ವಿಜಯಪುರ: ವಿಜಯಪುರ ಜಿಲ್ಲೆಯ ಮಟ್ಟಿಗೆ ಮೇ ತಿಂಗಳ ಕೊನೆ ದಿನ ರವಿವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರಲ್ಲಿ ಮೇ 31ರಂದು ಒಂದೇ ದಿನ 26 ಜನರಲ್ಲಿ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.
ಅಲ್ಲದೇ ಮೊದಲ ಹಂತದ ಸೋಂಕಿತರು ಗುಣಮುಖರಾಗಿ ಮನೆಗೆ ಮರಳುವ ಹಂತದಲ್ಲಿ ಒಂದೇ ದಿನ ಬೃಹತ್ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಮೂಲಕ ಅಜೇಯ ಶತಕದೊಂದಿಗೆ 122ಕ್ಕೆ ಏರಿದ್ದು ಜಿಲ್ಲೆ ಜನರಲ್ಲಿ ಆತಂಕ ಸೃಷ್ಟಿಸಿದೆ. ರವಿವಾರ ಸೋಂಕು ದೃಢಪಟ್ಟವರೆಲ್ಲ ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿ, ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರೇ. ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ ಓರ್ವ ವೃದ್ಧ, 10 ಪುರುಷರು, ಒಂಬತ್ತು ಮಹಿಳೆಯರು, ಮೂರು ಬಾಲಕರು ಹಾಗೂ ಇಬ್ಬರು ಬಾಲಕಿಯರೂ ಇದ್ದಾರೆ.
ಹೊಸ ಸೋಂಕಿತರನ್ನು 70 ವರ್ಷದ ಪಿ 2923, 55 ವರ್ಷದ ವ್ಯಕ್ತಿ ಪಿ 2924, 55 ವರ್ಷದ ಮಹಿಳೆ ಪಿ 2925, 38 ವರ್ಷದ ವ್ಯಕ್ತಿ ಪಿ 2926, 28 ವರ್ಷದ ಮಹಿಳೆ ಪಿ 2927, 38 ವರ್ಷದ ವ್ಯಕ್ತಿ ಪಿ 2928, 30 ವರ್ಷದ ವ್ಯಕ್ತಿ ಪಿ 2929, 51 ವರ್ಷದ ಪುರುಷ ಪಿ 3009, 15 ವರ್ಷದ ಬಾಲಕ ಪಿ 3013, 46 ವರ್ಷದ ವ್ಯಕ್ತಿ ಪಿ 3014, 4 ವರ್ಷದ ಬಾಲಕಿ ಪಿ 3151, 45 ವರ್ಷದ ಮಹಿಳೆ ಪಿ 3152, 35 ವರ್ಷದ ಮಹಿಳೆ ಪಿ 3153, 23 ವರ್ಷದ ಮಹಿಳೆ ಪಿ 3154, 22 ವರ್ಷದ ಯುವಕ ಪಿ 3157, 33 ವರ್ಷದ ವ್ಯಕ್ತಿ ಪಿ 3171, 59 ವರ್ಷದ ವ್ಯಕ್ತಿ ಪಿ 3172, 37 ವರ್ಷದ ವ್ಯಕ್ತಿ ಪಿ 3173, 5 ವರ್ಷದ ಬಾಲಕ ಪಿ 3174, 2 ವರ್ಷದ ಬಾಲಕ ಪಿ 31715, 20 ವರ್ಷದ ಪಿ 3176, 54 ವರ್ಷದ ಮಹಿಳೆ ಪಿ 3177, 30 ವರ್ಷದ ಪುರುಷ ಪಿ 3178, 22 ವರ್ಷದ ಮಹಿಳೆ ಪಿ 3179, 25 ವರ್ಷದ ಮಹಿಳೆ ಪಿ 3180, 3 ವರ್ಷದ ಬಾಲಕಿ ಪಿ 3181 ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 24,511 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದು 17,047 ಜನರ ವರದಿ ನೆಗೆಟಿವ್ ಬಂದಿದೆ. 7,342 ಜನರ ವರದಿ ನಿರೀಕ್ಷೆಯಲ್ಲಿದೆ. ರವಿವಾರದ 26 ಸೋಂಕಿತರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 122ಕ್ಕೆ ಏರಿದೆ. ಇದೇ ದಿನ ಓರ್ವ ಸೋಂಕಿತೆ ಪಿ 2136 ಸೋಂಕು ಮುಕ್ತಳಾಗಿ ಮನೆಗೆ ಮರಳಿದ್ದಾಳೆ. ಮಹಾರಾಷ್ಟ್ರದಿಂದ ಹಿಂದಿರುಗಿದ್ದ ಈಕೆಗೆ ಮೇ 25ರಂದು ಸೋಂಕು ದೃಢಪಟ್ಟಿತ್ತು. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಈಕೆಯೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರ ಸಂಖ್ಯೆ 55ಕ್ಕೆ ಏರಿದೆ.
ಸೋಂಕಿತರಲ್ಲಿ ಈಗಾಗಲೇ ಐವರು ಮೃತಪಟ್ಟಿದ್ದು, 62 ಸಕ್ರೀಯ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಕಡೆಗಳಿಂದ ಜಿಲ್ಲೆಗೆ ಮರಳಿದ 27,384 ಜನರು ಒಟ್ಟು ನಿಗಾದಲ್ಲಿ ಇರಿಸಲಾಗಿದ್ದು, 6,838 ಜನರು ಐಸೋಲೇಶನ್ ಕ್ವಾರಂಟೈನ್ ಪೂರ್ಣ ಮಾಡಿದ್ದಾರೆ. 20, 486 ಜನರು 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ.