Advertisement
ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ವಿಷಯದಲ್ಲಿ ವಿಜಯಪುರ ಅವಳಿ ಜಿಲ್ಲೆಗಳ ದ್ವಿ ಸದಸ್ಯತ್ವದ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಒಬ್ಬರೇ ವ್ಯಕ್ತಿಗೆ ಟಿಕೇಟ ನೀಡಿಕೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯನ್ನು ಪರಿಗಣಿಸಿದೆ.
Related Articles
Advertisement
ಮೇಲ್ಮನೆ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ ಈ ವರೆಗೆ ಪೂರ್ಣ ಅಧಿಕಾರದ ವಿಷಯದಲ್ಲಿ ಟಿಕೇಟ್ ನೀಟಿಕೆ ವಿಷಯ ಬಂದಾಗಲೆಲ್ಲ ವಿಜಯಪುರ ಜಿಲ್ಲೆಯನ್ನು ಸಂರ್ಪೂಣ ಕಡೆಗಣಿಸುತ್ತಲೇ ಬಂದಿದೆ. ಬಾಗಲಕೋಟೆ ಜಿಲ್ಲೆಯ ಹಾಲಿ ಸದಸ್ಯ ಎಸ್.ಆರ್.ಪಾಟೀಲ ಅವರಿಗೆ ಸತತ 4 ಬಾರಿ ಟಿಕೇಟ್ ನೀಡಿದೆ. ಒಂದು ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಹಾಕಿದ್ದ ಸಂದರ್ಭದಲ್ಲೂ ಬಾಗಲಕೋಟೆ ಜಿಲ್ಲೆಯ ಸಿದ್ದು ನ್ಯಾಮಗೌಡ ಅವರಿಗೆ ಟಿಕೇಟ್ ನೀಡುವ ಮೂಲಕ ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿತ್ತು.
ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ವಿಜಯಪುರ ಜಿಲ್ಲೆಯ ಹಾಲಿ ಸದಸ್ಯ ಸುನಿಲಗೌಡ ಅವರಿಗೆ ಟಿಕೇಟ್ ನೀಡಿದೆ. ಅದರಲ್ಲೂ ರಾಜಕೀಯವಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸತತ 4 ಬಾರಿ ಗೆದ್ದು 24 ವರ್ಷ ಸದನದಲ್ಲಿದ್ದ ಮೇಲ್ಮನೆ ಹಾಲಿ ವಿಪಕ್ಷ ನಾಯಕರಾಗಿರುವ ಹಿರಿಯ ಸದಸ್ಯ ಎಸ್.ಆರ್.ಪಾಟೀಲ ಅವರನ್ನು ಮೀರಿ ಯುವ ಸದಸ್ಯ ಸುನಿಲಗೌಡ ಪಾಟೀಲ ಅವರಿಗೆ ಮಾತ್ರ ಟಿಕೇಟ್ ನೀಡಿದೆ. ಇದರೊಂದಿಗೆ ಒಂದೇ ಸ್ಥಾನಕ್ಕೆ ಸ್ಪರ್ಧಿಸುವ ತಂತ್ರವನ್ನು ಮುಂದುವರೆಸಿದೆ.
ಬಿಜೆಪಿ ಬಾಲಕೋಟೆಗೆ ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ವಿಜಯಪುರ ಕ್ಷೇತ್ರ ಎರಡು ಸ್ಥಾನಗಳಿವೆ. ಹಲವು ಚುನಾವಣೆಗಳಲ್ಲಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಒಬ್ಬೊಬ್ಬ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ರಾಜಕೀಯ ರಕ್ಷಣಾತ್ಮಕ ಸ್ಪರ್ಧೆಗೆ ಮುಂದಾಗಿದ್ದವು. ಒಬ್ಬರನ್ನೇ ಕಣಕ್ಕಿಳಿಸಿದಾಗಲೂ ಎರಡೂ ಪಕ್ಷಗಳು ಬಾಗಲಕೋಟೆ ಜಿಲ್ಲೆಗೇ ಆದ್ಯತೆ ನೀಡುತ್ತಿದ್ದವು.
ಬಿಜೆಪಿ ಈ ಬಾರಿಯೂ ಬಾಗಲಕೋಟೆ ಜಿಲ್ಲೆಯ ಪ್ರಹ್ಲಾದ ಪೂಜಾರಿ ಒಬ್ಬರನ್ನೇ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಕೂಡ ಒಬ್ಬರನ್ನೇ ಕಣಕ್ಕಳಿಸಿದ್ದರೂ ಸುನಿಲಗೌಡ ಮೂಲಕ ಇದೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಆದ್ಯತೆ ನೀಡಿದೆ.
ಪಕ್ಷೇತರ ಸ್ಪರ್ಧೆಯ ಭೀತಿ
ಮೇಲ್ಮನೆ ಚುನಾವಣೆ ಬಂದಾಗಲೆಲ್ಲ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ದಕ್ಕೆ ಕಳೆದ ಚುನಾವಣೆಯಲ್ಲಿ ಪಕ್ಷೇತರನನ್ನು ಕಣಕ್ಕಿಳಿಸಿ ಗೆಲ್ಲಿಸಲಾಗಿತ್ತು.
