Advertisement

ಕೋವಿಡ್‌ ಕರ್ಫ್ಯೂಗೆ ಸೂಕ್ತ ಸ್ಪಂದನೆ

10:43 PM Apr 29, 2021 | Shreeraj Acharya |

ವಿಜಯಪುರ: ರಾಜ್ಯದಲ್ಲಿ ಕೋವಿಡ್‌ ನಿಗ್ರಹಕ್ಕಾಗಿ ಸರ್ಕಾರ ಘೋಷಿಸಿರುವ ಕೋವಿಡ್‌ ಕರ್ಫ್ಯೂ ಬುಧವಾರದಿಂದ ಜಾರಿಗೆ ಬಂದಿದೆ. ಕರ್ಫ್ಯೂ ಮೊದಲ ದಿನ ಬಸವನಾಡಿನಲ್ಲಿ ಜನರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಇದರ ಮಧ್ಯೆಯೂ ಅಲ್ಲಲ್ಲಿ ಕೆಲವರು ನಿಯಮ ಮೀರಿ ಬೈಕ್‌, ಆಟೋ, ಕಾರುಗಳಲ್ಲಿ ಬೀದಿಗೆ ಬಂದಿದ್ದು ಅಂಥವರ ವಾಹನ ಜಪ್ತಿ ಮಾಡಿಕೊಂಡು, ದಂಡ ವಿ ಧಿಸಿದ ಘಟನೆಗಳೂ ಕಂಡು ಬಂದವು.

Advertisement

ಬೆಳಗ್ಗೆ 10ರಿಂದ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಬೆಳಗ್ಗೆ 6ರಿಂದ 10ರವರೆಗೆ ವಹಿವಾಟು ನಡೆಸಿದ ದಿನಸಿ ಅಂಗಡಿ ವ್ಯಾಪಾರಿಗಳು ನಂತರ ಅಂಗಡಿಗಳನ್ನು ಬಂದ್‌ ಮಾಡಿದರು. ಕೋವಿಡ್‌ ಹಾಗೂ ಇತರೆ ರೋಗಿಗಳು, ತುರ್ತು ಕೆಲಸಗಳಿಗೆ ಹೊರ ಬಂದವರು, ಕೋವಿಡ್‌ ಹಾಗೂ ಇತರೆ ಸೇವಾ ನಿರತರ ಹೊರತಾಗಿ ಸಾರ್ವಜನಿಕರು ಮುಕ್ತವಾಗಿ ಹೊರ ಬರದ ಕಾರಣ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇದಲ್ಲದೇ ಎಎಸ್ಪಿ ಡಾ| ರಾಮ ಅರಸಿದ್ಧಿ ನೇತೃತ್ವದಲ್ಲಿ ಪೊಲೀಸರು ನಗರದ ಬಹುತೇಕ ಎಲ್ಲ ದ್ವಿಮುಖ ಮಾರ್ಗಗಳನ್ನು ಬ್ಯಾರಿಕೇಡ್‌ ಹಾಕಿ ಮುಚ್ಚಲಾಗಿತ್ತು. ತುರ್ತು ಹಾಗೂ ಸೇವಾ ನಿರತರ ಸಂಚಾರಕ್ಕೆ ಮಾತ್ರ ಅನುವಾಗುವಂತೆ ಬ್ಯಾರಿಕೇಡ್‌ ತೆರೆದು ಪರಿಶೀಲನೆ ಬಳಿಕವೇ ಹೋಗಲು ಅನುವು ಮಾಡಿಕೊಡುತ್ತಿದ್ದರು.

ಇದರ ಹೊರತಾಗಿ ಬೇಕಾಬಿಟ್ಟಿ ರಸ್ತೆಗಳಲ್ಲಿ ಓಡಾಟ ನಡೆಸಿದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಲು ಮುಂದಾಗಿದ್ದರು. ನಗರದ ಪ್ರಮಖ ಬಡಾವಣೆಗಳ ಪ್ರವೇಶ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಹಾಕಿ ಸಂಪರ್ಕ ಕಡಿತ ಮಾಡಿದ್ದರು. ಅಲ್ಲದೇ ಪೊಲೀಸ್‌ ಅಧಿಕಾರಿಗಳು ಆಯಾ ಬಡಾವಣೆಗಳಲ್ಲಿ ಪೆಟ್ರೋಲಿಂಗ್‌ ಕಾರ್ಯ ನಡೆಸುತ್ತಿದ್ದಾರೆ. ಗುರುತಿನ ಪತ್ರಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಿಯೇ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ತುರ್ತು ಕೆಲಸಕ್ಕೆ ಮಾತ್ರ ಅವಕಾಶ ನೀಡುತ್ತಿರುವ ಪೊಲೀಸರು ಪ್ರತಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕರ್ಫ್ಯೂ ನಿಯಮ ಮೀರಿ ರಸ್ತೆಗೆ ಇಳಿದ ಬೈಕ್‌, ಆಟೋ, ಕಾರುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ನೆಪಗಳನ್ನು ಹೇಳಲು ಮುಂದಾದವರಿಗೆ ಲಾಠಿ ರುಚಿಯನ್ನೂ ತೋರಿಸುತ್ತಿರುವ ಪೊಲೀಸರು, ಹಲವರಿಗೆ ಎಚ್ಚರಿಕೆ ನೀಡಿದ್ದಾರೆ. ಸುಖಾಸುಮ್ಮನೇ ಬೀದಿಗೆ ಇಳಿದವರ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

ಸ್ವಯಂ ಎಸ್ಪಿ ಅವರೇ ಕಾರ್ಯಾಚರಣೆಗೆ ಇಳಿದಿರುವ ಪರಿಣಾಮ ಕರ್ಫ್ಯೂ ಮೊದಲ ದಿನವೇ ಸುಮಾರು 50ಕ್ಕೂ ಹೆಚ್ಚು ಆಟೋಗಳು, 100ಕ್ಕೂ ಹೆಚ್ಚು ಬೈಕ್‌, ಹಲವು ಕಾರು  ವಶಕ್ಕೆ ಪಡೆದಿದ್ದು ಹಲವರಿಗೆ ದಂಡವನ್ನೂ ವಿ ಧಿಸಿದ್ದಾರೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿರುವ ಮಹಾತ್ಮ ಗಾಂಧಿ ವೃತ್ತ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ, ಕಿತ್ತೂರು ಚನ್ನಮ್ಮ ಮಾರುಕಟ್ಟೆ, ನೆಹರು ಮಾರುಕಟ್ಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ನಿತ್ಯವೂ ಕಂಡು ಬರುತ್ತಿದ್ದ ಜನದಟ್ಟಣೆ ಇಲ್ಲದೇ ವಾಣಿಜ್ಯ ಪ್ರದೇಶಗಳು ಭಣಗುಡುತ್ತಿದ್ದವು. ಇನ್ನು ಕರ್ಫ್ಯೂ ಪರಿಸ್ಥಿತಿ ಅವಲೋಕಿಸುವುದಕ್ಕೆ ಸ್ವಯಂ ರಸ್ತೆಗೆ ಇಳಿದಿದ್ದ ಎಸ್ಪಿ ಅನುಪಮ ಅಗರವಾಲ್‌, ಗಾಂಧಿ ವೃತ್ತದಲ್ಲಿ ಕೆಲ ಕಾಲ ಪರಿಸ್ಥಿತಿ ಪರಿಶೀಲಿಸಿದರು.

Advertisement

ಈ ಹಂತದಲ್ಲಿ ಅನಗತ್ಯವಾಗಿ ಬೀದಿಗೆ ಬಂದವರನ್ನು ತಡೆದ ಅವರು, ಹೊರ ಬಂದ ಕಾರಣ ಕೇಳುವ, ಸೇವಾ ನಿರತರು ಎಂದು ಹೇಳಿದವರ ಗುರುತಿನ ಚೀಟಿ ಪರಿಶೀಲಿಸಿದರು. ಕರ್ಫ್ಯೂ ನಿಯಮ ಮೀರಿ ಮನೆಯಿಂದ ಹೊರಗೆ ಬಂದರೆ, ವಾಹನಗಳನ್ನು ಜಪ್ತಿ ಮಾಡಿಕೊಳ್ಳುವ ಜೊತೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಎಎಸ್‌ಪಿ ಡಾ| ಶ್ರೀರಾಮ ಅರಸಿದ್ಧಿ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಕೆ.ಸಿ.ಲಕ್ಷ್ಮೀನಾರಾಯಣ, ಟಿ.ಎಸ್‌. ಸುಲ್ಪಿ , ಸಿಪಿಐ ರವೀಂದ್ರ ನಾಯೊRàಡಿ ಸೇರಿದಂತೆ ಹಲವಾರು ಪೊಲೀಸ್‌ ಅ ಧಿಕಾರಿಗಳು ಬಿಗಿ ಕ್ರಮ ಕೈಗೊಂಡಿದ್ದರು. ಈ ವೇಳೆ ಲಾಕ್‌ಡೌನ್‌ ನಿಯಮ ಉಲ್ಲಂಘಿ ಸಿದ 30ಕ್ಕೂ ಹೆಚ್ಚು ಆಟೋ ಚಾಲಕರಿಗೆ ದಂಡ ವಿ ಧಿಸಲಾಯಿತು. ನಾಳೆಯೂ ಇದೇ ರೀತಿ ಏನಾದರೂ ನಿಯಮ ಉಲ್ಲಂಘಿಸಿ ವಾಹನ ರಸ್ತೆಗಳಿಸಿದರೆ ವಾಹನ ಸೀಜ್‌ ಮಾಡಲಾಗುವುದು ಎಂದು ಸಂಚಾರ ವಿಭಾಗದ ಪಿಎಸ್‌ಐ ಕಲ್ಲೂರ ಆಟೋ ಚಾಲಕರಿಗೆ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next