Advertisement

ತೊಗರಿ ಖರೀದಿಗೆ ಹೊಸ ಸಾಫ್ಟವೇರ್‌ ನೋಂದಣಿಗೆ ಫ್ರುಟ್‌ಕಾರ್ಡ್‌ ಐಡಿ-ಆಧಾರ್‌ ಕಾರ್ಡ್‌ ಖಡ್ಡಾಯ

04:20 PM Jan 17, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ 108 ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನೋಂದಣಿ ಕುರಿತು ನ್ಯಾಷನಲ್‌ ಇಂಫಾರಮೇಟಿಕ್‌ ಸೆಂಟರ್‌ (ಎನ್‌ಐಸಿ) ಯಿಂದ ಹೊಸ ಸಾಫ್ಟವೇರ್‌ ರೂಪಿಸಲಾಗಿದೆ.

Advertisement

ಈ ಸಾಪ್ಟವೇರ್‌ ಬಳಕೆ ಕುರಿತು ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳು ಕೃಷಿ ಪತ್ತಿನ ಸಹಕಾರಿ ಅಧಿಕಾರಿಗಳು, ಪಿ.ಕೆ.ಪಿ.ಎಸ್‌.
ಮುಖ್ಯ ನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್‌ ಆಪರೇಟರ್ಗಳಿಗೆ ತರಬೇತಿ ನೀಡಲಾಯಿತು.

ಸರ್ಕಾರ ತೊಗರಿ ಬೆಳೆಗೆ 6001 ರೂ. ಬೆಂಬಲ ಬೆಲೆ ಈಗಾಗಲೆ ಘೋಷಿಸಿ, ತೊಗರಿ ಬೆಳೆ ಖರೀದಿಗೆ ಹೊಸ ವೆಬ್‌ಸೈಟ್‌ ಪ್ರಾರಂಬಿಸಲಾಗಿದೆ. ತೊಗರಿ ಬೆಳೆಗಾರರ ನೋಂದಣಿ ಜ.31ರ ವರೆಗೆ ನಡೆಯಲಿದೆ. ಸರ್ಕಾರದ sssshttps://kfcsc.kar.
nic.in/loginpctur.aspx  ವೆಬ್‌ಸೈಟ್‌ ನಲ್ಲಿ ನೋಂದಣಿ ಮಾಡಬೇಕು. ರೈತರು ತೊಗರಿ ಖರೀದಿ ನೋಂದಣಿಗೆ ಕಡ್ಡಾಯವಾಗಿ ಫ್ರುಟ್‌ಕಾರ್ಡ್‌ ಐಡಿ ಅಥವಾ ಆಧಾರ್‌ ಕಾರ್ಡ್‌ನ್ನು ಹತ್ತಿರದ ತೊಗರಿ ಖರೀದಿ ಕೇಂದ್ರಕ್ಕೆ ನೀಡಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಸಹಾಯಕ ನಿರ್ದೇಶಕ ಛಬನೂರ ಅವರು ಹೇಳಿದರು.

ಫ್ರುಟ್‌ಕಾರ್ಡ್‌ ಐಡಿ ಇಲ್ಲದಿದ್ದಲ್ಲಿ ರೈತರು ಹತ್ತಿರದ ಆರ್‌ಎಸ್‌,ಕೆ ಅಥವಾ ಸಿ.ಎಸ್‌.ಕೆಗೆ ಹೋಗಿ ನೋಂದಣಿ ಮಾಡಿಸಿ ಕೊಳ್ಳಬೇಕು ಎಂದರು. ತೊಗರಿ ಖರೀದಿ ಕೇಂದ್ರಗಳು ರೈತರ ನೋಂದಣಿ ಮಾಡಿಕೊಂಡು ಒಂದು ಸ್ವೀಕೃತಿ ಪತ್ರವನ್ನು ನೀಡಬೇಕು. ಅದರಲ್ಲಿ ತೊಗರಿ ಖರೀದಿಯ ದಿನಾಂಕವನ್ನು ನಮೂದಿಸಬೇಕು. ನೋಂದಣಿ ಮಾಡಿದ ರೈತರಿಗೆ ಎಸ್‌ಎಂಎಸ್‌ ಬರಲಿದ್ದು, ಒಬ್ಬ ರೈತ ಬೇರೆ ಬೇರೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಒಂದೇ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ರೈತರ ಸಹಾಯಕ್ಕಾಗಿ ಹೊಸ ವೆಬ್‌ಸೈಟ ಪ್ರಾರಂಭಿಸಲಾಗಿದ್ದು ಅದರ ಸದೂಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ತರಬೇತಿ ವೇಳೆಯಲ್ಲಿ ಎನ್‌.ಐ.ಸಿ. ಗೂಗವಾಡ, ಫೆಡರೇಷನ್‌ ವ್ಯವಸ್ಥಾಪಕ ಲಿಂಗರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ಛಬನೂರ, ಸಹಕಾರ ಇಲಾಖೆಯ ಉಪನಿಭಂದಕ ಗಂಗಾದರ ಗಚ್ಚಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next