ವಿಜಯಪುರ: ಶನಿವಾರ ಸಂಜೆ ಬಿರುಗಾಳಿ ಸಹಿತ ಅಬ್ಬರಿಸಿದ ಮಳೆಯ ಸಿಡಿಲಿಗೆ ವಿಜಯಪುರ ಜಿಲ್ಲೆಯಲ್ಲಿ ಎತ್ತು, ಕುರಿಗಳು ಬಲಿಯಾಗಿ, ರೈತರಿಗೆ ಅಪಾರ ಹಾನಿಯಾಗಿದೆ.
ಶನಿವಾರ ರಾತ್ರಿ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಲಾಳಸಂಗಿ ಗ್ರಾಮದ ಖಾಸೀಮ ಅಲ್ಲಾಭಕ್ಷ ಭಾಗವಾನ ಎಂಬವರಿಗೆ ಸೇರಿದ ಎತ್ತು ಮೃತಪಟ್ಟಿದೆ.
ಮತ್ತೊಂದೆಡೆ ಸಾರವಾಡ ಗ್ರಾಮದ ಸುನಂದಾ ಮಲ್ಲಿಕಾರ್ಜುನ ಗಂಗನಹಳ್ಳಿ ಎಂಬರ ಜಮೀನಿನಲ್ಲಿ ಬೀಡುಬಿಟ್ಡಿದ್ದ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದು 10 ಕುರಿಗಳು ಸಾವಿಗೀಡಾಗಿವೆ.
ಇಟ್ಟಂಗಿಹಾಳ ಮೂಲದ ವಿಲಾಸ ರಘು ದೊಂಬಾಳೆ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಳ ಸಾವಿನಿಂದ ಲಕ್ಷಾಂತರ ರೂ. ನಷ್ವವಾಗಿದೆ.
ಸಿಡಿಲು ಬಡಿದು ಕುರಿ, ಮೇಕೆ, ಎತ್ತು, ಎಮ್ಮೆಗಳು ಮೃತಪಟ್ಟ ಸಂದರ್ಭದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಬೇಕು. ಬಾಧಿತ ರೈತರಿಗೆ ತುರ್ತಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆಯಲ್ಲಿ ಪರಿಹಾರ ವಿತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.