Advertisement
ರವಿವಾರ ಸಂಜೆ ನಗರದ ದರಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲೇ ಪಾಕಿಸ್ತಾನವನ್ನು ವಿಭಜಿಸಿದ್ದರೂ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಭಾರತಕ್ಕೆ ಯಾವಾಗ ಬೇಕಾದರೂ ಮರಳಬಹದು ಎಂದು ಗಾಂಧೀಜಿ ಹೇಳಿದ್ದರು.
Related Articles
Advertisement
ಅರಣ್ಯ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ದೇಶದಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಮುನ್ನ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ವಿಪಕ್ಷಗಳು ಪೌರತ್ವ ಕಾಯ್ದೆ ಕುರಿತು ಸೂಕ್ತ ಹಾಗೂ ಸಮರ್ಥವಾಗಿ ಅರಿಯಲು ಮುಂದಾಗಲಿ ಎಂದು ಕುಟುಕಿದರು. ಆದರೆ ಕಾಯ್ದೆ ಕುರಿತು ಸೂಕ್ತ ಮಾಹಿತಿ ಇಲ್ಲದ ಕೆಲವರಿಂದ ನಡೆಸದ ಪ್ರಚೋದನೆಯಿಂದ ಮಂಗಳೂರು ನಗರದಲ್ಲಿ ವ್ಯವಸ್ಥಿತ ಗಲಭೆ ಸೃಷ್ಟಿಸುವ ಮೂಲಕ ಸಮಾಜದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಮಾಡುವ ಹುನ್ನಾರ ನಡೆದಿತ್ತು. ಆದರೆ ಸುದೈವಶಾತ್ ಅಲ್ಲಿನ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಮಟ್ಟದಲ್ಲಿ ನಡೆಯಲಿದ್ದ ಆನಾಹುತ ತಪ್ಪಿದೆ.ಹೀಗಾಗಿ ಇಂಥ ಸಂದರ್ಭದಲ್ಲಿ ಪೊಲೀಸರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳುವುದು ನಮ್ಮೆಲರ ಹೊಣೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಇಲ್ಲ ಎಂದರು. ಇದೇ ವೇಳೆ ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆರ್. ಎಸ್. ಪಾಟೀಲ ಕೂಚಬಾಳ ಅವರನ್ನು ಸಂಸದ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಭಿನಂದಿಸಿದರೆ, ಸಂಸದ ಭಗವಂತ ಖೂಬಾ ಆವರಿಗೆ ಸಿದ್ದರಾಮೇಶ್ವರ ಶರಣರ ಭಾವಚಿತ್ರ ನೀಡಿ ಗೌರವಿಸಲಾಯಿತು.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಡಾ| ಗೋಪಾಲ ಕಾರಜೋಳ, ದಯಾಸಾಗರ ಪಾಟೀಲ, ಸಂಗರಾಜ ದೇಸಾಯಿ ವೇದಿಕೆಯಲ್ಲಿದ್ದರು.