Advertisement

ವಿಜಯಪುರ : ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿ ಸಾವು

09:50 AM Oct 24, 2019 | sudhir |

ವಿಜಯಪುರ : ಆಟವಾಡಲು ಹೋಗಿದ್ದ 8 ವರ್ಷದ ಬಾಲಕಿಯೊಬ್ಬಳು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಜಲ್ಲೆಯ ಇಂಡಿ ತಾಲೂಕಿನಲ್ಲಿ ಜರುಗಿದೆ.

Advertisement

ಮೃತ ಬಾಕಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡುಗುಡಿ ವಸ್ತಿಯ ಪ್ರೇಮಾ ಮುತ್ತಗಿ ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ ಕೃಷಿ ಹೊಂಡದ ಬಳಿ ಆಟವಾಡಲು ತೆರಳಿದ್ದ ಬಾಲಕಿ ರಕ್ಷಣಾ ಬೇಲಿ ಇಲ್ಲದ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದಾಗ ಈ ದುರ್ಘಟನೆ ಜರುಗಿದೆ.

ಮೃತ ಬಾಲಕಿಯ ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿದೆ. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next