Advertisement

ವಿಜಯಪುರ : ತೋಟದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ

06:28 PM Aug 07, 2021 | Team Udayavani |

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಬಳಿ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ತೋಟವೊಂದರಲ್ಲಿ ಈ ಕೃತ್ಯ ನಡೆದಿದ್ದು, ಕೊಲೆಯಾದ ವ್ಯಕ್ತಿಯನ್ನು‌ ಕೂಡಗಿ ಗ್ರಾಮದ ಬೀರಪ್ಪ ಮಾಯಪ್ಪ ಹಿರೇಕುರುಬರ (32) ಎಂದು ಗುರುತಿಸಲಾಗಿದೆ.

ಕೂಡಗಿ ಸಮೀಪದ ತನ್ನ ತೋಟದ ಮನೆಯ ಮುಂದೆ ರಾತ್ರಿ ಮಲಗಿರುವಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೋಳೂರು, ಸಿಪಿಐ ಸೋಮಶೇಖರ ಜುಟ್ಟಲ, ಪಿಎಸ್ಐ ರೇಣುಕಾ ಜಕನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚೋಪ್ರಾ ‘ಚಿನ್ನ’ದ ಸಾಧನೆಗೆ ಕುಣಿದು ಕುಪ್ಪಳಿಸಿದ ಹರಿಯಾಣ ಗೃಹ ಸಚಿವ|ವಿಡಿಯೋ

Advertisement
Advertisement

Udayavani is now on Telegram. Click here to join our channel and stay updated with the latest news.

Next