ಆ ಮೂಲಕ ಜಿಲ್ಲೆಯ ಆಸ್ಮಿತೆ ಪ್ರದರ್ಶನದ ಜೊತೆಗೆ ರಾಜಕೀಯ ಶಕ್ತಿಯನ್ನೂ ತೋರಿದ್ದವು.
ಹೀಗಾಗಿ ಬಿಜೆಪಿ ಬಾಗಲಕೋಟೆ ಜಿಲ್ಲೆಗೆ ಆದ್ಯತೆ ನೀಡಿರುವ ಕಾರಣ ಕಾಂಗ್ರೆಸ್ ವಿಜಯಪುರ ಜಿಲ್ಲೆಗೆ ಮೊದಲ ಬಾರಿಗೆ ಪೂರ್ಣಾವಧಿ ಸ್ಪರ್ಧೆಯ ಅವಕಾಶ ಕಲ್ಲಿಸಿ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದೆ. ಒಂದೊಮ್ಮೆ ಮತ್ತೆ ಬಾಗಲಕೋಟೆ ಜಿಲ್ಲೆಯ ಎಸ್.ಆರ್.ಪಾಟೀಲ ಅವರಿಗೇ ಟಿಕೇಟ್ ನೀಡಿದರೆ ವಿಜಯಪುರ ಜಿಲ್ಲೆಯಿಂದ ಮತ್ತೆ ಪ್ರಬಲ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸೋಲುವುದು ಖಚಿತ ಎಂಬ ಭೀತಿಯೂ ಕಾಡಿದೆ.
ಕಾಂಗ್ರೆಸ್ ಎರಡೂ ಸ್ಥಾನಗಳಿಗೆ ಸ್ಪರ್ಧಿಸುವ ಚಿಂತನೆ ಇದೆ ಎನ್ನಲಾಗಿತ್ತು. ಆದರೆ ಸದರಿ ಚುನಾವಣೆ ಮತಪತ್ರ ಹಾಗೂ ಆದ್ಯತೆ ಮತ ಚಲಾವಣೆ ವ್ಯಸವ್ಥೆ ಇದೆ. ಇದು ತಾಂತ್ರಿಕ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಲ್ಲದೇ ಬಿಜೆಪಿ ಬಾಗಲಕೋಟೆ ಜಿಲ್ಲೆಯಿಂದ ಒಬ್ಬರನ್ನೇ ಕಣಕ್ಕಿಳಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಹೆಚ್ಚು ಮತಗಳಿದ್ದು, ಸುನಿಲಗೌಡ ಅವರಿಗೆ ಹೆಚ್ಚಿನ ಬೆಂಬಲ ದೊರೆಯುವ ಸಾಧ್ಯತದೆ ಇದೆ. ಇದರಿಂದ ಕಾಂಗ್ರೆಸ್‍ನ ಹಿರಿಯ ಸದಸ್ಯ ಎಸ್.ಆರ್.ಪಾಟೀಲ ಅವರಿಗೆ ಸೋಲಾಗುವ ಭೀತಿ ಕಾಡಿದೆ. ಈ ಕಾರಣಕ್ಕೆ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಯೋಜನೆಯನ್ನು ಕಾಂಗ್ರೆಸ್ ಕೈಬಿಟ್ಟಿದೆ ಎನ್ನಲಾಗಿದೆ.
ಕೈ ಹಿಡಿದ ರಚನಾತ್ಮಕ ಕೆಲಸ
ಸುನಿಲಗೌಡ ಪಾಟೀಲ ಅವರು ಮೇಲ್ಮನೆ ಸದಸ್ಯರಾಗುತ್ತಲೇ ಎರಡೂವರೆ ವರ್ಷಗಳ ಕಡಿಮೆ ಅವಧಿಯಲ್ಲೇ ಸದ್ದಿಲ್ಲದ ಜನಸೇವೆಗೆ ಮುಂದಾದರು. 2020 ರಲ್ಲಿ ಕೋವಿಡ್ ಮೊದಲ ಅಲೆಯ ಸಂಕಷ್ಟ ಎದುರಾದಾಗ ಜಿಲ್ಲೆಯಲ್ಲಿ ಜನರ ನೋವಿಗೆ ಸ್ಪಂದಿಸಿದ್ದರು. ಮೊದಲ ಲಾಕ್‍ಡೌನ್ ಸಂದರ್ಭದಲ್ಲಿ ಗೋವಾ ರಾಜ್ಯದಲ್ಲಿ ಗುಳೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಜಿಲ್ಲೆಯ ಕನ್ನಡಿಗರಿಗೆ ಆಹಾರ ಧಾನ್ಯದ ಕಿಟ್, ಇತರೆ ನೆರವು ನೀಡಿದ್ದರು. ಜನತೆಯ ಆರೋಗ್ಯ ರಕ್ಷಣೆಗೆ ಟೊಂಕ ಕಟ್ಟಿದ್ದ ಸುನಿಲಗೌಡ ಅವರು, ಎರಡೂ ಜಿಲ್ಲೆಗಳ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸ್ಯಾನಿಟೈಸರ್ ಸಿಂಪರಣೆಗೆ ಸ್ಪೇಯರ್ ಯಂತ್ರಗಳನ್ನು ನೀಡಿದ್ದರು.
ಜಿ.ಎಸ್.ಕಮತರ