Advertisement

ಕೋವಿಡ್‌ ಎದುರಿಸಿ ಬದುಕುವುದನ್ನು ರೂಢಿಸಿಕೊಳ್ಳಿ: ಸಚಿವೆ ಜೊಲ್ಲೆ ಸಲಹೆ

05:54 PM May 28, 2020 | Naveen |

ವಿಜಯಪುರ: ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ ಮದ್ದಿಲ್ಲದ ರೋಗವಾಗಿ ಜೀವಹಾನಿ ಮಾಡುತ್ತಿದೆ. ಹೀಗಾಗಿ ಭಾರತೀಯ ಪಾರಂಪರಿಕ ಮನೆಮದ್ದು ಸೇವಿಸುವ ಮೂಲಕ ರೋಗನಿರೋಧ ಶಕ್ತಿ ವೃದ್ಧಿಸಿಕೊಳ್ಳಲು ಮುಂದಾಗಬೇಕು. ಆ ಮೂಲಕ ಕೋವಿಡ್‌ ಜತೆ ಬದುಕುವುದನ್ನು ಕಲಿಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋವಿಡ್‌ ರೋಗ ಎದುರಿಸುವ ಕುರಿತು ಇಡೀ ವಿಶ್ವವೇ ವಿವಿಧ ಪ್ರಯೋಗ ನಡೆಸಿದೆ. ಆದರೆ, ಸದರಿ ರೋಗಕ್ಕೆ ನಿರ್ಧಿಷ್ಟ ಔಷಧಿ ಈ ವರೆಗೆ ಕಂಡು ಹಿಡಿದಿಲ್ಲ. ಹೀಗಾಗಿ ಸೋಂಕು ಹರಡುವಿಕೆ ತಡೆಯುವುದು ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಹೆಚ್ಚು ಚಹಾ ಸೇವಿಸುವ ಅಭ್ಯಾಸ ಇದ್ದ ನಾನು ಕೋವಿಡ್‌ ರೋಗ ಸೃಷ್ಟಿಯಾದ ಬಳಿಕ ಅರಿಶಿಣ ಬೆರೆಸಿದ ಬಿಸಿನೀರು ಸೇವಿಸುವುದನ್ನು ರೂಢಿಸಿಕೊಂಡಿದ್ದೇನೆ. ಅರಿಶಿಣ ಸೇರಿದಂತೆ ಭಾರತೀಯ ಪಾರಂಪರಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ರೋಗಕ್ಕೆ ಮದ್ದು ಕಂಡು ಹಿಡಿಯುವ ಬದಲು ಮನುಷ್ಯನಲ್ಲೇ ರೋಗ ನಿರೋಧಕ ಶಕ್ತಿ ವೃದ್ಧಿಸುವ ವಿಧಾನಗಳನ್ನು ಹೇಳಲಾಗಿದೆ. ಇದರಲ್ಲಿ ಅರಿಶಿಣ ಮಿಶ್ರಿತ ಬಿಸಿನೀರು ಸೇವನೆಯೂ ಒಂದು. ಇಂಥ ಮನೆ ಮದ್ದು ಹಾಗೂ ಪಾರಂಪರಿಕ ವೈದ್ಯಕೀಯದಲ್ಲಿರುವ ವಿಧಾನಗಳನ್ನು ಬಳಸಿಕೊಂಡು ರೋಗ ನಿಗ್ರಹಕ್ಕಿಂತ, ವ್ಯಕ್ತಿಗಳಲ್ಲೇ ರೋಗ ನಿರೋಧಕ ಶಕ್ತಿ ವೃದ್ಧಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next