಾಗಿದ್ದು, ನಿಯಮಾನುಸಾರ ಪರಿಶೀಲಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ : ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