Advertisement

Vijayapura: ಅತಿಥಿ ಉಪನ್ಯಾಸಕರಿಂದ ಸೇವೆ ಖಾಯಂಗೆ ರಕ್ತದಾನ ಚಳುವಳಿ

07:14 PM Dec 27, 2023 | Vishnudas Patil |

ವಿಜಯಪುರ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂ ಮಾಡುವಂತೆ ಆಗ್ರಹಿಸಿ ರಕ್ತದಾನ ಚಳುವಳಿ ಮಾಡಿ ಗಮನ ಸೆಳೆದಿದ್ದಾರೆ. ಈ ಮಧ್ಯೆ ಅನಿರ್ಧಿಷ್ಟಾವಧಿ ಮುಷ್ಕರ ಬುಧವಾರ 34ನೇ ಕಾಲಿರಿಸಿದೆ.

Advertisement

ರಾಜ್ಯದ 420 ಕ್ಕೂ ಹೆಚ್ಚು ಕಾಲೇಜಿನಲ್ಲಿ ಕಳೆದ 15-20 ರ್ವಗಳಿಂದ ಸೇವೆ ಸಲ್ಲಿಸುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಉಪನ್ಯಾಸಕರು ತಮ್ಮ ಸೇವೆ ಖಾಯಂ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಹಿಂದಿನ ಸರ್ಕಾರಗಳು ಹಾಗೂ ಹಾಲಿ ಸರ್ಕಾರ ಸೇರಿದಂತೆ ಎಲ್ಲರೂ ಅತಿಥಿ ಉಪನ್ಯಾಸಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಸೇವೆ ನಮ್ಮ ಸೇವೆ ಪಡೆಯುತ್ತಿರುವ ಸರ್ಕಾರ ನಮಗೆ ಉದ್ಯೋಗ ಭಧ್ರತೆ ನೀಡಬೇಕು. ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರೂ ಸರ್ಕಾರ ಗಂಭೀರವಾಗಿಲ್ಲ ಎಂದು ಕಿಡಿ ಕಾರಿದರು.

ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಡಾ.ಆನಂದ ಕುಲಕರ್ಣಿ, ರಮೇಶ ಕಡೇಮನಿ, ಡಾ.ರಾಜು ಚವ್ಹಾಣ, ಎಂ.ಬಿ.ಪಾಟೀಲ, ರಮೇಶ ತೇಲಿ, ರಮೇಶ ನಾಗರಡ್ಡಿ, ರಾಜು ದಾಯಗೊಂಡ, ರೇಣುಕಾ ಹೆಬ್ಬಾಳ, ಸುರೇಖಾ ಪಾಟೀಲ, ಭಾರತಿ ಇನಾಮದಾರ, ಭಾರತಿ ಹಿರೇಮಠ, ಶಿಲ್ಪಾ ಉಕ್ಕಲಿ, ವೀಣಾ ಕಡಕೆ, ಭಾರತಿ ಹೊನವಾಡ, ಕೆ.ಎ.ಪಾಟೀಲ, ಎಸ್.ಐ.ಯಂಭತ್ನಾಳ, ಎಲ್.ಎ.ಪಾಟೀಲ, ಎಂ.ಆರ್. ತಿಪಶೆಟ್ಟಿ, ಮಂಜುಳಾ ಭಾವಿಕಟ್ಟಿ, ಉಮೇಶ ಹಿರೇಮಠ, ಮಹಾಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಮೊರೆ, ಆನಂದ ಹಿರೇಮಠ, ಸುನೀಲ ಅಂಗಡಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next