Advertisement

Vijayapura: ಭೀರಪ್ಪ ವಗ್ಗಿಗೆ ಬಿಲಿಯನೇರ ರೈತ ಪ್ರಶಸ್ತಿ

06:14 PM Dec 08, 2023 | Team Udayavani |

ಇಂಡಿ: ಕೃಷಿಯಿಂದಲೇ ವಾರ್ಷಿಕ ಒಂದು ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಇಂಡಿ ತಾಲೂಕಿನ ತಾಂಬಾ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ, ಕಬ್ಬು, ದ್ರಾಕ್ಷಿ ಬೆಳೆಗಾರ ಸಮಗ್ರ ಕೃಷಿಯ ರೂವಾರಿ ಭೀರಪ್ಪ ವಗ್ಗಿ ಅವರಿಗೆ ಕೇಂದ್ರ ಸರಕಾರ ನೀಡುವ ಬಿಲಿಯನೇರ ರೈತ ಪ್ರಶಸ್ತಿಯನ್ನು ಕೇಂದ್ರ ಸಚಿವ ನೀತಿನ ಗಡ್ಕರಿ ಗುರುವಾರ ನವದೆಹಲಿಯಲ್ಲಿ ಪ್ರದಾನ ಮಾಡಿದರು.

Advertisement

ನವದೆಹಲಿಯಲ್ಲಿ ಜಂತರ ಮಂತರನಲ್ಲಿ ನವದೆಹಲಿ ಕೃಷಿ ಕೇಂದ್ರ ಸಚಿವಾಲಯದಿಂದ ನಡೆದ ಕಾರ್ಯಕ್ರಮದಲ್ಲಿ ಭೀರಪ್ಪ ವಗ್ಗಿ ಅವರು ಪ್ರಶಸ್ತಿ ಸ್ವೀಕರಿಸಿದರು. ಗುಜರಾತ್‌ ರಾಜ್ಯದ ರಾಜ್ಯಪಾಲ ಆಚಾರ್ಯ ದೇವರಥ, ನವ ದೆಹಲಿಯ ರಾಜ್ಯಪಾಲ ವಿನಯಕುಮಾರ ಸಕ್ಷೆನಾ, ಕೇಂದ್ರ ಕೃಷಿ ಮಂತ್ರಾಲಯದ ಮುಖ್ಯಸ್ಥ ಮನಿಷಾ ಸಕ್ಸೆನಾ ಮತ್ತು ದೆಹಲಿ ಕೃಷಿ ವಿದ್ಯಾಲಯದ ಕುಲಪತಿ ಎ.ಕೆ.ಸಿಂಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಭೀರಪ್ಪ ವಗ್ಗಿಯವರು ಕನ್ನಡದಲ್ಲಿ ಮಾತನಾಡಿ, ನಿಂಬೆ ಅಗಿಗಳನ್ನು ಮಾರಿ ವರ್ಷಕ್ಕೆ ಎರಡು ಕೋಟಿ ಆದಾಯ ತರುವ ರೀತಿ ಮತ್ತು ನಿಂಬೆ ಬೆಳೆಯ ಕುರಿತು ಮಾತನಾಡಿದರು. ಅದನ್ನು ಕರ್ನಾಟಕದ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಿಂದಿಗೆ ಅನುವಾದಿಸಿದ್ದಾರೆ.

ಗಡ್ಕರಿಗೆ 50 ಲಿಂಬೆ ಹಸ್ತಾಂತರ: ನಿತಿನ್‌ ಗಡ್ಕರಿ ಅವರಿಗೆ ತಮ್ಮ ಸ್ವಂತ ಹೊಲದಲ್ಲಿ ಬೆಳೆದ 50 ಲಿಂಬೆ ಹಣ್ಣುಗಳನ್ನು ಬೀರಪ್ಪ ವಗ್ಗಿ ಅವರು ನೀಡಿ, ಇದು ಇಂಡಿ ಲಿಂಬೆ ಎಂದು ಲಿಂಬೆಯ ವೈಶಿಷ್ಟ್ಯದ ಕುರಿತು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next