Advertisement

ಸಮರ್ಪಕ ನೆರೆ ಪರಿಹಾರಕ್ಕೆ ಆಗ್ರಹ

01:16 PM Sep 13, 2019 | Naveen |

ವಿಜಯಪುರ: ರಾಜ್ಯದ 22 ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೃಹತ್‌ ಪ್ರತಿಭಟನಾ ರ್ಯಾಲಿ ಹಾಗೂ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ವಿವಿಧ ಘಟಕಗಳ ಸಹಯೋಗದಲ್ಲಿ ಹಮಿಕೊಂಡಿದ್ದ ಪ್ರತಿಭಟನೆ ಬಳಿಕ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ರಾಜ್ಯದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಕಳೆದ ಒಂದು ತಿಂಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹಕ್ಕೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಜನ-ಜಾನುವಾರು, ಬೆಳೆಹಾನಿ ಸಂಭವಿಸಿ, ಸಾರ್ವನಿಕರು ಭಾರಿ ಪ್ರಮಾಣದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರು ಇದೀಗ ಆಸರೆ ಇಲ್ಲದೇ ಬೀದಿಯಲ್ಲಿ ನಿಲ್ಲುವಂತಾಗಿದೆ. ಪ್ರವಾಹದ ಪೀಡಿತ ಗ್ರಾಮಗಳಲ್ಲಿ ದುರ್ವಾಸನೆ ಹರಡಿಕೊಂಡು ಪರಿಸರ ಸಾಂಕ್ರಾಮಿಕ ರೋಗ ಹರಡುವಿಕೆ ಭಯ ಕಾಡುತ್ತಿದೆ. ಸಂತ್ರಸ್ತ ಜನರು ಅನಾರೋಗ್ಯದಿಂದ ಬಳಲುತ್ತಿದ್ದು, ಪರಿಸ್ಥಿತಿ ಗಂಭೀರ ಸ್ವರೂಪದಲ್ಲಿದ್ದರೂ ಸರ್ಕಾರ ಯಾವುದೇ ರೀತಿಯಲ್ಲಿ ಪರಿಹಾರ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕ ವಿಠuಲ ಕಟಕದೊಂಡ ಮಾತನಾಡಿ, ಕೇಂದ್ರ ಸರಕಾರದ ಗೃಹ ಸಚಿವ ಅಮೀತ್‌ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅಧ್ಯಯನ ಮಾಡಿ ತಿಂಗಳಾದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರಕ್ಕೆ ನಿರ್ಧಿಷ್ಟವಾಗಿ ಯಾವುದೇ ರೀತಿ ಅನುದಾನ ನೀಡಿಲ್ಲ. ಅಚ್ಚೇ ದಿನ್‌ ಆಯೇಗಿ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನ ಸಂಕಷ್ಟದಲ್ಲಿದ್ದಾಗ ಸ್ಪಂದಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಅಬ್ದುಲ್ ಹಮೀದ್‌ ಮುಷರೀಪ್‌, ಹಾಸೀಂಪೀರ ವಾಲಿಕಾರ, ಸುರೇಶ ಘೋಣಸಗಿ, ಜಮೀರ್‌ಅಹ್ಮದ್‌ ಬಾಗಲಕೋಟ, ಲಕ್ಷ್ಮೀ ದೇಸಾಯಿ, ಅಬ್ದುಲ್ ಖಾದರ್‌ ಖಾದೀಮ, ಡಾ| ಸಂಗಮೇಶ ತದ್ದೇವಾಡಿ ಮಾತನಾಡಿದರು.

Advertisement

ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ, ಪಕ್ಷದ ಮುಖಂಡರಾದ ಜಮೀರ್‌ ಅಹ್ಮದ್‌ ಬಕ್ಷೀ, ಆರತಿ ಶಹಾಪೂರ, ಚಾಂದಸಾಬ ಗಡಗಲಾವ, ಮಹ್ಮದ್‌ ರಫೀಕ ಟಪಾಲ, ಗಂಗಾಧರ ಸಂಬಣ್ಣಿ, ಸುಭಾಷ ತಳಕೇರಿ, ವಸಂತ ಹೊನಮೊಡೆ, ಶಬ್ಬಿರ ಜಾಗೀರದಾರ, ಇರ್ಪಾನ್‌ ಶೇಖ, ಇಲಿಯಾಸ ಬಗಲಿ, ಸಾಹೇಬಗೌಡ ಬಿರಾದಾರ, ವಿಜಯಕುಮಾರ ಘಾಟಗೆ, ಆರ್‌.ಕೆ.ಜವನರ್‌, ದತ್ತಾತ್ರೇಯ ಆಲಮೇಲಕರ, ಮಲ್ಲು ತೊರವಿ, ಮೈನುದ್ದೀನ ಬೀಳಗಿ, ಜಮೀರ್‌ ಬಾಂಗಿ, ಇಲಿಯಾಸ ಸಿದ್ದಿಕಿ, ಅಜೀಂ ಇನಾಮದಾರ, ಪರವೇಜ್‌ ಚಟ್ಟರಕಿ, ಬಿ.ಎಸ್‌.ಬ್ಯಾಳಿ, ಶರಣ್ಣಪ್ಪ ಯಕ್ಕುಂಡಿ, ಸಂತೋಷ ಬಾಲಗಾಂವಿ, ಜಯಶ್ರೀ ಶಿವಣಗಿ, ಲಕ್ಷ್ಮೀ ಶಿವಣಗಿ, ನಿಂಗಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next