Advertisement

ಭೈರಗೊಂಡ ಹತ್ಯೆ ಯತ್ನ ಪ್ರಕರಣದ ಮತ್ತೊಬ್ಬ ಆರೋಪಿ ಬಂಧನ: ಸೊತ್ತು ವಶ

08:38 PM Nov 22, 2020 | sudhir |

ವಿಜಯಪುರ : ನವೆಂಬರ್ 2 ರಂದು ಕನ್ನಾಳ ಕ್ರಾಸ್ ಬಳಿ ನಡೆದ ಮಹಾದೇವ ಭೈರಗೊಂಡ ಹತ್ಯೆ ಪ್ರಕರನ ಹಾಗೂ ಇನ್ನಿಬ್ಬರ ಹತ್ಯೆ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ಮತ್ತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಬಂಧಿತನನ್ನು ನಗರದ ಬಂಬಲ ಅಗಸಿ ನಿವಾಸಿ 23 ವರ್ಷದ ಶ್ರೀಶೈಲ ಸಿದ್ದಪ್ಪ ಡಾಂಗಿ ಎಂದು ಗುರುತಿಸಲಾಗಿದೆ.

ಬಂಧಿತನಿಂದ ಒಂದು ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು, ಕೃತ್ಯಕ್ಕೆ ಬಳಸಿದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಬಂಧಿಸಿರುವ ಪ್ರಕರಣದ ತನಿಖಾ ತಂಡದ ಪೊಲೀಸರು, ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾಗಿ ಎಸ್ಪಿ ಅನುಪಮ್ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next