ವಿಜಯಪುರ: ಜಿಲ್ಲೆಯ ಹಲವೆಡೆ ಬಾರಿ ಸದ್ದಿನೊಂದಿಗೆ ಭೂಕಂಪದ ಅನುಭವದಿಂದ ಜನರು ಮನೆಗಳಿಂದ ಓಡಿ ಬಂದಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಆಲಮೇಲ, ಸಿಂದಗಿ ತಾಲೂಕಿನ ದೇವಣಗಾಂವ, ಸೊನ್ನ, ಅಫ್ಜಲಪುರ, ಆಲಮೇಲ, ಕುಮಸಗಿ, ಬಮ್ಮನಳ್ಳಿ, ಕಡ್ಲೇವಾಡ, ಶಂಬೇವಾಡ, ಮೊರಟಗಿ ಗ್ರಾಮ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಭೂಕಂಪನದ ಅನುಭವ ಆಗಿದೆ.
ವಿಜಯಪುರ ಜಿಲ್ಲೆಯ ಆಲಮೇಲ, ಕಲಬುರಗಿ ಜಿಲ್ಲೆಯ ಅಫಜಲಪುರ ಮಧ್ಯೆ ಕೇಳಿ ಬಂದಿರುವ ಭಾರಿ ಸದ್ದಿಗೆ ಎರಡೂ ಜಿಲ್ಲೆಯ ಜನರು ಆತಂಕ್ಕೀಡಾಗಿದ್ದಾರೆ.
ಇದರಿಂದ ಬೆಚ್ಚಿಬಿದ್ದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಭಾರೀ ಪ್ರಮಾಣದಲ್ಲಿ ಸ್ಫೋಟಕ ರೀತಿಯ ಸದ್ದು ಕೇಳಿ ಬಂದಿದೆ. ಹೀಗಾಗಿ ಗ್ರಾಮಸ್ಥರು, ಬೈಕ್ ತೆಗೆದುಕೊಂಡು ಸುತ್ತಲಿನ ಹೊಲಗಳಲ್ಲಿ ಸದ್ದು ಮಾಡಿದ ವಸ್ತುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಬೆಳಿಗ್ಗೆ 10.30ಕ್ಕೆ ಸಿಂದಗಿ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ನಲ್ಲಿಯೂ ಇದರ ಸಣ್ಣ ಪ್ರಮಾಣದ ಅನುಭವ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ಸಹ ಕೆಲಕಾಲ ಬೆಚ್ಚಿ ಬಿದ್ದಿದ್ದಾರೆ. ಇನ್ನು ಬ್ಯಾಂಕ್ ಪಕ್ಕದಲ್ಲಿರುವ ಝರಾಕ್ಸ್ ಅಂಗಡಿಯ ಮಾಲೀಕನಿಗೂ ಇದರ ಅನುಭವ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.