Advertisement

ಪಾಳು ಬಿದ್ದ ಮರಳು ದಾಸ್ತಾನು ಘಟಕ : ನಿರ್ವಹಣೆ ಕೊರತೆಯಿಂದ ಇದ್ದೂ ಇಲ್ಲವಾದ ಘಟಕ

02:31 PM Nov 25, 2020 | sudhir |

ದೇವದುರ್ಗ: ತಾಲೂಕಿನ ಅಮರಾಪುರು ಕ್ರಾಸ್‌ ಹತ್ತಿರದಲ್ಲಿರುವ ಮರಳು ದಾಸ್ತಾನು ಘಟಕ ನಿರ್ವಹಣೆ ಕೊರತೆ ಹಿನ್ನೆಲೆ ಪಾಳು
ಬಿದ್ದಿದೆ. ಆದರೆ, ದಾಸ್ತಾನ ಘಟಕದಿಂದಲೇ ಮರಳು ಸಾಗಣೆ ಮಾಡಬೇಕು ಎಂಬ ನಿಯಮ ಪಾಲನೆ ಆಗದ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದಲೇ ಅಕ್ರಮ ಮರಳು ಸಾಗಣೆ ದಂಧೆ ಎಗ್ಗಿಲ್ಲದೇ ಸಾಗಿದೆ.

Advertisement

ಆರ್‌ಟಿಐ ಕಾರ್ಯಕರ್ತಯೊಬ್ಬರು ಅಕ್ರಮ ಮರಳು ಸಾಗಣೆ ಕುರಿತು ಕೋರ್ಟ್‌ನಲ್ಲಿ ಪ್ರಕರಣ ದಾವೆ ಹೊಡಿದ ಹಿನ್ನೆಲೆ ಅಧಿಕೃತ
ರಾಯಲ್ಟಿ ಪಡೆದು ಮರಳು ಸಾಗಣಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕೃಷ್ಣಾನದಿ ತೀರದ ವ್ಯಾಪ್ತಿಯಿಂದ ಟ್ರಾಕ್ಟರ್‌
ಮೂಲಕ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿದೆ.

ನಿಯಮ ಉಲ್ಲಂಘನೆ: ತಾಲೂಕಿನ ಹೇರುಂಡಿ, ನಿಲವಂಜಿ, ಲಿಂಗದಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ ಮರಳು ಸಾಗಣಿಕೆ ಮಾಡದೇ ಅಮರಾಪುರು ಕ್ರಾಸ್‌ ಹತ್ತಿರದ ಮರಳು ದಾಸ್ತಾನು ಘಟಕದಿಂದ ಪರವಾನಗಿ ಪಡೆದು ಮರಳು ಸಾಗಣೆ ಮಾಡಬೇಕು ಎಂದು ಜಿಲ್ಲಾಡಳಿತ ನಿಯಮ ಜಾರಿಗೆ ತರಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ದಾಸ್ತಾನ ಘಟಕದಿಂದಲೇ ಮರಳು ಸಾಗಣೆ
ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಬದಲಾದ ಅಧಿಕಾರಿಗಳ ನಡೆಯಿಂದಾಗಿ ಮರಳು ದಾಸ್ತಾನು ಘಟಕ ಕೇಳುವವರು ಇಲ್ಲದೇ ಕಾರಣ ಪಾಳು ಬಿದ್ದಿದೆ.

ಎಗ್ಗಿಲ್ಲದೇ ಮರಳು: ಅಕ್ರಮ ಮರಳು ಸಾಗಣೆ ಕುರಿತು ಆರ್‌ಟಿಐ ಕಾರ್ಯಕರ್ತಯೊಬ್ಬರು ಕೋರ್ಟ್‌ನಲ್ಲಿ ಪ್ರಕರಣ ದಾವೆ ಹೊಡಿದ ಹಿನ್ನೆಲೆ ಅಧಿಕೃತ ಮರಳು ಸಾಗಣಿಕೆ ಮಾಡಲು ರಾಯಲ್ಟಿ ಪರವಾನಿ ಬಂದ್‌ ಆಗಿದೆ. ಹೀಗಾಗಿ ಕೋಟ್ಯಂತರ ರೂ.
ವೆಚ್ಚದ ಅಭಿವೃದ್ಧಿ ಕಾಮಗಾರಿ, ಮನೆಗಳ ನಿರ್ಮಾಣಕ್ಕೆ ಮರಳು ಬೇಡಿಕೆ ಹೆಚ್ಚಿದೆ.

Advertisement

ನದಿತೀರದ ಗ್ರಾಮದಲ್ಲಿ ಎಲ್ಲೆಂದರಲ್ಲಿ ಜಮೀನಿನಲ್ಲಿ ಸಂಗ್ರಹಿಸಿದ ಅಕ್ರಮ ಮರಳು ಹಗಲು ರಾತ್ರಿ ಎನ್ನದೇ ಎಗ್ಗಿಲ್ಲದೇ ಸಾಗಣಿಕೆ
ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next