ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಪತ್ರಕರ್ತರು, ಮನವಿ ಅರ್ಪಿಸಲು ಬರುವ ರೈತ, ಜನಪರ ಸಂಘಟನೆಗಳ ಕಾರ್ಯಕರ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ ಎನ್ನಲಾಗಿದೆ.
ಈ ಸಲ ಮುಖ್ಯಮಂತ್ರಿಯಾದ ಬಳಿಕ ಬಿ.ಎಸ್. ಯಡಿಯೂರಪ್ಪ ಆಲಮಟ್ಟಿ ಬಳಿ ಕೃಷ್ಷೆಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಮೊದಲ ಬಾರಿಗೆ ಕೃಷ್ಣೆಗೆ ಬಾಗಿನ ಅರ್ಪಿಸಲು ವಿಜಯಪುರ ಜಿಲ್ಲೆಗೆ ಬರುತ್ತಿದ್ದಾರೆ. ಆದರೆ ಸಿ.ಎಂ. ಯಡಿಯೂರಪ್ಪ ಅವರ ಭೇಟಿಗೆ ಪೊಲೀಸರು ಭದ್ರತೆ ನೆಪದಲ್ಲಿ ನಿರ್ಬಂಧ ಹೇರುತ್ತಿರುವ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸದರಿ ಕಾರ್ಯಕ್ರಮಕ್ಕೆ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಗಳ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಅಧಿಕೃತ ಆಹ್ವಾನ ಇದ್ದರೂ, ಬೆರಳೆಣಿಕೆಯಷ್ಡು ಪಾಸ್ ವಿತರಿಸಲಾಗುತ್ತಿದೆ. ಪಾಸ್ ಪಡೆದಿರುವ ಪತ್ರಕರ್ತರಿಗೂ ಜಲಾಶಯ, ಹೆಲಿಪ್ಯಾಡ್, ಸಿ.ಎಂ. ಸಭೆ ನಡೆಯುವ ಹಾಗೂ ಪ್ರವಾಸಿ ಮಂದಿರ ಪ್ರವೇಶ, ಬಾಗಿನ ಕಾರ್ಯಕ್ರಮ ಸ್ಥಳಗಳಿಗೆ ತೆರಳದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಅವಳಿ ಜಿಲ್ಲೆಯ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತ ಗಳ ಕ್ರಮದ ವಿರುದ್ಧ ಹರಿಹಾಯುತ್ತಿದ್ದಾರೆ.
Advertisement