Advertisement

ಅರಕೇರಿ ಗುಡ್ಡದಲ್ಲಿ ಅಮೋಘ ಭಂಡಾರ

05:01 PM Nov 27, 2019 | Naveen |

ವಿಜಯಪುರ: ನಾಡಿನ ಪ್ರಮುಖ ಆರಾಧ್ಯ ದೇವತೆಗಳಲ್ಲಿ ಒಂದಾದ ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ತಾಲೂಕಿನ ಅರಕೇರಿ ಗುಡ್ಡದಲ್ಲಿ ನೆಲೆಸಿರುವ ಅಮೋಘ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

Advertisement

ಕಾರ್ತಿಕ ಅಮಾವಾಸ್ಯೆ ದಿನವಾದ ಮಂಗಳವಾರ ಇಡಿ ದಿನ ಜಾತ್ರೆ ಸಡಗರದಲ್ಲಿ ಪಾಲ್ಗೊಳ್ಳಲು ಅರಕೇರಿ ಬೆಟ್ಟದಲ್ಲಿ ಸೇರಿದ್ದ ಅಸಂಖ್ಯಾತ ಭಕ್ತರು, ಭಕ್ತಿಯಿಂದ ಅಮೋಘ ಸಿದ್ಧನಿಗೆ ಪೂಜೆ, ನೈವೇದ್ಯ ಸಲ್ಲಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಕಣ್ಣು ಹಾಯಿಸಿದಲ್ಲೆಲ್ಲ ಕಂಡು ಬರುತ್ತಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿದ್ದರೂ ಶಿಸ್ತು, ಸಂಯಮ, ಭಕ್ತಿ-ಭಾವದಿಂದ ವರ್ತಿಸಿ ಸಾಲುಗಟ್ಟಿ ನಿಂತು ತಮ್ಮ ಆರಾಧ್ಯದೈವ ಅಮೋಘ ಸಿದ್ದೇಶ್ವರನ ದರ್ಶನ ಪಡೆದರು.

ಸಂಜೆ ನಡೆದ ಉತ್ಸವದಲ್ಲಿ ಭಂಡಾರದ ಒಡೆಯ ಅಮೋಘ ಸಿದ್ದೇಶ್ವರನ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಅರ್ಚಕರು ಭಂಡಾರ ಎರಚುತ್ತಿದ್ದಂತೆ ಭಕ್ತರು ಹುಚ್ಚೆದ್ದು ಕುಣಿದು ಭಕ್ತಿ ಸಮರ್ಪಿಸಿದರು. ನೆರೆದ ಭಕ್ತರು ಸಹ ಅಮೋಘಸಿದ್ಧ ಹಾಗೂ ಪರಸ್ಪರ ಭಕ್ತರು, ಸ್ನೇಹಿತರಿಗೆ ಭಂಡಾರ ಎರಚಿ ಸಂಭ್ರಮದಿಂದ ಉತ್ಸವ ಆಚರಿಸಿದರು. ಪರಿಣಾಮ ಭಂಡಾರದ ಒಡೆಯನ ಇಡಿ ಕ್ಷೇತ್ರ ಎಲ್ಲೆಲ್ಲೂ ಸ್ವರ್ಣಮಯವಾಗಿತ್ತು. ಸಂಜೆಯ ಸೂರ್ಯ ಭಂಡಾರದ ಹೊಳಪನ್ನು ಮತ್ತಷ್ಟು ಹೆಚ್ಚಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next